ವಿರಾಟ್ ಕೊಹ್ಲಿ ಸಾಧನೆಗೆ ಮತ್ತೊಂದು ವಿಶಿಷ್ಟ ಗರಿ
ಬೆಂಗಳೂರು, ಫೆಬ್ರವರಿ 05: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ವಿಶ್ವ ಕ್ರಿಕೆಟ್ ಪ್ರತಿಷ್ಠಿತ ಗೌರವವೊಂದು ಕೊಹ್ಲಿ ಅವರನ್ನು ಹುಡುಕಿಕೊಂಡು ಬಂದಿದೆ. ವಿಶ್ವ ಕ್ರಿಕೆಟ್‌ನ ಬೈಬಲ್ ಎಂದೇ ಕರೆಯಲ್ಪಡುವ 'ವಿಸ್ಡೆನ್ ಕ್ರಿಕೆಟರ್ಸ್' ಪುಸ್ತಕ ತನ್ನ ಮುಖಪುಟದಲ್ಲಿ ಕೊಹ್ಲಿ ಫೋಟೊ ವನ್ನು ಪ್ರಕಟಿಸಲಾಗಿದೆ.
ಏಪ್ರಿಲ್ 06ರ ವಿಸ್ಡೆನ್ ಆವೃತ್ತಿಯಲ್ಲಿ ಕೊಹ್ಲಿ ಫೋಟೊ ಹೊಂದಿರುವ ಮುಖುಪ ಪುಸ್ತಕ ಪ್ರಕಟಗೊಳ್ಳಲಿದೆ. ಟೆಸ್ಟ್ ಅಥವಾ ನಿಗದಿತ ಓವರ್ ಕ್ರಿಕೆಟ್ ಮಾದರಿಯಲ್ಲಿ ರಿವರ್ಸ್ ಸ್ವೀಪ್ ಅತಿ ವಿರಳ ಹೊಡೆತವಾಗಿದ್ದು, ಕೊಹ್ಲಿ ಅವರು ರಿವರ್ಸ್ ಸ್ವೀಪ್ ಹೊಡೆತ ಬಾರಿಸುತ್ತಿರುವ ಫೋಟೊ ಬಳಸಿಕೊಳ್ಳಲಾಗಿದೆ.

ಮೈದಾನದಲ್ಲಿ ಕೊಹ್ಲಿ ಮಾಡಿರುವ ಸಾಧನೆಗಳನ್ನು ವಿಸ್ಡೆನ್ ಸಂಪಾದಕ ಲಾರೆನ್ಸ್ ಬೂತ್ ಹೊಗಳಿದ್ದಾರೆ. ಪ್ರಸಕ್ತ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಕ್ರಿಕೆಟರ್ ಎಂದಿದ್ದಾರೆ, ಹಳದಿ ಬಣ್ಣದ ಮುಖಪುಟ ವಿನ್ಯಾಸ ಹೊಂದಿರುವ ಚಿತ್ರವನ್ನು ವಿಸ್ಡನ್ ಟ್ವೀಟ್ ಮಾಡಿದೆ.
2014ರಲ್ಲಿ ಸಚಿನ್ ತೆಂಡೂಲ್ಕರ್ ಅವರ ಫೋಟೊವನ್ನು ವಿಸ್ಡೆನ್ ತನ್ನ ಮುಖಪುಟದಲ್ಲಿ ಪ್ರಕಟಿಸಿತ್ತು. ಇದಾದ ಬಳಿಕ ಈ ಗೌರವಕ್ಕೆ ಪಾತ್ರರಾದ ಎರಡನೇ ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿ.(ಏಜೆನ್ಸೀಸ್)
Story first published: Wednesday, January 3, 2018, 10:04 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications