ವಿರಾಟ್ ಕೊಹ್ಲಿ, ಸೌರವ್ ಗಂಗೂಲಿಗೆ ಹೈ ಕೋರ್ಟ್‌ನಿಂದ ನೋಟಿಸ್

ನವದೆಹಲಿ: ಫ್ಯಾಂಟಸಿ ಗೇಮ್ಸ್ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿರುವುದಕ್ಕಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿಗೆ ಮದ್ರಾನ್ ಹೈಕೋರ್ಟ್ ನೋಟಿಸ್ ನೀಡಿದೆ.
ವಿರಾಟ್ ಕೊಹ್ಲಿ, ಸೌರವ್ ಗಂಗೂಲಿಯಲ್ಲದೆ, ನಟ ಪ್ರಕಾಶ್ ರಾಜ್, ತಮನ್ನಾ, ರಾಣಾ ಮತ್ತು ಸುದೀಪ್ ಖಾನ್‌ಗೂ ನೋಟಿಸ್ ನೀಡಲಾಗಿದೆ. ನೋಟಿಸ್‌ಗೆ ನವೆಂಬರ್ 19ರ ಒಳಗಾಗಿ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ.
'ಈ ಅಪ್ಲಿಕೇಶನ್‌ಗಳು ಐಪಿಎಲ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್‌ನ ಹೆಸರಿನಲ್ಲಿವೆ ಮತ್ತು ಕೆಲವು ಅಪ್ಲಿಕೇಶನ್‌ಗಳು ರಾಜ್ಯದ ಹೆಸರಿನಲ್ಲಿವೆ. ಈ ತಂಡಗಳು ರಾಜ್ಯದ ಪರವಾಗಿ ಆಡುತ್ತಿದೆಯೇ?' ಪೀಠ ಹೇಳಿರುವುದಾಗಿ ಕ್ರಿಕೆಟ್ ನೆಕ್ಸ್ಟ್ ವರದಿ ಮಾಡಿದೆ.
ಫ್ಯಾಂಟಿಸಿ ಸ್ಫೋರ್ಟ್ಸ್‌ನಂತ ವೇದಿಕೆಗಳಲ್ಲಿ ಆಡಿ ಹಣ ಕಳೆದುಕೊಂಡು ಕೆಲ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದು ವರದಿಯಾದ ಬಳಿಕ ವಕೀಲ ಮೊಹಮ್ಮದ್ ರಿಝ್ವಿ ಅವರು ಫ್ಯಾಂಟಸಿ ಗೇಮ್ಸ್‌ಗೆ ಪ್ರಚಾರ ನೀಡುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications