Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್‌ ಕೊಹ್ಲಿ ಐಪಿಎಲ್‌ನಿಂದ ನಿವೃತ್ತಿ ಹೊಂದುತ್ತಾರಾ? RCB ಸಿಇಒ ಸ್ಪಷ್ಟನೆ

ವಿಶ್ವ ಕ್ರಿಕೆಟ್‌ನ ತಮ್ಮ ಬ್ಯಾಟಿಂಗ್ ಮೂಲಕ ಛಾಪು ಮೂಡಿಸಿರುವ ಆಟಗಾರ ವಿರಾಟ್‌ ಕೊಹ್ಲಿ. ಇವರು ಸದ್ಯ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮಾತ್ರ ದೇಶದ ಪರ ಆಡುತ್ತಿದ್ದಾರೆ. ಈಗಾಗಲೇ ಟೆಸ್ಟ್‌ ಹಾಗೂ ಟಿ20 ಫಾರ್ಮೆಟ್‌ಗೆ ಕೊಹ್ಲಿ ವಿದಾಯ ಹೇಳಿದ್ದಾರೆ. ಇವರು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಆಡುತ್ತಿದ್ದಾರೆ. ಇವರು ಮುಂದಿನ ಆವೃತ್ತಿಯ ಐಪಿಎಲ್‌ ಆಡುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಉದ್ಭವಿಸಿತ್ತು. ಇದಕ್ಕೆ ಈಗ ತೆರೆ ಬಿದ್ದಿದೆ. ಈ ಎಲ್ಲಾ ವದಂತಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ರಾಜೇಶ್ ಮೆನನ್ ತೆರೆ ಎಳೆದಿದ್ದಾರೆ.

ರಾಜೇಶ್ ಮೆನನ್ ನೀಡಿರುವ ಹೇಳಿಕೆ ಅಸಂಖ್ಯಾತ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಮೂಲಕ ಇವರು ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ವಯಸ್ಸು ಎಂಬುದು ಕೇವಲ ಒಂದು ಸಾಧನೆಗೆ ತಡೆಯೊಡ್ಡದ ಅಂಕಿ ಮಾತ್ರ ಎಂಬುದನ್ನು ಕೊಹ್ಲಿ ಪ್ರತಿಯೊಂದು ಪಂದ್ಯದಲ್ಲೂ ಸಾಬೀತುಪಡಿಸುತ್ತಲೇ ಬಂದಿದ್ದಾರೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Virat Kohli

ವಿರಾಟ್‌ ಕೊಹ್ಲಿ ಒಬ್ಬ ಸೂಪರ್ ಸ್ಟಾರ್ ಆಟಗಾರ. ಇವರು ತಮ್ಮ ಆಟ ಹಾಗೂ ಫಿಟ್ನೆಸ್‌ನಿಂದ ದೇಶದ ಗಮನ ಸೆಳೆದ ಪ್ಲೇಯರ್. ಇವರಿಗೆ ಕ್ರಿಕೆಟ್‌ ಮೇಲಿರುವ ಬದ್ಧತೆ ಎಲ್ಲರಿಗೂ ಮಾದರಿ. ವಿರಾಟ್ ಕೊಹ್ಲಿ ಯುವಕರಿಗೂ ಸವಾಲೆಸೆಯುವ ದೈಹಿಕ ಕ್ಷಮತೆ ಹಾಗೂ ಬ್ಯಾಟಿಂಗ್ ಧಾಟಿ ಗಮನಿಸಿದರೆ, ಅವರು ಇನ್ನು ಕನಿಷ್ಠ ನಾಲ್ಕು ವರ್ಷಗಳ ಕಾಲ ಯಾವುದೇ ಅಡೆತಡೆಯಿಲ್ಲದೆ ಆರ್‌ಸಿಬಿ ಪರ ಐಪಿಎಲ್ ಕ್ರಿಕೆಟ್ ಆಡಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ವಿಷಯದಲ್ಲಿ ಫ್ರಾಂಚೈಸಿಯು ದೃಢವಾದ ನಿಲುವನ್ನು ಪ್ರದರ್ಶಿಸಿದೆ. ಇದು ಸದ್ಯಕ್ಕೆ ರನ್ ಮಷೀನ್ ಕೊಹ್ಲಿ ಅವರ ಐಪಿಎಲ್ ವಿದಾಯದ ಬಗ್ಗೆ ಇದ್ದ ಎಲ್ಲಾ ಆತಂಕಗಳಿಗೆ ಪೂರ್ಣವಾಗಿ ಬ್ರೇಕ್ ಹಾಕಿದೆ.

ಐಪಿಎಲ್‌ನಲ್ಲಿ ವಿರಾಟ್ ಆರ್ಭಟ

ವಿರಾಟ್ ಕೊಹ್ಲಿ ಅವರು ಮೊದಲ ಆವೃತ್ತಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದು, ತಂಡದ ಯಶಸ್ಸಿನ ಹೀರೋ ಆಗಿದ್ದಾರೆ.ಅವರ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಮೈದಾನದಲ್ಲಿ ತೋರಿಸುವ ಅದ್ಭುತ ನಾಯಕತ್ವದ ಗುಣಗಳೇ ತಂಡದ ಜೀವಾಳವಾಗಿದೆ. 19ನೇ ಆವೃತ್ತಿಯ ಐಪಿಎಲ್‌ನಲ್ಲೂ ವಿರಾಟ್‌ 600ಕ್ಕೂ ಹೆಚ್ಚು ರನ್ ಬಾರಿಸಿ ತಂಡಕ್ಕೆ ಆಧಾರವಾಗಿದ್ದಾರೆ.

Virat Kohli

ಕಳೆದ ಐಪಿಎಲ್ ಆವೃತ್ತಿಯಲ್ಲಿ ಆಡಿದ ಕೇವಲ 16 ಪಂದ್ಯಗಳಿಂದ ವಿರಾಟ್ ಕೊಹ್ಲಿ ಬರೋಬ್ಬರಿ 675 ರನ್ ಕಲೆಹಾಕುವ ಮೂಲಕ ರನ್ ಬೇಟೆಯ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇವರು 165ರ ಸ್ಟ್ರೈಕ್ ರೇಟ್‌ನಲ್ಲಿ ರನ್‌ ಕಲೆ ಹಾಕಿದ್ದು, ಯುವ ಬ್ಯಾಟರ್‌ಗಳಿಗಿಂತಲೂ ತಾವೇನು ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ತಂಡದ ಪರ ಕಣಕ್ಕೆ ಇಳಿಯುವ ಕನಸು ಕಾಣುತ್ತಿದ್ದಾರೆ.

Story first published: Friday, June 19, 2026, 18:07 [IST]
Other articles published on Jun 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+