ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಆಡುತ್ತಿಲ್ಲ!

ಮುಂಬೈ, ಅಕ್ಟೋಬರ್ 19: ಮುಂಬರಲಿರುವ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡುತ್ತಿಲ್ಲ. ಸತತ ಪಂದ್ಯಗಳಲ್ಲಿ ಆಡುತ್ತಿರುವ ಕೊಹ್ಲಿ, ಕೆಲಸದ ಹೊರೆ ಇಳಿಸುವ ನಿಟ್ಟಿನಲ್ಲಿ ಕೊಂಚ ವಿಶ್ರಾಂತಿ ಪಡೆಯಲಿದ್ದಾರೆ. ನವೆಂಬರ್ 3ರಿಂದ ಬಾಂಗ್ಲಾ ವಿರುದ್ಧದ ಸರಣಿ ದೆಹಲಿಯಲ್ಲಿ ಟಿ20ಐ ಮೂಲಕ ಆರಂಭಗೊಳ್ಳಲಿದೆ.
ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದಲೂ ಕೊಹ್ಲಿ ಬೆನ್ನು ಬೆನ್ನುಗೆ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ತಂಡದ ಆಟಗಾರರ ಕೆಲಸದ ಹೊರ ನಿರ್ವಹಿಸುವ ಸಮಿತಿ, ಕೊಹ್ಲಿ ಮತ್ತು ಕೆಲ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲು ಯೋಚಿಸಿದೆ ಎಂದು ತಿಳಿದು ಬಂದಿದೆ.
ಕೊಹ್ಲಿ ಕಡೇಯ ಸಾರಿ ವಿಶ್ರಾಂತಿ ತೆಗೆದುಕೊಂಡಿದ್ದು ಕಳೆದ ಜನವರಿಯಲ್ಲಿ. ಆವತ್ತು ನ್ಯೂಜಿಲೆಂಡ್ ವಿರುದ್ಧದ ಎರಡು ಏಕದಿನ ಪಂದ್ಯಗಳು ಮತ್ತು ಟಿ20 ಸರಣಿಯಿಂದ ವಿರಾಟ್ ಹೊರಗುಳಿದಿದ್ದರು. ಈಗ ಕೊಹ್ಲಿ ಮತ್ತೆ ವಿಶ್ರಾಂತಿ ಬೇಕಾಗಿದೆ. ಭಾರತಕ್ಕೆ ಬಾಂಗ್ಲಾ ಪ್ರವಾಸ ಸರಣಿ 3 ಟಿ20ಐ, 2 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿದೆ.
'ಆಸ್ಟ್ರೇಲಿಯಾ ವಿರುದ್ಧದ ಸರಣಿ, ಐಪಿಎಲ್, ವಿಶ್ವಕಪ್, ವೆಸ್ಟ್ ಇಂಡೀಸ್ ಪ್ರವಾಸ ಸರಣಿ, ಈಗ ದಕ್ಷಿಣ ಆಫ್ರಿಕಾ ಸರಣಿ ಹೀಗೆ ಕೊಹ್ಲಿ ಬಿಡುವಿಲ್ಲದೆ ಸರಣಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಬಾಂಗ್ಲಾ ವಿರುದ್ಧದ ಟಿ20 ಸರಣಿಯನ್ನು ಕೊಹ್ಲಿ ತಪ್ಪಿಸಿಕೊಳ್ಳುತ್ತಿದ್ದಾರೆ,' ಎಂದು ಮೂಲವೊಂದು ಮಾಹಿತಿ ನೀಡಿದೆ. ವಿಚಾರವನ್ನು ಖಾತರಿಪಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications