ಅತಿ ಹೆಚ್ಚು ಸಂಭಾವನೆ: ಟಾಪ್ 100ರಲ್ಲಿ ಕೊಹ್ಲಿ
ನ್ಯೂಯಾರ್ಕ್, ಜೂನ್ 8: ವಿಶ್ವವಿಖ್ಯಾತ ನಿಯತಕಾಲಿಕೆ, 'ಫೋರ್ಬ್ಸ್', ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಆಟಗಾರರ ಪಟ್ಟಿಯನ್ನು ತಯಾರಿಸಿದ್ದು, ಅದರಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 89ನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಆಟಗಾರರಾಗಿದ್ದಾರೆ.
ಭಾರತೀಯ ಕ್ರಿಕೆಟ್ ರಂಗದ ಅದ್ಭುತ ಎಂದು ಬಣ್ಣಿಸಿರುವ ಫೋರ್ಬ್ಸ್, ಕಳೆದೊಂದು ವರ್ಷದಿಂದ ಕೊಹ್ಲಿ ಪಡೆದಿರುವ ಸಂಭಾವನೆಯ ಮೊತ್ತವನ್ನೂ ಬಹಿರಂಗಪಡಿಸಿದೆ.
ಟೀಂ ಇಂಡಿಯಾದ ನಾಯಕರಾದ ಮೇಲೆ ತಮ್ಮ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿಕೊಂಡಿರುವ ವಿರಾಟ್ ಕೊಹ್ಲಿ, ಹಲವಾರು ಟಿವಿ ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ.
ಮೈದಾನದಲ್ಲಿ ಆಡಲು ನಿಂತರೆಂದರೆ ಬೌಂಡರಿ, ಸಿಕ್ಸರ್ ಗಳ ಸುರಿಮಳೆ ಸುರಿಸುವ ಕೊಹ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಹಾಗಾದರೆ, ಕೊಹ್ಲಿಯವರ ಗಳಿಕೆಯೆಷ್ಟು, ಅವರ ಸಂಭಾವನೆಯ ಲೆಕ್ಕಾಚಾರವೇನು, ಈ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದವರು ಯಾರು ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ.

ಜಾಹೀರಾತಿನಿಂದ ಬಂದಿದ್ದೇ 122 ಕೋಟಿ ರು.!
ಕಳೆದೊಂದು ವರ್ಷದಲ್ಲಿ ವಿರಾಟ್ ಕೊಹ್ಲಿ, 22 ಮಿಲಿಯನ್ ಅಮೆರಿಕನ್ ಡಾಲರ್ ಸಂಪಾದಿಸಿದ್ದಾರೆಂದು ಹೇಳಿದೆ ಫೋರ್ಬ್ಸ್. ಅಂದರೆ, ಭಾರತೀಯ ರುಪಾಯಿಗಳ ಲೆಕ್ಕಾಚಾರದಲ್ಲಿ 141 ಕೋಟಿ ರು.ಗಳನ್ನು ಕೊಹ್ಲಿ ಗಳಿಸಿದ್ದಾರೆ. ಇದರಲ್ಲಿ 192 ಕೋಟಿ ರು. ಆಟಗಾರರ ಸಂಭಾವನೆ ಲೆಕ್ಕದಲ್ಲಿ ಬಂದಿದ್ದು. ಇನ್ನುಳಿದ 122 ಕೋಟಿ ರು. ಜಾಹೀರಾತು ಹಾಗೂ ಇನ್ನಿತರ ಮೂಲಗಳಿಂದ ಬಂದಿದ್ದು ಎಂದು ಫೋರ್ಬ್ಸ್ ವಿವರಿಸಿದೆ.
ಕೊಹ್ಲಿಯವರು ಭಾರತೀಯ ಕ್ರಿಕೆಟ್ ಕಂಡ ಅದ್ಭುತ ಎಂದೆಲ್ಲಾ ಬಣ್ಣಿಸಿರುವ ಫೋರ್ಬ್ಸ್, ಸಚಿನ್ ತೆಂಡೂಲ್ಕರ್ ಅವರ ನಂತರ, ಭಾರತೀಯ ಕ್ರಿಕೆಟ್ ರಂಗದಲ್ಲಿ ಉದಯಿಸಿದ ಆಲ್ ಟೈಮ್ ಸ್ಟಾರ್ ಎಂದು ಬಣ್ಣಿಸಿದೆ.

500 ಕೋಟಿ ರು.ಗೂ ಮೀರಿದೆ ಅವರ ಗಳಿಕೆ
ಅಂದಹಾಗೆ, ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವುದು ಪೋರ್ಚುಗಲ್ ನ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ. ಅವರು ಕಳೆದ ವರ್ಷ ಗಳಿಸಿರುವ ಗಳಿಕೆ 598 ಕೋಟಿ ರು.

ಅಗ್ರ ಮೂರರಲ್ಲಿ ಕಾಣಿಸಿಕೊಂಡ ಬಾಸ್ಕೆಟ್ ಬಾಲ್ ಪಟು
ಇನ್ನು, ಕ್ರಿಶ್ಚಿಯಾನೋ ರೊನಾಲ್ಡೊ ಅವರ ನಂತರದ ಸ್ಥಾನದಲ್ಲಿ ಅಮೆರಿಕದ ಬಾಸ್ಕೆಟ್ ಬಾಲ್ ಸ್ಟಾರ್ ಲೆಬ್ರಾನ್ ಜೇಮ್ಸ್ ಇದ್ದಾರೆ. ಅವರು ಕಳೆದೊಂದು ವರ್ಷದಲ್ಲಿ 554 ಕೋಟಿ ರು. ಗಳಿಸಿದ್ದಾರೆ. ಪಟ್ಟಿಯ ನಾಲ್ಕನೇ ಸ್ಥಾನದಲ್ಲಿ ಅರ್ಜೆಂಟೈನಾದ ಫುಟ್ಬಾಲ್ ಲಿಯೊನೆಲ್ ಮೆಸ್ಸಿ (514 ಕೋಟಿ ರು.) ಇದ್ದಾರೆ.

ಸೆರೆನಾ ಸಹ ಪಟ್ಟಿಯಲ್ಲಿ
ಸ್ವಿಜರ್ಲೆಂಡ್ ನ ಟೆನಿಸ್ ಪಟು ರೋಜರ್ ಫೆಡರರ್ 5ನೇ ಸ್ಥಾನದಲ್ಲಿ (416 ಕೋಟಿ ರು.) ಇದ್ದಾರೆ. ಅಮೆರಿಕದ ಮಾಜಿ ನಂಬರ್ ಒನ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್, 173 ಕೋಟಿ ರು. ಗಳಿಸುವ ಮೂಲಕ 51ನೇ ಸ್ಥಾನದಲ್ಲಿದ್ದಾರೆ.

ಜೊಕೊ, ರಾಫಾ, ಆ್ಯಂತೋನಿ ಕೂಡಾ ಪಟ್ಟಿಯಲ್ಲಿ
ಕಳೆದ ಬಾರಿ ಪಟ್ಟಿಯ ಟಾಪ್ 10 ಆಟಗಾರರಲ್ಲಿದ್ದ ಅಮೆರಿಕದ ಗಾಲ್ಫ್ ಆಟಗಾರ ಟೈಗರ್ ವುಡ್ಸ್, ಈ ಪರಿಷ್ಕೃತ ಪಟ್ಟಿಯಲ್ಲಿ 17ನೇ ಸ್ಥಾನ ಪಡೆದಿದ್ದಾರೆ. ಇನ್ನು, ಪಟ್ಟಿಯಲ್ಲಿರುವ ವಿಶ್ವದ ಇತರ ಕ್ರೀಡಾಪಟುಗಳೆಂದರೆ, ಜೊಕೊವಿಚ್ (ಟೆನಿಸ್ - 16ನೇ ಸ್ಥಾನ), ರಾಫೆಲ್ ನಡಾಲ್ (ಟೆನಿಸ್- 33), ಆ್ಯಂತೋನಿ ಡೇವಿಸ್ (ಬಾಸ್ಕೆಟ್ ಬಾಲ್- 44), ವಾಯ್ನೆ ರೂನಿ (ಫುಟ್ಬಾಲ್ - 70).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications