ಬಿರಿಯಾನಿ ಪ್ರಿಯ ಕೊಹ್ಲಿ, ಶುದ್ಧ ಶಾಖಾಹಾರಿ ಆಗಿದ್ದೇಕೆ?

ನವದೆಹಲಿ, ಅಕ್ಟೋಬರ್ 07: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ನೆಚ್ಚಿನ ಚಿಕನ್ ಬಿರಿಯಾನಿಯನ್ನು ಬಿಟ್ಟಿದ್ದಾರಂತೆ. ಸಂಪೂರ್ಣ ಶಾಖಾಹಾರಿ ಡಯೆಟ್ ನಲ್ಲಿದ್ದು, ಸಸ್ಯಾಹಾರ ಸೇವನೆಯಿಂದ ಆರೋಗ್ಯ ಸುಧಾರಿಸಿದೆ ಎಂದು ಹೇಳಿದ್ದಾರೆ.
ಫಿಟ್ ನೆಸ್ ಕಾಪಾಡಿಕೊಳ್ಳಲು ಈ ಕಠಿಣ ನಿರ್ಧಾರ ಅಗತ್ಯವಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದ ಕೇವಲ ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಿದ್ದೇನೆ. ಮೊಟ್ಟೆ ಹಾಗೂ ಇತರೆ ಡೇರಿ ಉತ್ಪನ್ನಗಳು, ಪ್ರಾಣಿಜನ್ಯ ಪ್ರೋಟಿನ್ ಸೇವನೆಯಿಂದ ದೂರವಿದ್ದೇನೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಸಂಪೂರ್ಣ ಶಾಖಾಹಾರಿಯಾಗಿದ್ದು, ಕೊಹ್ಲಿ ಅವರ ಹೊಸ ಡಯೆಟ್ ಪದ್ಧತಿ ರೂಢಿಸಿಕೊಳ್ಳುವಂತೆ ಅನುಷ್ಕಾ ಕೂಡಾ ಪ್ರೇರಿಪಿಸಿರಬಹುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಎರಡು ವರ್ಷದ ಹಿಂದೆ ಸಸ್ಯಹಾರಿಯಾಗಲು ಪ್ರಯತ್ನಿಸುತ್ತೇನೆ ಎಂದಿದ್ದರು. ಆದರೆ, ವಿವಿಧ ಕಾರಣಗಳಿಂದ ಸಾಧ್ಯವಾಗಿರಲಿಲ್ಲ.

ಈ ಕಠಿಣ ನಿರ್ಧಾರ ಅಗತ್ಯವಾಗಿತ್ತು
ಫಿಟ್ ನೆಸ್ ಕಾಪಾಡಿಕೊಳ್ಳಲು ಈ ಕಠಿಣ ನಿರ್ಧಾರ ಅಗತ್ಯವಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದ ಕೇವಲ ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಿದ್ದೇನೆ. ಮೊಟ್ಟೆ ಹಾಗೂ ಇತರೆ ಡೇರಿ ಉತ್ಪನ್ನಗಳು, ಪ್ರಾಣಿಜನ್ಯ ಪ್ರೋಟಿನ್ ಸೇವನೆಯಿಂದ ದೂರವಿದ್ದೇನೆ. ಇದರಿಂದ ಉತ್ತಮ ಫಲಿತಾಂಶ ಸಿಕ್ಕಿದೆ ಎಂದಿದ್ದಾರೆ.

ಯೋ ಯೋ ಟೆಸ್ಟ್ ನಲ್ಲೂ ಮಿಂಚಿದ್ದ ಕೊಹ್ಲಿ
ಅಂತಾರಾಷ್ಟ್ರೀಯ ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಯೋ-ಯೋ ಟೆಸ್ಟ್ ನಲ್ಲಿ ಪಾಸಾಗಲೇಬೇಕೆಂಬ ಮಾನದಂಡವಿದೆ. ಇದರಲ್ಲಿ ಕೊಹ್ಲಿ 19 ಅಂಕ ಪಡೆದು ಗುರುತಿಸಿಕೊಂಡಿದ್ದರು. ಆದರೆ 32ರ ಹರೆಯದ ಹಾಕಿ ಮಿಡ್ ಫೀಲ್ಡರ್ ಸರ್ದಾರ್ 21.4 ಅಂಕಗಳಿಂದ ಕೊಹ್ಲಿಯನ್ನು ಸರಿಗಟ್ಟುವ ಮೂಲಕ ತಾನು ಕೊಹ್ಲಿಗಿಂತ ಫಿಟ್ ಎಂದು ತೋರಿಸಿಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅರ್ಹತೆ ಗಿಟ್ಟಿಸಿಕೊಳ್ಳಬೇಕಾದರೆ ಆಟಗಾರನೊಬ್ಬ ಯೋ-ಯೋ ಟೆಸ್ಟ್ ನಲ್ಲಿ ಕನಿಷ್ಠ 16.1 ಅಂಕ ಪಡೆಯಬೇಕೆಂಬ ಮಾನದಂಡವನ್ನು ಬಿಸಿಸಿಐ ವಿಧಿಸಿದೆ.

ಅನುಷ್ಕಾ ಶರ್ಮ ಪ್ರಭಾವ
ಸಸ್ಯಾಹಾರ, ಪ್ರಾಣಿ ಪ್ರಿಯ, ಪರಿಸರ ಪ್ರೇಮದ ಪರ ಜಾಗೃತಿ ಮೂಡಿಸುವ ನಟಿ ಅನುಷ್ಕಾ ಶರ್ಮ ಅವರು ಅನೇಕ ವರ್ಷಗಳಿಂದ ಸಮತೋಲನ ಆಹಾರ ಪದ್ಧತಿ ಅನುಸರಿಸುತ್ತಿದ್ದಾರೆ. ಕೊಹ್ಲಿ ಅವರು ಈ ಮುಂಚೆ ಚಿಕನ್ ಸೇವಿಸುತ್ತಿದ್ದರೂ, ಸಾಕಷ್ಟು ಸಮಯ ಜಿಮ್ ನಲ್ಲಿ ಬೆವರು ಹರಿಸಿ ಫಿಟ್ ಆಗುತ್ತಿದ್ದರು. ಆದರೆ, ಸ್ನಾಯು ಸೆಳೆತ ಬಾಧಿಸುತ್ತಿತ್ತು. ಈಗ ಪತ್ನಿ ಅನುಷ್ಕಾ ಪ್ರಭಾವದಿಂದ ಸಸ್ಯಾಹಾರಿಯಾಗಿದ್ದು, ಅನೇಕ ಆರೋಗ್ಯ ಸಮಸ್ಯೆಗಳು ದೂರಾಗಿವೆಯಂತೆ.

ಹೆಚ್ಚು ತಾಳ್ಮೆ ಹೊಂದಲು ಸಹಕಾರಿ : ಕೊಹ್ಲಿ
ಈಗಿನ ಆಹಾರ ಪದ್ಧತಿ ನನ್ನನ್ನು ಹೆಚ್ಚೆಚ್ಚು ಸಂಯಮದಿಂದ ವರ್ತಿಸಲು ಪ್ರೇರೇಪಿಸುತ್ತಿದೆ ಎಂದು ಕೊಹ್ಲಿ ಹೇಳಿದ್ದಾರೆ.ಕಳೆದ ಆರು ತಿಂಗಳಿಂದಲೂ ಅಫ್ಘನ್ ತಂಡದ ಫಿಸಿಯೋ ಮತ್ತು ಕಂಡಿಶನಿಂಗ್ ಕೋಚ್‌ಗಳು ಸಹ ಕೊಹ್ಲಿ ಅನುಸರಿಸುವ ಫಿಟ್‌ನೆಸ್ ತಂತ್ರಗಳನ್ನೇ ಆಟಗಾರರ ಮೇಲೂ ಪ್ರಯೋಗಿಸಿದ್ದಾರೆ ಹಾಗಾಗಿ ಎಲ್ಲ ಆಟಗಾರ ಫಿಟ್‌ನೆಸ್‌ನಲ್ಲೂ ಸಾಕಷ್ಟು ಪ್ರಗತಿ ಕಂಡಿದೆ ಎನ್ನುತ್ತಾರೆ ಅಫ್ಘಾನ್ ತಂಡದ ವ್ಯವಸ್ಥಾಪಕ. ಹೀಗಾಗಿ, ಅನೇಕರಿಗೆ ಕೊಹ್ಲಿ ಪ್ರೇರಣೆಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications