Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿ ಈಗಲೂ ಭಾರತದ ಟಾಪ್ 1 ಜನಪ್ರಿಯ ವ್ಯಕ್ತಿ

Virat Kohli still Indias Top most valuable celebrity

ನವದೆಹಲಿ: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈಗಲೂ ಭಾರತ ಟಾಪ್ ಜನಪ್ರಿಯ ವ್ಯಕ್ತಿಗಳ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸತತ ನಾಲ್ಕನೇ ವರ್ಷ ಕೊಹ್ಲಿ ಭಾರತದ ಟಾಪ್ 1 ಸೆಲೆಬ್ರಿಟಿಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು. ದ್ವಿತೀಯ ಸ್ಥಾನದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದ್ದಾರೆ.

2020ರ ವರ್ಷದಲ್ಲಿ ಕೊರೊನಾವೈರಸ್ ಹೊರತಾಗಿಯೂ ರನ್ ಮಷಿನ್ ವಿರಾಟ್ ಕೊಹ್ಲಿಯ ಬ್ರ್ಯಾಂಡ್‌ ವ್ಯಾಲ್ಯೂ 237.7 ಮಿಲಿಯನ್ ಡಾಲರ್ (17,34,22,94,875 ರೂ.) ಇದೆ. ದ್ವಿತೀಯ ಸ್ಥಾನದಲ್ಲಿರುವ ಅಕ್ಷಯ್ ಕುಮಾರ್ ಬ್ರ್ಯಾಂಡ್‌ ವ್ಯಾಲ್ಯೂ 118.9 ಮಿಲಿಯನ್ ಡಾಲರ್ (8,67,47,47,815 ರೂ.).

ತೃತೀಯ ಸ್ಥಾನದಲ್ಲಿರುವ ಮತ್ತೊಬ್ಬ ಬಾಲಿವುಡ್ ನಟ ರಣವೀರ್ ಸಿಂಗ್ ಬ್ರ್ಯಾಂಡ್‌ ವ್ಯಾಲ್ಯೂ 102.9 ಮಿಲಿಯನ್ ಡಾಲರ್ (7,51,07,37,885 ರೂ.). ಕಳೆದ ನಾಲ್ಕು ವರ್ಷಗಳಿಂದಲೂ ಕೊಹ್ಲಿ ಸರಿಸುಮಾರು ಒಂದೇ ರೀತಿಯ ಮತ್ತು ಉತ್ತಮ ಬ್ರ್ಯಾಂಡ್‌ ವ್ಯಾಲ್ಯೂನಲ್ಲೇ ಮುಂದುವರೆಯುತ್ತಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಫೆಬ್ರವರಿ 5ರಿಂದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಟೆಸ್ಟ್ ಸರಣಿ ಮುಕ್ತಾಯದ ಬಳಿಕ 5 ಪಂದ್ಯಗಳ ಟಿ20ಐ ಮತ್ತು 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

Story first published: Friday, February 5, 2021, 10:13 [IST]
Other articles published on Feb 5, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+