Virat Kohli Tattoo: ಹೊಸ ಟ್ಯಾಟೂ ಹಾಕಿಸಿಕೊಂಡ ವಿರಾಟ್ ಕೊಹ್ಲಿ, ರಹಸ್ಯವೇನು?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ಖಾತೆ ಓಪನ್ ಮಾಡುವ ಇರಾದೆಯನ್ನು ಹೊಂದಿದೆ. ಈ ವೇಳೆ ಎಲ್ಲರ ಕಣ್ಣುಗಳು ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ. ಇವರು ಈ ಐಪಿಎಲ್‌ಗಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ವಿರಾಟ್ ಅಭ್ಯಾಸ ಪಂದ್ಯದ ವೇಳೆ ಫಿಲ್ ಸಾಲ್ಟ್‌ಗೆ ಬೌಲಿಂಗ್ ಮಾಡಿ ಸಹ ಗಮನ ಸೆಳೆದಿದ್ದರು. ವಿರಾಟ್ ಕೊಹ್ಲಿ ಅವರಿಗೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಹೊರ ಬಂದಿದೆ. ವಿರಾಟ್ ಕೊಹ್ಲಿ ತಮ್ಮ ಎಡಗೈ ಮೇಲಿನ ಟ್ಯಾಟೂ ನವೀಕರಿಸಿದ್ದಾರೆ. ಹಾಗಿದ್ದರೆ ಆ ಟ್ಯಾಟೂ ಯಾವುದು ಏನು ಅದರ ಉದ್ದೇಶ ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಹಾಕಿಸಿಕೊಂಡಿರುವ ಹೊಸ ಟ್ಯಾಟೂ ಅವರ ಜೀವನ, ಅನುಭವಗಳು ಮತ್ತು ವೈಯಕ್ತಿಕ ರೂಪಾಂತರಗಳ ಕಥೆಯನ್ನು ಪ್ರತಿಬಿಂಬಿಸುತ್ತದೆ. ವಿರಾಟ್ ಟ್ಯಾಟೂ ಮಾಡಿಸಿಕೊಂಡ ಸ್ಟುಡಿಯೋದ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಇದರ ಅನುಸಾರ ಟ್ಯಾಟೂವನ್ನು ಅವರ ಎಡಗೈಯಲ್ಲಿ ಹಾಕಿಸಿಕೊಳ್ಳಲಾಗಿದೆ, ಅಲ್ಲಿ ಅಸ್ತಿತ್ವದಲ್ಲಿರುವ ಹಚ್ಚೆಗಳನ್ನು ತೆಗೆದುಹಾಕುವ ಬದಲು, ಅವುಗಳನ್ನು ಪರಿಷ್ಕರಿಸಿ ಮತ್ತು ಆಳವನ್ನು ನೀಡಲಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯ ಉದ್ದೇಶವು ಹಳೆಯ ವಿನ್ಯಾಸಗಳನ್ನು ಹೊಸ ಕಥೆಯಲ್ಲಿ ಹೇಳುವುದಾಗಿದೆ. ಇದು ಕೊಹ್ಲಿಯ ಪ್ರಸ್ತುತ ಚಿಂತನೆ ಮತ್ತು ವ್ಯಕ್ತಿತ್ವಕ್ಕೆ ಹೊಂದುತ್ತದೆ ಎಂದು ತಿಳಿಸಿದೆ.
ಏನಿದರ ಮಹತ್ವ?
ಹೊಸ ಟ್ಯಾಟೂವನ್ನು ಶಿವ-ಪ್ರೇರಿತ ಎಂದು ಹೇಳಲಾಗುತ್ತಿದೆ. ಈ ಟ್ಯಾಟೂ ಸಂಕೀರ್ಣವಾದ ಮಂಡಲ ಮಾದರಿಯಾಗಿ ವಿಕಸನಗೊಳ್ಳುತ್ತದೆ, ಇದನ್ನು ಡಾಟ್‌ವರ್ಕ್ ತಂತ್ರವನ್ನು ಬಳಸಿ ರಚಿಸಲಾಗುತ್ತದೆ. ಈ ಮಾದರಿಯು ಇಡೀ ತೋಳಿನಾದ್ಯಂತ ವಿಸ್ತಾರಗೊಂಡಿದೆ. ಈ ಟ್ಯಾಟೂದಲ್ಲಿ ಕಮಲ ಮತ್ತು ಪಿಯೋನಿಯಂತಹ ಹೂವುಗಳನ್ನು ಸಹ ಒಳಗೊಂಡಿದೆ, ಇವುಗಳನ್ನು ಶಕ್ತಿ, ಬೆಳವಣಿಗೆ ಮತ್ತು ಆಂತರಿಕ ಸಮತೋಲನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಈ ಟ್ಯಾಟೂ ಹಿಂದಿನ ಗುಟ್ಟೇನು ಎಂಬುದು ಇನ್ನು ಬಹಿರಂಗವಾಗಿಲ್ಲ.
ಈ ಟ್ಯಾಟೂ ಮಾಡುವಾಗ ಕೆಲವು ಭಾಗಗಳಲ್ಲಿ ಉದ್ದೇಶಪೂರ್ವಕವಾಗಿ ಅಪೂರ್ಣವಾಗಿ ಬಿಡಲಾಗಿದೆ ಎಂದು ಸ್ಟುಡಿಯೋ ಹೇಳಿದೆ. ಏಕೆಂದರೆ ಚೇಸಿಂಗ್ ಸ್ಟಾರ್ ಕೊಹ್ಲಿಯ ಜೀವನದಲ್ಲಿನ ಹೊಸ ಅನುಭವಗಳು, ಬದಲಾವಣೆಗಳು ಮತ್ತು ಸಾಧನೆಗಳು ಭವಿಷ್ಯದಲ್ಲಿ ಟ್ಯಾಟೂಗೆ ಸೇರಿಸಲಾಗುತ್ತದೆ ಎಂದು ಹೇಳಲಾಗಿದೆ.
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ 19ನೇ ಆವೃತ್ತಿ ಆಡಲು ಸಜ್ಜಾಗುತ್ತಿದ್ದಾರೆ. ಈ ಬಾರಿ ಆರ್‌ಸಿಬಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೃಷ್ಟಿ ನೆಟ್ಟಿದೆ. ಈ ವೇಳೆ ಎಲ್ಲರ ಕಣ್ಣುಗಳು ವಿರಾಟ್ ಅವರ ಮೇಲೆ ನೆಟ್ಟಿರಲಿವೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ವಿರಾಟ್ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications