Virat Kohli: ಕ್ಯಾಚ್ ಮಾಸ್ಟರ್' ವಿರಾಟ್ ಕೊಹ್ಲಿ ದಾಖಲೆ
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ನಡೆಸಿತು. ಈ ವೇಳೆ ಟೀಮ್ ಇಂಡಿಯಾದ ಆರಂಭಿಕ ಆಟಗಾರರು ಅಬ್ಬರ ನಡೆಸುವ ಸೂಚನೆ ನೀಡಿದರು. ಆಗ ಭಾರತದ ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳು ಕಾಟ ನೀಡಿದರು. ಈ ವೇಳೆ ಟ್ರಾವಿಸ್ ಹೆಡ್ ಅವರ ಆಟಕ್ಕೆ ವರುಣ್ ಚಕ್ರವರ್ತಿ ಬ್ರೇಕ್ ಹಾಕಿದರು.
ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದಾಖಲೆಯನ್ನು ಬರೆದರು. ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಸಾಧನೆಯನ್ನು ಈ ಹಿಂದೆ ಇವರು ಮಾಡಿದ್ದರು. ಈಗ ಮತ್ತೊಂದು ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದರು. ಈ ಮೂಲಕ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ರಿಕ್ಕಿ ಪಾಂಟಿಂಗ್ ಅವರ ದಾಖಲೆಯನ್ನು ಮೀರಿದರು.

ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದಾಗಲೆಲ್ಲಾ ದಾಖಲೆ ನಿರ್ಮಾಣವಾಗಿತ್ತು. ಈ ಪಂದ್ಯದಲ್ಲಿ ಇವರು ರವೀಂದ್ರ ಜಡೇಜಾ ಎಸೆತದಲ್ಲಿ ಜೋಶ್ ಇಂಗ್ಲಿಸ್ ಮಿಡ್ ಆಫ್‌ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಅವರಿಗೆ ಕ್ಯಾಚ್ ನೀಡಿದರು. ಈ ಮೂಲಕ ವಿರಾಟ್, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಸರಿಗಟ್ಟಿದ್ದರು.
ದಾಖಲೆ ಬರೆದ ವಿರಾಟ್
ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರಿಕ್ಕಿ ಪಾಂಟಿಂಗ್ ಅವರ ದಾಖಲೆಯನ್ನು ಮೀರಿ ನಿಂತಿದ್ದಾರೆ. ರಿಕ್ಕಿ ಪಾಂಟಿಂಗ್ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 160 ಕ್ಯಾಚ್ ಪಡೆದಿದ್ದಾರೆ. ವಿರಾಟ್ ಇವರ ದಾಖಲೆಯನ್ನು ಮೀರಿ ನಿಂತರು. ನಾಥನ್ ಎಲ್ಲಿಸ್ ಅವರು ಬಾರಿಸಿದ ಚೆಂಡನ್ನು ವಿರಾಟ್ ಕ್ಯಾಚ್ ಪಡೆಯುತ್ತಿದ್ದಂತೆ, ಪಾಂಟಿಂಗ್ ದಾಖಲೆಯನ್ನು ಅಳಿಸಿ ಹಾಕಿದರು.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬರೀ ಬ್ಯಾಟಿಂಗ್ ಅಷ್ಟೇ ಅಲ್ಲ, ಫೀಲ್ಡಿಂಗ್‌ನಲ್ಲೂ ನೆರವಾಗಬಲ್ಲ ಪ್ಲೇಯರ್. ಇವರು ಈಗಾಗಲೇ ಭಾರತದ ಪರ ಆಡಿದ 301 ಏಕದಿನ ಪಂದ್ಯಗಳಲ್ಲಿ 161 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಭಾರತದ ಪರ ಏಕದಿನ ಫಾರ್ಮೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ದಾಖಲೆಯನ್ನು ಬರೆದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಹೆಗ್ಗಳಿಕೆ ಶ್ರೀಲಂಕಾದ ಮಹೇಲ ಜಯವರ್ಧನೆ ಅವರಿಗೆ ಸಲ್ಲುತ್ತದೆ. ಇವರು 448 ಪಂದ್ಯಗಳಲ್ಲಿ 218 ಕ್ಯಾಚ್ ಪಡೆದಿದ್ದಾರೆ.
ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರರು
- ಮಹೇಲ್ ಜಯವರ್ಧನೆ, ಶ್ರೀಲಂಕಾ, 218
- ವಿರಾಟ್ ಕೊಹ್ಲಿ, ಭಾರತ, 161
- ರಿಕ್ಕಿ ಪಾಂಟಿಂಗ್, ಆಸ್ಟ್ರೇಲಿಯಾ, 160
- ಮೊಹಮ್ಮದ್ ಅಜರುದ್ಧಿನ್, ಭಾರತ, 156
- ರಾಸ್ ಟೇಲರ್, ನ್ಯೂಜಿಲೆಂಡ್, 142
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತದ ಆಟಗಾರರು
- ವಿರಾಟ್ ಕೊಹ್ಲಿ, 161
- ಮೊಹಮ್ಮದ್ ಅಜರುದ್ಧಿನ್, 156
- ಸಚಿನ್ ತೆಂಡೂಲ್ಕರ್, 140
- ರಾಹುಲ್ ದ್ರಾವಿಡ್, 124
- ಸುರೇಶ್ ರೈನಾ, 102
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications