'ಚಮತ್ಕಾರಿಕ ಕ್ಯಾಚ್'ನಿಂದ ಹ್ಯಾಂಡ್ಸ್‌ಕಾಂಬ್ ಪೆವಿಲಿಯನ್‌ಗಟ್ಟಿದ ವಿರಾಟ್ ಕೊಹ್ಲಿ!

ಪರ್ತ್, ಡಿಸೆಂಬರ್ 14: ಸ್ಲಿಪ್‌ನಲ್ಲಿ ಚಮತ್ಕಾರಿಕ ಕ್ಯಾಚ್ ಮೂಲಕ ಆಸ್ಟ್ರೇಲಿಯಾ ಆಟಗಾರ ಪೀಟರ್ ಹ್ಯಾಂಡ್ಸ್‌ಕಾಂಬ್ ಅವರನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪೆವಿಲಿಯನ್‌ಗೆ ಅಟ್ಟಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ವೇಳೆಯ ಈ ಕ್ಯಾಚ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಒಡಾಡುತ್ತಿದೆ.
ಶುಕ್ರವಾರ (ಡಿಸೆಂಬರ್ 14) ಪ್ರವಾಸಿ ಭಾರತ ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಪರ್ತ್ ಮೈದಾನಕ್ಕಿಳಿದಿತ್ತು. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದಿದ್ದ ಆಸೀಸ್ ಉತ್ತಮ ಆರಂಭವನ್ನು ಕಂಡಿತ್ತು. ಆದರೆ 5ನೇ ಕ್ರಮಾಂಕದಲ್ಲಿ ಬ್ಯಾಟ್ ಕೈಗೆತ್ತಿಕೊಂಡಿದ್ದ ಹ್ಯಾಂಡ್ಸ್‌ಕಾಂಬ್ ಬೇಗನೆ ವಿಕೆಟ್ ಒಪ್ಪಿಸಿದ್ದರು.
54.1ನೇ ಓವರ್‌ನಲ್ಲಿ ಇಶಾಂತ್ ಶರ್ಮಾ ಅವರ ಎಸೆತಕ್ಕೆ ಪೀಟರ್ ಬ್ಯಾಟ್ ಬೀಸಿದರು. ಬ್ಯಾಟ್‌ಗೆ ತಾಕಿದ ಚೆಂಡು ಸ್ಲಿಪ್‌ನಲ್ಲಿ ನಿಂತಿದ್ದ ಪೀಲ್ಡರ್‌ಗಳತ್ತ ಆದರೆ ಕೊಂಚ ಎತ್ತರದಲ್ಲಿ ಸಾಗಿತ್ತು. ಈ ವೇಳೆ ಸೂಪರ್ ಮ್ಯಾನ್ ಸ್ಟೈಲಲ್ಲಿ, ಮಿಂಚಿನ ವೇಗದಲ್ಲಿ ಜಿಗಿದ ಕೊಹ್ಲಿ ಒಂದೇ ಕೈಯಲ್ಲಿ ಚೆಂಡನ್ನು ಕ್ಯಾಚ್ ಮಾಡಿದರು; ಹ್ಯಾಂಡ್ಸ್‌ಕಾಂಬ್ ಔಟಾದರು!
ಕೊಹ್ಲಿಯ ಈ ಅದ್ಭುತ ಕ್ಯಾಚ್‌ನಿಂದಾಗಿ 16 ಎಸೆತಗಳನ್ನು ಎದುರಿಸಿದ ಹ್ಯಾಂಡ್ಸ್‌ಕಾಂಬ್ ಕೇವಲ 7 ರನ್ ಪೇರಿಸಿ ವಿಕೆಟ್ ಒಪ್ಪಿಸಿದರು. ಆದರೆ ಆರಂಭಿಕ ಆಟಗಾರರಾದ ಮಾರ್ಕಸ್ ಹ್ಯಾರಿಸ್ 70, ಆ್ಯರನ್ ಫಿಂಚ್ 50 ರನ್ ನೆರವಿನಿಂದ ದಿನದಾಟದ ಕೊನೆಗೆ ಆಸೀಸ್ 90 ಓವರ್ ಮುಕ್ತಾಯಕ್ಕೆ 6 ವಿಕೆಟ್ ಕಳೆದು 277 ರನ್ ಪೇರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications