Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಪಂಜಾಬ್‌ ವಿರುದ್ಧ ದಾಖಲೆಯ ಮೇಲೆ ವಿರಾಟ್‌ ಚಿತ್ತ

ಇಂಡಿಯನ್ ಪ್ರೀಮಿಯರ್ ಲೀಗ್‌ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ. ಈಗಾಗಲೇ ಪ್ಲೇ ಆಫ್‌ ವೇಳಾಪಟ್ಟಿ ಬಿಡುಗಡೆ ಆಗಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್‌ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಫೈನಲ್‌ ಪಂದ್ಯಕ್ಕೆ ಅರ್ಹತೆ ಪಡೆಯುವ ಕನಸು ಕಾಣುತ್ತಿದೆ. ಇನ್ನು ಆರ್‌ಸಿಬಿ ತಂಡದ ಸ್ಥಿರ ಪ್ರದರ್ಶನ ನೀಡುವಲ್ಲಿ ಸಂಘಟಿತ ಆಟ ಎದ್ದು ಕಾಣುತ್ತದೆ. ಈ ವೇಳೆ ಎಲ್ಲರ ಕಣ್ಣುಗಳು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿವೆ.

ಈ ಲೀಗ್‌ನಲ್ಲಿ ವಿರಾಟ್‌ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇವರು ಈಗಾಗಲೇ ಲೀಗ್‌ನಲ್ಲಿ 600ಕ್ಕೂ ಹೆಚ್ಚು ರನ್‌ ಕಲೆ ಹಾಕಿದ್ದು, ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಎದ್ದು ಕಾಣುತ್ತಾರೆ. ವಿರಾಟ್‌ ಗುರುವಾರ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಅಬ್ಬರಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಕ್ವಾಲಿಫೈಯರ್‌ರಲ್ಲಿ ಜಯ ಸಾಧಿಸಿದ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.

Virat Kohli Targets David Warner s Record in IPL Showdown Against Punjab Kings

ವಿರಾಟ್‌ ಕೊಹ್ಲಿ ಬ್ಯಾಟ್‌ ಈ ಲೀಗ್‌ನಲ್ಲಿ ಅಬ್ಬರಿಸಿದೆ. ಇವರು ಈ ಲೀಗ್‌ನ ಎಲ್ಲ ತಂಡಗಳ ವಿರುದ್ಧವೂ ತಮ್ಮ ಆರ್ಭಟ ಮುಂದುವರೆಸಿದ್ದಾರೆ. ಹಲವು ದಾಖಲೆಗಳಿಗೆ ತಮ್ಮ ಹೆಸರನ್ನು ನಮೂದಿಸಿಕೊಂಡಿರುವ ವಿರಾಟ್‌ ಮತ್ತೊಂದು ದಾಖಲೆಯನ್ನು ನಿರ್ಮಿಸುವ ಕನಸಿನಲ್ಲಿದ್ದಾರೆ. ವಿರಾಟ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ 31 ರನ್‌ ಬಾರಿಸುವಲ್ಲಿ ಸಫಲರಾದಲ್ಲಿ ದೊಡ್ಡ ದಾಖಲೆಯನ್ನು ಬರೆಯಬಹುದು. ವಿರಾಟ್‌ ಬರೆಯಲು ಹೊರಟಿರುವ ದಾಖಲೆಯ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Virat Kohli Targets David Warner s Record in IPL Showdown Against Punjab Kings

ಪಂಜಾಬ್‌ ಕಿಂಗ್ಸ್ ವಿರುದ್ಧ ವಿರಾಟ್‌ ಆಡಿದ 34 ಪಂದ್ಯಗಳಲ್ಲಿ 36ರ ಸರಾಸರಿಯಲ್ಲಿ 1104 ರನ್‌ ಸಿಡಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 6 ಅರ್ಧಶತಕ ಇನಿಂಗ್ಸ್‌ ಸಹ ಸೇರಿದೆ. ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಕ್ವಾಲಿಫೈಯರ್ -1 ಪಂದ್ಯದಲ್ಲಿ 31 ರನ್ ಗಳಿಸಸಿದರೆ, ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕುವ ಕನಸು ಹೊಂದಿದ್ದಾರೆ. ಇವರು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ವಾರ್ನರ್‌ ಪಂಜಾಬ್‌ ವಿರುದ್ಧ 1134 ರನ್‌ ಸಿಡಿಸಿ ನಂಬರ್‌ 1 ಸ್ಥಾನದಲ್ಲಿದ್ದಾರೆ.

ಆರೆಂಜ್‌ ಕ್ಯಾಪ್ ಮೇಲೆ ಕಣ್ಣು

ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೂರನೇ ಬಾರಿ ಆರೆಂಜ್ ಕ್ಯಾಪ್‌ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ. ಈ ಲೀಗ್‌ನಲ್ಲಿ ವಿರಾಟ್‌ 8 ಅರ್ಧಶತಕ ಬಾರಿಸಿ ಭರವಸೆ ಮೂಡಿಸಿದ್ದಾರೆ. ಅಲ್ಲದೆ ಆಡಿದ 13 ಪಂದ್ಯಗಳಲ್ಲಿ ಆಡಿದ 13 ಪಂದ್ಯಗಳಲ್ಲಿ 60ರ ಸರಾಸರಿಯಲ್ಲಿ 602 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಬ್ಯಾಟ್‌ನಿಂದ 61 ಬೌಂಡರಿ, 19 ಸಿಕ್ಸರ್‌ ಬಂದಿವೆ. ಮೊದಲ ಕ್ವಾಲಿಫೈಯರ್‌ನಲ್ಲೂ ಬಿಗ್ ಇನಿಂಗ್ಸ್‌ ಕಟ್ಟುವ ಲೆಕ್ಕಾಚಾರ ವಿರಾಟ್‌ ಅವರದ್ದಾಗಿದೆ.

Story first published: Thursday, May 29, 2025, 10:28 [IST]
Other articles published on May 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+