For Quick Alerts
ALLOW NOTIFICATIONS  
For Daily Alerts
 

India Vs Bangladesh: ಕೆಎಲ್‌ ರಾಹುಲ್‌ಗೆ ಬ್ಯಾಟಿಂಗ್ ಕೋಚ್ ಆದ ವಿರಾಟ್ ಕೊಹ್ಲಿ

Virat Kohli Turns Batting Coach To KL Rahul At Training In Adelaide Ahead Of Bangladesh Match

ಕಳಪೆ ಫಾರ್ಮ್‌ನಿಂದ ಸಂಕಷ್ಟದಲ್ಲಿರುವ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್‌ಗೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡಿದರು. ಅಡಿಲೇಡ್‌ನಲ್ಲಿ ಟೀಂ ಇಂಡಿಯಾದ ಅಭ್ಯಾಸದ ಅವಧಿಯಲ್ಲಿ ವಿರಾಟ್ ಕೊಹ್ಲಿ ಕೆಎಲ್‌ ರಾಹುಲ್‌ ಜೊತೆ ಸುಧೀರ್ಘ ಚರ್ಚೆ ನಡೆಸಿದರು, ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿ ಹಲವು ಸಲಹೆ ನೀಡಿದರು.

ಕೆಎಲ್ ರಾಹುಲ್ ಕಳಪೆ ಫಾರ್ಮ್‌ನಲ್ಲಿದ್ದಾರೆ, ಎಲ್ಲಾ ಮೂರು ಪಂದ್ಯಗಳಲ್ಲಿ ಒಂದು ಅಂಕೆಯ ರನ್ ಮಾತ್ರ ಗಳಿಸಿದ್ದಾರೆ. ಬುಧವಾರದಂದು ಭಾರತ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅಡಿಲೇಡ್‌ನಲ್ಲಿ ಮಂಗಳವಾರ ಮಳೆಯಾಗುತ್ತಿದ್ದ ಕಾರಣ, ಟೀಂ ಇಂಡಿಯಾ ಆಟಗಾರರು ಒಳಾಂಗಣ ಅಭ್ಯಾಸ ಮಾಡಿದರು. ಈ ಅವಧಿಯಲ್ಲಿ ಕೆಎಲ್‌ ರಾಹುಲ್‌ಗೆ ಕೊಹ್ಲಿ ಅನೇಕ ಸಲಹೆಗಳನ್ನು ನೀಡಿದರು.

ವಿರಾಟ್ ಕೊಹ್ಲಿ ಕೆಎಲ್‌ ರಾಹುಲ್‌ಗೆ ಆಫ್‌ಸ್ಟಂಪ್‌ನ ಹೊರಗೆ ಹೋಗುವ ಚೆಂಡುಗಳನ್ನು ಹೇಗೆ ಎದುರಿಸಬೇಕೆಂದು ಸಲಹೆ ನೀಡಿದರು, ಅದೇ ರೀತಿಯ ಎಸೆತಗಳಲ್ಲಿ ಕೆಎಲ್ ರಾಹುಲ್ ಹಲವು ಬಾರಿ ಔಟಾಗಿದ್ದಾರೆ. ಕೊಹ್ಲಿ ಕೂಡ ಆಫ್ ಸ್ಟಂಪ್ ಹೊರಗೆ ಲೆಂಗ್ತ್ ಎಸೆತಗಳಿಗೆ ಔಟಾಗಿರುವುದನ್ನು ನೋಡಬಹುದು.

Virat Kohli Turns Batting Coach To KL Rahul At Training In Adelaide Ahead Of Bangladesh Match

ಕೆಎಲ್ ರಾಹುಲ್‌ಗೆ ಮುಖ್ಯಕೋಚ್ ದ್ರಾವಿಡ್ ಬೆಂಬಲ

ಟಿ20 ವಿಶ್ವಕಪ್ 2022 ರ ಮೊದಲ-ಮೂರು ಪಂದ್ಯಗಳಲ್ಲಿ ಏಕ-ಅಂಕಿಯ ಸ್ಕೋರ್ ಗಳಿಸಲು ವಿಫಲವಾದರೂ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಸೇರಿದಂತೆ ಭಾರತ ತಂಡದ ಆಡಳಿತ ರಾಹುಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

"ಕೆಎಲ್ ರಾಹುಲ್ ಅದ್ಭುತ ಆಟಗಾರ, ಆತನ ದಾಖಲೆಯೇ ಅದನ್ನು ಸಾಬೀತುಪಡಿಸುತ್ತದೆ. ಟಿ20 ಪಂದ್ಯಗಳಲ್ಲಿ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಫಾರ್ಮ್‌ ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಈ ಪಂದ್ಯಾವಳಿಯು ಸವಾಲಿನದ್ದಾಗಿದೆ, ಅಭ್ಯಾಸ ಪಂದ್ಯಗಳಲ್ಲಿ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಮುಂದಿನ ಕೆಲವು ಪಂದ್ಯಗಳಲ್ಲಿ ಎಲ್ಲವೂ ಒಟ್ಟಿಗೆ ಕ್ಲಿಕ್ ಆಗಲಿದೆ ಎಂದು ನಾನು ಭಾವಿಸುತ್ತೇನೆ," ಎಂದು ದ್ರಾವಿಡ್ ಭಾರತದ ವಿರುದ್ಧ ಬಾಂಗ್ಲಾದೇಶದ ಪಂದ್ಯಕ್ಕೆ ಮುನ್ನಾದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬಾಂಗ್ಲಾದೇಶದ ವಿರುದ್ಧದ ಪಂದ್ಯವು ರಾಹುಲ್‌ಗೆ ಅತ್ಯಂತ ನಿರ್ಣಾಯಕವಾಗಿರುತ್ತದೆ, ಬಾಂಗ್ಲಾ ವಿರುದ್ಧ ಆಡುವಲ್ಲಿ ವಿಫಲವಾದರೆ, ಸೆಮಿಫೈನಲ್ ಪಂದ್ಯಗಳಲ್ಲಿ ಅವರನ್ನು ಆಡುವ ಬಳಗದಿಂದ ಕೈಬಿಡುವ ಸಾಧ್ಯತೆ ಇದೆ. ಭಾರತವು ಸೆಮಿಫೈನಲ್‌ಗೆ ಪ್ರವೇಶಿಸುವ ಮೊದಲು ಕೆಎಲ್ ರಾಹುಲ್ ಫಾರ್ಮ್‌ಗೆ ಮರಳುವ ಒತ್ತಡದಲ್ಲಿರುತ್ತಾರೆ.

ರಾಹುಲ್ ಟೀಮ್ ಇಂಡಿಯಾ ಮಾನಸಿಕ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಅವರ ಸಹಾಯವನ್ನು ಕೋರಿದ್ದಾರೆ. ಎಲ್ಲಾ ರೀತಿಯಿಂದ ತಮ್ಮ ಲೋಪಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ.

Story first published: Tuesday, November 1, 2022, 20:09 [IST]
Other articles published on Nov 1, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+