Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪತ್ರಿಕಾಗೋಷ್ಠಿಯಲ್ಲಿ ಸಂಯಮ ಕಳೆದುಕೊಂಡ ಕೊಹ್ಲಿ: ಆನ್‌ಫೀಲ್ಡ್‌ ವರ್ತನೆ ಬಗ್ಗೆ ಪ್ರಶ್ನೆಗೆ ವಿರಾಟ್ ಕೆಂಡ

Virat Kohli Snaps At Reporter, Asks Him To Come Up With Better Question

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರೆಸ್ಸಿವ್ ಆಟಗಾರ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಇತ್ತೀಚೆಗೆ ವಿರಾಟ್ ಕೊಹ್ಲಿ ತಮ್ಮ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿಕೊಂಡಿದ್ದರು. ಆನ್‌ಫೀಲ್ಡ್‌ನಲ್ಲಿ ಸಂಯಮದಿಂದ ವರ್ತಿಸುವುದನ್ನು ರೂಢಿಸಿಕೊಂಡಿದ್ದರು.

ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿ ಸೋಲಿನ ಬಳಿಕ ತಮ್ಮ ವರ್ತನೆಯಿಂದ ಮತ್ತೆ ಪ್ರಶ್ನೆಗೀಡಾಗಿದ್ದಾರೆ. ಆನ್‌ಫೀಲ್ಡ್‌ನಲ್ಲಿನ ವರ್ತನೆಯ ಬಗ್ಗೆ ವಿರಾಟ್ ಕೊಹ್ಲಿ ಪ್ರಶ್ನಿಸಿದ ಪತ್ರಕರ್ತನ ವಿರುದ್ಧವೇ ಗರಂ ಆಗಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಆಗಿದ್ದೇನು ಅನ್ನೋದನ್ನು ಮುಂದೆ ಓದಿ:

ಸರಣಿ ಸೋಲಿನ ಬಗ್ಗೆ ಕೊಹ್ಲಿ ಮಾತು

ಸರಣಿ ಸೋಲಿನ ಬಗ್ಗೆ ಕೊಹ್ಲಿ ಮಾತು

ಸರಣಿ ಮುಕ್ತಾಯದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಧ್ಯಮದವರ ಮುಂದೆ ಹಾಜರಾಗಿದ್ದರು. ಸರಣಿ ಸೋಲಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ವಿರಾಟ್ ಅಷ್ಟೇ ಕೂಲ್ ಆಗಿ ಉತ್ತರಿಸುತ್ತಿದ್ದರು. ತಂಡದಿಂದಾಗಿರುವ ತಪ್ಪುಗಳನ್ನು ತಿದ್ದಿಕೊಳ್ಳುವ ಮಾತುಗಳನ್ನೂ ಆಡಿದರು ಕೊಹ್ಲಿ.

ಕೊಹ್ಲಿಗೆ ಎದುರಾಯಿತು 'ಆ' ಪ್ರಶ್ನೆ

ಕೊಹ್ಲಿಗೆ ಎದುರಾಯಿತು 'ಆ' ಪ್ರಶ್ನೆ

ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನಿಗಳು ಬರುತ್ತಿದ್ದರೆ ಕೊಹ್ಲಿ ಅಷ್ಟೇ ಎಚ್ಚರಿಕೆಯಿಂದ ಉತ್ತರವನ್ನು ನೀಡುತ್ತಿದ್ದರು. ಆದರೆ ಆನ್‌ಫೀಲ್ಡ್‌ನಲ್ಲಿ ಕೊಹ್ಲಿ ವರ್ತನೆಯ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನೆಯನ್ನು ಕೇಳಿದರು. ಇದು ಕೊಹ್ಲಿಯನ್ನು ಕೆರಳಿಸಿತು. ಪ್ರಶ್ನೆ ಕೇಳಿದ ಪತ್ರಕರ್ತನಿಗೇ ಮರು ಪ್ರಶ್ನೆ ಹಾಕಿ ಆತನ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದರು ವಿರಾಟ್ ಕೊಹ್ಲಿ

ವಿರಾಟ್ ವರ್ತನೆ ಬಗ್ಗೆ ಪ್ರಶ್ನೆ

ಒಬ್ಬ ಅಂತಾರಾಷ್ಟ್ರೀಯ ತಂಡದ ನಾಯಕನಾಗಿ ಪ್ರೇಕ್ಷಕರತ್ತ ವರ್ತಿಸಿದ ವರ್ತೆ ಸರಿಯೇ ಎಂದು ವಿರಾಟ್ ಕೊಹ್ಲಿಯನ್ನು ಪತ್ರಕರ್ತ ಪ್ರಶ್ನೆ ಮಾಡಿದರು. ಇದಕ್ಕೆ ವಿರಾಟ್ ಕೊಹ್ಲಿ ಗರಂ ಆಗಿ ನಿಮಗೇನು ಅನಿಸುತ್ತೆ ಎಂದು ಮರು ಪ್ರಶ್ನೆಯನ್ನು ಹಾಕಿದರು. ಬಳಿಕ ನಡೆದ ಘಟನೆಯ ಬಗ್ಗೆ ಮಾಹಿತಿಯಿಲ್ಲದೆ ಪ್ರಶ್ನೆಯನ್ನು ಕೇಳಬೇಡಿ. ಮುಂದೆ ಒಳ್ಳೆಯ ಪ್ರಶ್ನೆಯೊಂದಿಗೆ ಬನ್ನಿ ಎಂದು ಉತ್ತರವನ್ನು ನೀಡಿದರು.

ಏನದು ಘಟನೆ?

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ಒಪ್ಪಿಸಿ ಫೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಆಗ ವಿರಾಟ್ ಕೊಹ್ಲಿ ಪ್ರೇಕ್ಷಕರತ್ತ ಅಗ್ರೆಸ್ಸಿವ್ ಆಗಿ ಕೈ ಸನ್ನೆಯನ್ನು ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶ್ನೆಯನ್ನು ಹುಟ್ಟುಹಾಕಿತ್ತು.

ಸೋಲಿನ ಹತಾಷೆ ಕೊಹ್ಲಿಯನ್ನು ಹೀಗೆ ಮಾಡಿತಾ!

ಸೋಲಿನ ಹತಾಷೆ ಕೊಹ್ಲಿಯನ್ನು ಹೀಗೆ ಮಾಡಿತಾ!

ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಎರಡು ಪಂದ್ಯಗಳಲ್ಲೂ ಟೀಮ್ ಇಂಡಿಯಾ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ನಾಯಕ ಮೊದಲಿಗೆ ಈ ಹತಾಷೆಯನ್ನು ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರ ಮೇಲೆ ತೋರಿಸಿದರಾ ಎನ್ನುವ ಚರ್ಚೆಗಳ ಜೊತೆಗೆ ಈಗ ಪತ್ರಕರ್ತನ ವಿರುದ್ಧ ವರ್ತಿಸಿದ ರೀತಿಯೂ ಚರ್ಚೆಗೆ ಒಳಗಾಗಿದೆ.

Story first published: Monday, March 2, 2020, 17:44 [IST]
Other articles published on Mar 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+