RCB ಪರ 2027ರ ವರೆಗೆ ಆಡಲಿರುವ ವಿರಾಟ್ ಕೊಹ್ಲಿ
ಎಲ್ಲರ ಚಿತ್ತ ಕದ್ದಿದ್ದ ಐಪಿಎಲ್ ರಿಟೇನ್ಷನ್ ಲೀಸ್ಟ್ ಕೊನೆಗೂ ರಿಲೀಸ್ ಆಗಿದೆ. ಆರ್‌ಸಿಬಿ ಸಹ ಮೂವರು ಆಟಗಾರರಿಗೆ ಮಣೆ ಹಾಕಿದೆ. ಅಳೆದು ತೂಗಿ ಆಟಗಾರರನ್ನು ಉಳಿಸಿಕೊಂಡಿದೆ. ಸ್ಟಾರ್ ಆಟಗಾರರಿಗೆ ರೆಡ್ ಕಾರ್ಪೆಟ್ ಹಾಕಿದ್ದು, ಅವರಿಗೆ ಹಣವನ್ನು ಹೂಡಲು ಮುಂದಾಗಿದೆ. ಆರ್‌ಸಿಬಿ ಉಳಿಸಿಕೊಂಡ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರು ವಿರಾಟ್ ಕೊಹ್ಲಿ.
ನಿರೀಕ್ಷಿಯಂತೆ ವಿರಾಟ್ ಕೊಹ್ಲಿ ಅವರನ್ನು ಆರ್‌ಸಿಬಿ ಮ್ಯಾನೇಜ್ಮೆಂಟ್ ಮೊದಲ ಆಯ್ಕೆಯ ಆಟಗಾರನಾಗಿ ಉಳಿಸಿಕೊಂಡಿದೆ. ಅಲ್ಲದೆ ಇವರಿಗೆ ಆರ್‌ಸಿಬಿ 21 ಕೋಟಿ ರೂ. ನೀಡಲು ನಿರ್ಧರಿಸಿದೆ. ವಿರಾಟ್ ಕೊಹ್ಲಿ ಅವರನ್ನು ಹೊರತು ಪಡಿಸಿದರೆ, ರಜತ್ ಪಟಿದಾರ್, ಯಶ್ ದಯಾಳ್ ಅವರನ್ನು ತಂಡ ಉಳಿಸಿಕೊಂಡಿದೆ. ಉಳಿದಂತೆ ಸ್ಟಾರ್ ಆಟಗಾರರಿಗೆ ತಂಡ ಗೇಟ್ ಪಾಸ್ ನೀಡಿದೆ.

ಒಂದೇ ತಂಡದ ಪರ ಆಡಿರುವ ಖ್ಯಾತಿ
2008ರಿಂದ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡಕ್ಕೆ ಸೇರಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ವ್ಯಕ್ತಿ ವಿಕಸನದಲ್ಲೂ ಆರ್‌ಸಿಬಿ ದೊಡ್ಡ ಪಾತ್ರವನ್ನು ವಹಿಸಿದೆ. ಒಂದೇ ತಂಡದ ಪರ ಅತಿ ಹೆಚ್ಚು ವರ್ಷಗಳ ಕಾಲ ಆಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. 2007ರಲ್ಲಿ ವಿರಾಟ್ ಆರ್‌ಸಿಬಿ ತಂಡದ ಜೊತೆ ಸಂಬಂಧ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಅವರು 2027 ರ ವರೆಗೆ RCB ಯೊಂದಿಗೆ ಸಂಬಂಧ ಹೊಂದಿರುತ್ತಾರೆ ಎಂದು ಸೂಚಿಸಿದ್ದಾರೆ. ಇದೇ ವೇಳೆ ಅವರು ಆರ್‌ಸಿಬಿ ಪರ ಆಡುತ್ತಾ 20 ವರ್ಷ ಪೂರೈಸಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಯಾವುದೇ ಆಟಗಾರರು ಯಾವುದೇ ಒಂದು ತಂಡದೊಂದಿಗೆ ಇಷ್ಟು ದಿನ ಸಂಬಂಧ ಹೊಂದಿಲ್ಲ.
ಐಪಿಎಲ್ ಪ್ರದರ್ಶನ
ವಿರಾಟ್ ಕೊಹ್ಲಿ ಹಂತ ಹಂತವಾಗಿ ಆರ್‌ಸಿಬಿ ತಂಡದ ಅವಿಭಾಜ್ಯವಾಗಿದ್ದಾರೆ. ಇವರು ಮೈದಾನಕ್ಕೆ ಇಳಿದಾಗಲೆಲ್ಲಾ ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ. ಇವರು ಆರ್‌ಸಿಬಿ ಪರ 8 ಸಾವಿರಕ್ಕೂ ಹೆಚ್ಚು ರನ್ ಸಿಡಿಸಿದ ಖ್ಯಾತಿಯನ್ನು ಹೊಂದಿದ್ದಾರೆ. ಅಲ್ಲದೆ ಇವರ ಸ್ಟ್ರೈಕ್ ರೇಟ್ 131.97 ಆಗಿದೆ. ಇನ್ನು ಇದೇ ವೇಳೆ ಇವರು 8 ಶತಕ ಹಾಗೂ 55 ಅರ್ಧಶತಕ ಸಿಡಿಸಿದ್ದಾರೆ.
ವಿರಾಟ್ ಹೇಳಿದ್ದೇನು?
ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ಬೋಲ್ಡ್ ಡೈರೀಸ್‌ನಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ಆಡುವ ಗುರಿಯನ್ನು ಹೊಂದಿದ್ದಾರೆ ಎಂದು ಸೂಚಿಸಿದ್ದಾರೆ. ಈ ಚಕ್ರದ ಕೊನೆಯಲ್ಲಿ ಅವರು RCB ಗಾಗಿ ಆಡಿ 20 ವರ್ಷಗಳು ಆಗುತ್ತವೆ ಮತ್ತು ಇದು ಅವರಿಗೆ ಸ್ಮರಣೀಯ ಎಂದು ಅವರು ಹೇಳಿದರು.

ಇಷ್ಟು ವರ್ಷಗಳ ಕಾಲ ಒಂದೇ ತಂಡದ ಪರ ಆಡುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ಆದರೆ ವರ್ಷಗಳಲ್ಲಿ ಸಂಬಂಧವು ಬೆಳೆಯುತ್ತಲೇ ಸಾಗಿತು. ಆರ್‌ಸಿಬಿ ಹೊರತುಪಡಿಸಿ ಬೇರೆ ಯಾವುದೇ ತಂಡದ ಪರ ಆಡುವುದನ್ನು ನೋಡಲು ಸಾಧ್ಯವಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಆರ್‌ಸಿಬಿ ಪರ ಆಡುವುದು ಯಾವುಗಲು ವಿಶೇಷ ಅನುಭವ ನೀಡುತ್ತದೆ. ಈ ತಂಡಕ್ಕೆ ಒಮ್ಮೆಯಾದರೂ ಟ್ರೋಫಿ ತೊಡಿಸುವುದೇ ದೊಡ್ಡ ಕನಸು ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications