ಐಪಿಎಲ್ ನಿಂದ ಬ್ರೇಕ್: ಅನುಷ್ಕಾ ಆಸೆ ಪೂರೈಸಿದ ಕೊಹ್ಲಿ!
ಬೆಂಗಳೂರು, ಮೇ 10 : ಐಪಿಎಲ್ 10ರಲ್ಲಿ ವೈಫಲ್ಯ ಕಂಡಿರುವ ವಿರಾಟ್ ಕೊಹ್ಲಿ ಅವರು ಬ್ರೇಕ್ ಪಡೆದುಕೊಂಡು ಲೇಡಿ ಲವ್ ಅನುಷ್ಕಾ ಅವರ ಹುಟ್ಟುಹಬ್ಬದ ಆಸೆಯನ್ನು ತೀರಿಸಿದ್ದಾರೆ. ಡಿನ್ನರ್ ಡೇಟ್ ಗೆ ಹೋದ ಚಿತ್ರ ಈಗ ವೈರಲ್ ಆಗಿದೆ.
ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ
ಗಾರ್ಡನ್ ಸಿಟಿ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ಸನ್ನಿ ರೆಸ್ಟೋರೆಂಟ್ ಗೆ ಬಂದಿದ್ದ ಕೊಹ್ಲಿ ಹಾಗೂ ಅನುಷ್ಕಾ ಅವರ ಚಿತ್ರಗಳು ಈಗ ಸಾಮಾಜಿಕ ಜಾಲ ತಾಣಗಳನ್ನು ಓಡಾಡುತ್ತಿದೆ.
ಅಭಿಮಾನಿಗಳು ಪ್ರೀತಿಯಿಂದ 'Virushka', ಎಂದೇ ಇವರಿಬ್ಬರನ್ನು ಕರೆಯತೊಡಗಿದ್ದಾರೆ. ರಾಯಲ್ ಬ್ಲ್ಯಾಕ್ ದಿರಿಸಿನಲ್ಲಿ ಇಬ್ಬರು ಡಿನ್ನರ್ ಮಾಡಿದ್ದಾರೆ.
ಐಪಿಎಲ್ ನ 9 ಪಂದ್ಯಗಳಿಂದ 250 ರನ್ ಗಳನ್ನು ಗಳಿಸಿರುವ ವಿರಾಟ್ ಕೊಹ್ಲಿ ಅವರು 3 ಅರ್ಧಶತಕ ಗಳಿಸಿದ್ದಾರೆ. ಕಳೆದ ಸೀಸನ್ ನಲ್ಲಿ 973ರನ್ ಕಲೆ ಹಾಕಿದ್ದ ಕೊಹ್ಲಿ ಈ ಬಾರಿ ಮಂಕಾಗಿದ್ದಾರೆ.
ಇತ್ತೀಚೆಗೆ ಅನುಷ್ಕಾ ಶರ್ಮ ಹುಟ್ಟುಹಬ್ಬ ಆಚರಣೆಗೂ ಕೊಹ್ಲಿ ಹಾಜರಾಗಿರಲಿಲ್ಲ. ಈಗ ಕೊನೆಗೂ ಹುಟ್ಟುಹಬ್ಬದ ಆಸೆಯನ್ನು ಕೊಹ್ಲಿ ತೀರಿಸಿದ್ದಾರೆ.

ಪರಿವಾರದೊಡನೆ ಆನುಷ್ಕಾ
ಬಿಡುವಿನ ವೇಳೆಯಲ್ಲಿ ಅನುಷ್ಕಾ ಶರ್ಮ ಹಾಗೂ ವಿರಾಟ್ ಕೊಹ್ಲಿ ಕುಟುಂಬ ಒಟ್ಟಿಗೆ ಎಲ್ಲಾದ್ರೂ ವಿಹಾರಕ್ಕೆ ಹೋಗಿ ಬರುತ್ತಾರೆ. ಕಳೆದ ತಿಂಗಳು ಕೂಡಾ ಅನುಷ್ಕಾ ಅವರು ಕೊಹ್ಲಿ ಮನೆಗೆ ಹೋಗಿ ಬಂದಿದ್ದರು.

ಕೊಹ್ಲಿ ಅನುಷ್ಕಾ ಜತೆ ಜತೆಗೆ
ಬೆಂಗಳೂರಿನಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಅವರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇರುವ ರೆಸ್ಟೋರೆಂಟ್ ಗೆ ಹೋಗಿ ಡಿನ್ನರ್ ಮುಗಿಸಿಕೊಂಡು ಬರುವುದನ್ನು ಕಂಡ ಅಭಿಮಾನಿಗಳು ಚಿತ್ರವನ್ನು ಹಂಚಿಕೊಂಡಿದ್ದಾರೆ.
ಅನುಷ್ಕಾ ತಲೆಗೆ ಕೊಹ್ಲಿ ಕ್ಯಾಪ್
ಅನುಷ್ಕಾ ಶರ್ಮ ಅವರು ಇತ್ತೀಚೆಗೆ ವಿರಾಟ್ ಕೊಹ್ಲಿ ಅವರ ಕ್ಯಾಪ್ ಧರಿಸಿ ಇನ್ಸ್ ಟಾಗ್ರಾಮ್ ನಲ್ಲಿ ಹಾಕಿದ್ದರು.
ದಾನಿಶ್ ಸೇಠ್
ಸನ್ನಿಸ್ ರೆಸ್ಟೋರೆಂಟ್ ಗೆ ತೆರಳಿದ ಪ್ರೇಮಿಗಳಾದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಜತೆಗೆ ನಟ, ಕಾಮಿಡಿಯನ್ ದಾನಿಶ್ ಸೇಠ್ ಅವರು ಕೂಡಾ ಸಾಥ್ ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications