ಗುರುಗ್ರಾಮದಲ್ಲಿ ವೋಟ್ ಮಾಡಲಿರುವ ವಿರಾಟ್ ಕೊಹ್ಲಿ

ಮುಂಬೈ, ಏಪ್ರಿಲ್ 28: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೋಟ್ ಮಾಡಲು ಸಾಧ್ಯವಿಲ್ಲ ಎಂದು ವರದಿಯಾಗಿತ್ತು.
ಆದರೀಗ, ತಾವು ಗುರುಗ್ರಾಮದಿಂದ ಮತದಾನದ ಹಕ್ಕನ್ನು ಚಲಾಯಿಸುವುದಾಗಿ ಕಿಂಗ್ ಕೊಹ್ಲಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ತಮ್ಮ ವೋಟರ್ ಐಡಿ ಕಾರ್ಡ್ ಚಿತ್ರವನ್ನು ಪೋಸ್ಟ್ ಮಾಡಿರುವ ವಿರಾಟ್ ಕೊಹ್ಲಿ, "ವೋಟ್ ಮಾಡಲು ನಾನು ರೆಡಿ, ನೀವು,'' ಎಂದು ಸಂದೇಶ ನೀಡಿದ್ದಾರೆ.
ಇದಕ್ಕೂ ಮೊದಲು ವಿರಾಟ್ ವೋಟ್ ಮಾಡಲು ಸಾಧ್ಯವಿಲ್ಲ ಎಂದು ಭಾರಿ ಸುದ್ದಿಯಾಗಿತ್ತು. ಏಕೆಂದರೆ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಮುಂಬಯಿನ ವೊರ್ಲಿಗೆ ತಮ್ಮ ನಿವಾಸ ಸ್ಥಳಾಂತರಿಸಿದ್ದ ಕೊಹ್ಲಿ, ಮತದಾರರ ಪಟ್ಟಿಗೆ ಮಾರ್ಚ್ 30ರ ಒಳಗಾಗಿ ತಮ್ಮ ಹೆಸರನ್ನು ಸೇರಿಸಬೇಕಿತ್ತು.
ಆನ್‌ಲೈನ್ ಮೂಲಕ ಹೆಸರು ಸೇರ್ಪಡೆಗೆ ಕೊಹ್ಲಿ ಪ್ರಯತ್ನಿಸಿದ್ದರಾದರೂ ಅಂತಿಮ ದಿನಾಂಕ ಮುಗಿದಿದ್ದರಿಂದ ಹೆಸರು ಸೇರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮುಂಬೈನಲ್ಲಿ ಕೊಹ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಲ್ಲಿ ವಿಫಲರಾಗಿದ್ದರು.
ಆದರೆ, ತಮ್ಮ ಮತದಾನದ ಹಕ್ಕನ್ನು ಚಲಾಯಿಸಲೇ ಬೇಕೆಂಬ ಹಟದಲ್ಲಿರುವ ವಿರಾಟ್, ತಮ್ಮ ಈ ಹಿಂದಿನ ನಿವಾಸದಲ್ಲೇ ವೋಟ್ ಮಾಡಲು ಮುಂದಾಗಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ವಿರಾಟ್ ಅವರ ಕುಟುಂಬ ಸದ್ಯರು ಈಗಲೂ ಇದ್ದು, ಮತದಾರರ ಪಟ್ಟಿಯಲ್ಲಿ ಕೊಹ್ಲಿ ಅವರ ಹೆಸರಿದೆ. ಹೀಗಾಗಿ ಗುರುಗ್ರಾಮದ ಮೂಲಕ ಮತ ಚಲಾಯಿಸಲು ಕೊಹ್ಲಿ ಮುಂದಾಗಿದ್ದಾರೆ. ಗುರುಗ್ರಾಮದಲ್ಲಿ ಮೇ 12ರಂದು ಚುನಾವಣೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications