Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿ ಮೇಲೆ ನಾಯಕ ಕೊಹ್ಲಿಯೂ ಬೇಸರ, ಏನಾಗಿದೆ ಚಾಲೆಂಜರ್ಸ್‌ಗೆ?!

Virat Kohli surprised by RCBs strange social media antics

ಬೆಂಗಳೂರು, ಫೆಬ್ರವರಿ 13: ಸಾಮಾಜಿಕ ಜಾಲತಾಣದಲ್ಲಿನ ತನ್ನ ಎಲ್ಲಾ ಅಧಿಕೃತ ಖಾತೆಗಳ ಪ್ರೊಫೈಲ್‌ ಪಿಕ್ಚರ್‌ಗಳನ್ನು ತೆರವುಗೊಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಿಲುವು ಅಚ್ಚರಿಗೀಡು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ಕ್ರಿಕೆಟ್‌ ಅಭಿಮಾನಿಗಳು ಇದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಲ್ಲಿನ ಪ್ರೊಫೈಲ್‌ ಪಿಕ್ಚರ್ ತೆಗೆದುಹಾಕಿರುವ ಆರ್‌ಸಿಬಿ ನಡೆಯ ಬಗ್ಗೆ ತಂಡದ ಪ್ರಮುಖ ಆಟಗಾರರಾದ ಎಬಿ ಡಿ ವಿಲಿಯರ್ಸ್, ಯುಜುವೇಂದ್ರ ಚಾಹಲ್ ಮೊದಲಾದವರು ಬೇಸರ ತೋರಿಕೊಂಡಿದ್ದರು.

ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಕೂಡ ಫ್ರಾಂಚೈಸಿ ನಡೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕಾಣೆಯಾದ ಪ್ರೊಫೈಲ್ ಪಿಕ್ಚರ್

ಕಾಣೆಯಾದ ಪ್ರೊಫೈಲ್ ಪಿಕ್ಚರ್

ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಆರ್‌ಸಿಬಿ ಟ್ವಿಟರ್ ಖಾತೆಯ ಪ್ರೊಫೈಲ್ ಪಿಕ್ಚರ್ ಏಕಾಯೇಕಿ ಕಾಣೆಯಾಗಿತ್ತು. ಅನೇಕ ಕ್ರಿಕೆಟ್‌ ಅಭಿಮಾನಿಗಳು, ಕ್ರಿಕೆಟಿಗರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಆರ್‌ಸಿಬಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ದಿನ ಕಳೆದರೂ ಕಾಣೆಯಾದ ಪ್ರೊಫೈಲ್ ಪಿಕ್ಚರ್ ಮತ್ತೆ ಕಾಣಿಸಿಕೊಳ್ಳಲೂ ಇಲ್ಲ.

ಪೋಸ್ಟ್‌ಗಳೂ ಕಣ್ಮರೆ

ಆರ್‌ಸಿಬಿ ಟ್ವಿಟರ್ ಖಾತೆಯ ಪ್ರೊಫೈಲ್ ಪಿಕ್ಚರ್ ಕಾಣದಿದ್ದುದಷ್ಟೇ ಅಲ್ಲ; ಟ್ವಿಟರ್ ಖಾತೆಯ ಎಲ್ಲಾ ಪೋಸ್ಟ್‌ಗಳೂ ಕೂಡ ಮರೆಯಾಗಿದ್ದವು. ಅಂದರೆ ಹೊಸ ಟ್ವಿಟರ್ ಖಾತೆಯೊಂದು ತೆರೆದಾಗ ಇರುವಂತ 'ನೋ ಪೋಸ್ಟ್ ಎಟ್' ಸಂದೇಶ ಆರ್‌ಸಿಬಿ ಟ್ವಿಟರ್‌ನಲ್ಲಿ ಕಾಣಿಸುತ್ತಿತ್ತೇ ಹೊರತೂ ಒಂದೂ ಪೋಸ್ಟ್‌ಗಳೂ ಕಾಣಿಸುತ್ತಿರಲಿಲ್ಲ.

ವಿರಾಟ್ ಕೊಹ್ಲಿ ಬೇಸರ

ವಿರಾಟ್ ಕೊಹ್ಲಿ ಬೇಸರ

ಪ್ರೊಫೈಲ್ ಪಿಕ್ಚರ್ ಕಾಣದಾಗಲೂ ಸುಮ್ಮನಿದ್ದ ನಾಯಕ ವಿರಾಟ್ ಕೊಹ್ಲಿ, ಟ್ವಿಟರ್ ಖಾತೆಯಲ್ಲಿ ಒಂದೂ ಪೋಸ್ಟ್‌ಗಳು ಕಾಣಿಸದಿದ್ದಾಗ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ. 'ಪೋಸ್ಟ್‌ಗಳು ಕಾಣಿಸುತ್ತಿಲ್ಲ, ಈ ಬಗ್ಗೆ ನಾಯಕನಿಗೆ ಏನೂ ಮಾಹಿತಿ ನೀಡಿಲ್ಲ. ನಿಮಗೇನಾದರೂ ಸಹಾಯಬೇಕಿದ್ದರೆ ತಿಳಿಸಿ,' ಎಂದು ಆರ್‌ಸಿಬಿಯನ್ನುದ್ದೇಶಿಸಿ ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.

'ಬೆಂಗಳೂರು' ಕಿತ್ತೊಗೆದಿದ್ದ ಆರ್‌ಸಿಬಿ

'ಬೆಂಗಳೂರು' ಕಿತ್ತೊಗೆದಿದ್ದ ಆರ್‌ಸಿಬಿ

ಈ ಹಿಂದೆ ಟ್ವಿಟರ್ ಖಾತೆಯಿಂದ 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ಹೆಸರಿನಿಂದ ಬೆಂಗಳೂರನ್ನು ತೆಗೆಯಲಾಗಿತ್ತು. ಆರ್‌ಸಿಬಿ ಅಭಿಮಾನಿಗಳು ಅಸಮಾಧಾನ ತೋರಿಕೊಂಡಿದ್ದರು. ಆದರೆ ಟ್ವಿಟರ್ ಖಾತೆಯಲ್ಲಿ 'ಬೆಂಗಳೂರು' ಈಗಲೂ ಸೇರ್ಪಡೆಯಾಗಿಲ್ಲ. ಬಹುಶಃ ಲೋಗೋದಲ್ಲಿ ಬದಲಾವಣೆ ತರುವುದಕ್ಕಾಗಿ ಆರ್‌ಸಿಬಿ ಹೀಗೆ ಮಾಡುತ್ತಿರಬಹುದು. ಆದರೆ ಏನನ್ನೂ ತಿಳಿಸದೆ ಹೀಗೆ ನಡೆದುಕೊಂಡಿದ್ದರ ಬಗ್ಗೆ ಕ್ರಿಕೆಟ್‌ ಅಭಿಮಾನಿಗಳು ಬೇಸರಗೊಂಡಿರುವುದಂತೂ ನಿಜ.

ಪ್ರೊಫೈಲ್ ಪಿಕ್ಚರ್ ಅಪ್‌ಲೋಡಿಂಗ್!

ಪ್ರೊಫೈಲ್ ಪಿಕ್ಚರ್ ಅಪ್‌ಲೋಡಿಂಗ್!

ಕೊಹ್ಲಿ ಅಥವಾ ಉಳಿದ ಆಟಗಾರರಷ್ಟೇ ಅಲ್ಲ, ಐಪಿಎಲ್ ಉಳಿದ ಫ್ರಾಂಚೈಸಿಗಳಾದ ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್‌ ಕೂಡ ಆರ್‌ಸಿಬಿ ನಡೆಗೆ ಅಚ್ಚರಿ ವ್ಯಕ್ತಪಡಿಸಿ ಟ್ವೀಟ್ ಮಾಡಿವೆ. ಈಚೆಗೆ ಗಮನಿಸಿದಾಗ ಆರ್‌ಸಿಬಿ ಜಾಲತಾಣ ಖಾತೆಗಳ ಪ್ರೊಫೈಲ್ ಪಿಕ್ಚರ್ 'ಅಪ್‌ಲೋಡಿಂಗ್' ರೀತಿಯಂತೆ ಕಾಣಿಸುತ್ತಿತ್ತು.

Story first published: Thursday, February 13, 2020, 12:27 [IST]
Other articles published on Feb 13, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+