For Quick Alerts
ALLOW NOTIFICATIONS  
For Daily Alerts
 

ರಹಾನೆಯಿಂದ ಕೊಹ್ಲಿಗೆ ನಾಯಕತ್ವ ಚರ್ಚೆಗೀಡಾಗಲಿದೆ: ಪೀಟರ್ಸನ್

Virat Kohli taking charge from Ajinkya Rahane an interesting story: Kevin Pietersen

ಚೆನ್ನೈ: ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯದ ಬಳಿಕ ಅಜಿಂಕ್ಯ ರಹಾನೆಯಿಂದ ನಾಯಕನ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿಗೆ ನೀಡೋದು ಭಾರತ-ಇಂಗ್ಲೆಂಡ್ ಸರಣಿಯುದ್ದಕ್ಕೂ ಚರ್ಚೆಗೀಡಾಗಲಿದೆ. ಅದೊಂದು ಕುತೂಹಲಕಾರಿ ಸ್ಟೋರಿ ಅನ್ನಿಸಲಿದೆ ಎಂದು ಇಂಗ್ಲೆಂಡ್‌ನ ಮಾಜಿ ಸ್ಟಾರ್ ಆಟಗಾರ ಕೆವಿನ್ ಪೀಟರ್ಸನ್ ಹೇಳಿದ್ದಾರೆ.

ಭಾರತದ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಎಂದಿನ ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್‌ನಲ್ಲಿ ಮಾತ್ರ ಆಡಿ ಆ ಬಳಿಕ ಪಿತೃತ್ವ ರಜೆ ಪಡೆದು ಭಾರತಕ್ಕೆ ವಾಪಸ್ಸಾಗಿದ್ದರು. ವಿಶೇಷವೆಂದರೆ ಭಾರತ ತಂಡ ಮೊದಲ ಟೆಸ್ಟ್‌ನಲ್ಲಿ ಮಾತ್ರ ಸೋತಿತ್ತು.

ಉಳಿದ ಮೂರೂ ಟೆಸ್ಟ್‌ಗಳಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಭಾರತದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದರು. ಆ ಮೂರು ಪಂದ್ಯಗಳಲ್ಲಿ ಭಾರತ 2-1ರ ಜಯ (1 ಪಂದ್ಯ ಡ್ರಾ) ದಾಖಲಿಸಿತ್ತು. ಆವತ್ತು ತಂಡದಲ್ಲಿ ಪ್ರಮುಖ ಆಟಗಾರರು ಗಾಯಕ್ಕೀಡಾಗಿ ತಂಡದಿಂದ ಹೊರಗಿದ್ದರಾದರೂ ಭಾರತ ಸರಣಿ ಗೆದ್ದು ವಿಶ್ವವನ್ನು ನಿಬ್ಬೆರಗಾಗಿಸಿತ್ತು.

'ಕೊಹ್ಲಿ, ಆ್ಯಂಡರ್ಸನ್, ರಹಾನೆ ಹೋಗು ಅಂದರೂ ಹೋಗೋದು ಹೇಗೆ? ಆಸ್ಟ್ರೇಲಿಯಾದಲ್ಲಿ ರಹಾನೆ ನಾಯಕನಾಗಿದ್ದು, ಈಗ ಭಾರತದಲ್ಲಿ ಮತ್ತೆ ಕೊಹ್ಲಿ ನಾಯಕ. ಆ ಕ್ರಿಯಾತ್ಮಕ ಕೆಲಸ ಹೇಗೆ? ಇದು ಬಹಳ ಕುತೂಹಲಕಾರಿ ಕ್ರಿಯೆಯಾಗಲಿದೆ. ಇಂಗ್ಲೆಂಡ್-ಭಾರತ ಸರಣಿಯುದ್ದಕ್ಕೂ ಇದು ಚರ್ಚೆಯಾಗಲಿದೆ,' ಎಂದು ಪೀಟರ್ಸನ್ ಹೇಳಿದ್ದಾರೆ.

Story first published: Tuesday, February 2, 2021, 23:55 [IST]
Other articles published on Feb 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+