ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಕನಸು ಭಗ್ನ

By Mahesh
Virat Kohli suffers slipped disc, to miss Surrey stint

ಬೆಂಗಳೂರು, ಮೇ 24: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಇಂಗ್ಲೆಂಡಿನ ಕೌಂಟಿ ಕ್ರಿಕೆಟ್ ನಲ್ಲಿ ಆಡುವ ಕನಸು ಭಗ್ನಗೊಂಡಿದೆ. ಮುಂಬೈನಲ್ಲಿ ಕೊಹ್ಲಿ ಗಾಯಗೊಂಡಿದ್ದು, ಖಾರ್ ನಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿರುವ ಬಗ್ಗೆ ವರದಿಗಳು ಬಂದಿವೆ.

ಮುಂಬೈ ಮಿರರ್ ಪ್ರಕಾರ ಕೊಹ್ಲಿಗೆ ಸ್ಪಿಪ್ ಡಿಸ್ಕ್(Herniated disc) ಆಗಿದ್ದು, ಬುಧವಾರದಂದು ಆಸ್ಪತ್ರೆಯ ಆರ್ಥೋಪೆಡಿಕ್ ತಜ್ಞರ ಸಲಹೆ ಪಡೆದುಕೊಂಡಿದ್ದಾರೆ. ಸ್ನಾಯುಸೆಳೆತದಿಂದ ಬಳಲುತ್ತಿರುವ ಕೊಹ್ಲಿಗೆ ವಿಶ್ರಾಂತ್ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

ಮೋದಿಗೆ ಕೊಹ್ಲಿ ಫಿಟ್ನೆಸ್ ಚಾಲೆಂಜ್: ಸವಾಲು ಸ್ವೀಕರಿಸಿದ ಪ್ರಧಾನಿ

ಹೀಗಾಗಿ, ಗಾಯ ಉಲ್ಬಣವಾಗದಂತೆ ನೋಡಿಕೊಳ್ಳಲು ಕೆಲ ಪಂದ್ಯಗಳನ್ನು ಕೊಹ್ಲ್ ಆಡದಿರಬಹುದು. ಸದ್ಯಕ್ಕೆ ಸರ್ಜರಿಯ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಮುಂಜಾಗರೂಕತೆಯಿಂದ ಸರೆ ಪರ ಆಡುವ ಪಂದ್ಯಗಳನ್ನು ಕೊಹ್ಲಿ ತಪ್ಪಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ

ಅಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಸಿದ್ಧರಾಗಬೇಕಿದೆ. ಗಾಯಗೊಂಡಿರುವುದರಿಂದ ಕೌಂಟಿ ಆಡುವುದು ಅನುಮಾನ ಎಂದು ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನು ಮಿರರ್ ಉಲ್ಲೇಖಿಸಿದೆ.

ಸಚಿನ್ ನಿಂದಲೂ ಆಗದ್ದನ್ನು ಕೊಹ್ಲಿ ಮಾಡುತ್ತಿದ್ದಾರೆ: ಶೇನ್ ವಾರ್ನ್ ಸಚಿನ್ ನಿಂದಲೂ ಆಗದ್ದನ್ನು ಕೊಹ್ಲಿ ಮಾಡುತ್ತಿದ್ದಾರೆ: ಶೇನ್ ವಾರ್ನ್

2014ರ ಇಂಗ್ಲೆಂಡ್ ಪ್ರವಾಸದ ವೇಳೆ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ದಾಳಿ ವಿರುದ್ಧ ಕೊಹ್ಲಿ ಬ್ಯಾಟಿಂಗ್ ಮಾಡಲು ತಿಣುಕಾಡಿದ್ದರು. ಐದು ಟೆಸ್ಟ್ ಪಂದ್ಯಗಳಿಂದ 13.4 ರನ್ ಸರಾಸರಿಯತೆ 134ರನ್ ಮಾತ್ರ ಗಳಿಸಿದ್ದರು. ಹೀಗಾಗಿ, ಈ ಬಾರಿ ಹೆಚ್ಚಿನ ಕಾಳಜಿ ವಹಿಸಿ ಅಭ್ಯಾಸ ಪಡೆದುಕೊಳ್ಳಲು ಸರೆ ಕೌಂಟಿ ಪರ ಆಡಲು ಮುಂದಾಗಿದ್ದರು.

Story first published: Thursday, May 24, 2018, 13:49 [IST]
Other articles published on May 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X