Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಟ್ರೋಲ್ ಮಾಡಿದ ವಿರಾಟ್ ಕೊಹ್ಲಿ

Virat Kohli trolls Cheteshwar Pujara with throwback picture

ನವದೆಹಲಿ, ಮೇ 6: ಟೆಸ್ಟ್ ಪಂದ್ಯವೊಂದರ ಹಳೆ ಫೋಟೋವನ್ನು ಬಳಸಿಕೊಂಡು ಭಾರತದ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಕಾಲೆಳೆಯಲು ನಾಯಕ ವಿರಾಟ್ ಕೊಹ್ಲಿ ತೀರ್ಮಾನಿಸಿದಂತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕೊಹ್ಲಿ, ಪೂಜಾರ ಟ್ರೋಲ್ ಮಾಡಲು ಯತ್ನಿಸಿದ್ದರೆ, ಪೂಜಾರ ಅಷ್ಟೇ ಚಂದವಾಗಿ ಕೊಹ್ಲಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿದ್ದ ಕೊಹ್ಲಿ ಅದರ ಜೊತೆಗೆ, 'ಲಾಕ್‌ಡೌನ್ ಮುಗಿದ ಮೇಲೆ ಫಸ್ಟ್ ಸೆಶನ್‌ನಲ್ಲಿ ಪೂಜಾರ ಅವರಂಥ ಸ್ಥಿತಿ ನಮ್ಮದಾಗುತ್ತದೆ. ಪೂಜಾರ ಅವರೆ ನೀವು ಹೀಗೆ ಸುಮ್ಮನೆ ನೋಡದೆ, ಚೆಂಡು ಹಿಡಿಯಲು ಹೋಗುತ್ತೀರಿ ಎಂದು ನಾನು ಭಾವಿಸುತ್ತೇನೆ,' ಎಂದು ತಮಾಷೆಯಾಗಿ ಸಾಲು ಬರೆದುಕೊಂಡಿದ್ದರು.

ಸೆಕೆಂಡ್ ಸ್ಲಿಪ್ ಫೀಲ್ಡರ್ ಜಾಗದಲ್ಲಿದ್ದ ಕೊಹ್ಲಿ ಒಂದು ಅದ್ಭುತ ಕ್ಯಾಪ್ ಪಡೆಯುತ್ತಿರುವಾಗ ಸ್ವಲ್ಪದೂರದಲ್ಲಿ ಫಸ್ಟ್ ಸ್ಲಿಪ್‌ ಫೀಲ್ಡರ್ ಜಾಗದಲ್ಲಿದ್ದ ಪೂಜಾರ ಕೊಹ್ಲಿಯನ್ನೇ ದಿಟ್ಟಿಸುತ್ತಿರುವ ಚಿತ್ರಣ, ವಿರಾಟ್ ಹಂಚಿಕೊಂಡಿರುವ ಫೋಟೋದಲ್ಲಿತ್ತು. ಕೊಹ್ಲಿ ಈ ಚಿತ್ರಕ್ಕೆ ಪೂಜಾರ ಕೂಡ ರಿಪ್ಲೆ ಮಾಡಿದ್ದಾರೆ.

ಕೊಹ್ಲಿ ತರಲೆಗೆ, 'ಹೌದು ಕ್ಯಾಪ್ಟನ್, ನಾನದನ್ನು ಎರಡೂ ಕೈಗಳಲ್ಲೂ ಕ್ಯಾಚ್ ಮಾಡುತ್ತಿದ್ದೆ,' ಎಂದು ಪೂಜಾರ ತಮಾಷೆಯಾಗಿ ರಿಪ್ಲೆ ಮಾಡಿದ್ದಾರೆ. ಕೊರೊನಾವೈರಸ್ ಕಾರಣ ಕ್ರಿಕೆಟ್ ಪಂದ್ಯಗಳು ನಿಲುಗಡೆಯಾಗಿರುವುದರಿಂದ ವಿರಾಟ್ ಮತ್ತು ಪೂಜಾರ ಇಬ್ಬರೂ ತಮ್ಮ ಕುಟುಂಬದ ಜೊತೆ ಬಿಡುವಿನ ವೇಳೆ ಕಳೆಯುತ್ತಿದ್ದಾರೆ.

Story first published: Wednesday, May 6, 2020, 16:28 [IST]
Other articles published on May 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+