Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Team India Victory Parade: ಆ ದಿನವನ್ನು ನಾನು ಎಂದಿಗೂ ಮರೆಯಲಾರೆ; ವಿರಾಟ್ ಕೊಹ್ಲಿ

ಜುಲೈ 4 ಗುರುವಾರ, ಕಳೆದ ವರ್ಷ ಮುಕ್ತಾಯಗೊಂಡ 2023ರ ಏಕದಿನ ವಿಶ್ವಕಪ್‌ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್‌ ಬ್ಯಾಟರ್‌ ವಿರಾಟ್ ಕೊಹ್ಲಿ ಅವರ ಕಣ್ಣುಗಳನ್ನು ನೋಡಿ ಕೋಟ್ಯಾಂತರ ಹೃದಯಗಳು ಮುರಿದಿದ್ದವು.

ಇದೀಗ ಅದೇ ಹೃದಯಗಳು ಈ ವರ್ಷ ಜೂನ್ 29 ರಂದು ಟೀಮ್‌ ಇಂಡಿಯಾ ಟಿ20 ವಿಶ್ವಕಪ್‌ ಗೆದ್ದ ಸಂಭ್ರಮವನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. ಪಂದ್ಯದ ಬಳಿಕ ಮೈದಾನದಲ್ಲಿ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಆಳುತ್ತಿರುವಾಗ ಪ್ರತಿ ಕಣ್ಣೀರಿನ ಹನಿಗಳನ್ನು ಅಭಿಮಾನಿಗಳು ಎಣಿಸಿದ್ದಾರೆ.

Virat Kohli Victory Parade Speech at Wankhede

ಬಾರ್ಬಡೋಸ್‌ನಿಂದ ಟ್ರೋಫಿಯೊಂದಿಗೆ ತವರಿಗೆ ಟೀಮ್‌ ಇಂಡಿಯಾ ಹಿಂದಿರುಗಿದ ನಂತರ ಕ್ರಿಕೆಟ್‌ ಕಾಶಿ ಮುಂಬೈನಲ ವಾಂಖೆಡೆಯಲ್ಲಿ ಅಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ತಮ್ಮ ಅತ್ಯಂತ ಸ್ಮರಣೀಯ ದಿನದ ಬಗ್ ಮಾತನಾಡಿದ್ದಾರೆ.

ಪ್ರಶಸ್ತಿ ಗೆಲುವಿನ ನಂತರ ವಿರಾಟ್ ಕೊಹ್ಲಿ ಅವರ ಭಾವನೆಗಳ ಬಗ್ಗೆ ಕೇಳಿದಾಗ, ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ಕ್ಷಣವನ್ನು ಪ್ರಸ್ತಾಪಿಸಿದ್ದಾರೆ. ತಮ್ಮ ಹಾಗೂ ರೋಹಿತ್ ಬಗ್ಗೆ ಹೃದಯ ಸ್ಪರ್ಶಿ ಹೇಳಿಕೆಯನ್ನೂ ಕೊಹ್ಲಿ ನೀಡಿದ್ದಾರೆ.

Virat Kohli Victory Parade Speech at Wankhede

ಆ ದಿನವನ್ನು ನಾನು ಎಂದಿಗೂ ಮರೆಯಲಾರೆ

ವಿರಾಟ್ ಕೊಹ್ಲಿ ಸೇರಿದಂತೆ ಟೀಮ್‌ ಇಂಡಿಯಾ ಆಟಗಾರರಿಗೆ ಜುಲೈ 4 ಸ್ಮರಣೀಯ ದಿನವಾಗಿದೆ. ವಿಜಯೋತ್ಸವದ ಪರೇಡ್‌ನಲ್ಲಿ ಸಾವಿರಾರು ಅಭಿಮಾನಿಗಳೊಂದಿಗೆ ವಿಜಯೋತ್ಸವ ಆಚರಿಸಿದ ವಿರಾಟ್ ಕೊಹ್ಲಿ ವಾಂಖೆಡೆಯಲ್ಲಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

"ನಾನು ಮೆಟ್ಟಿಲು ಹತ್ತುವಾಗ ಅಳುತ್ತಿದ್ದೆ. ರೋಹಿತ್ ಅಳುತ್ತಿದ್ದರು. ಆ ಕ್ಷಣವನ್ನು ನಾವು ಎಂದಿಗೂ ಮರೆಯುವುದಿಲ್ಲ. ನಾವಿಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಹೆಮ್ಮೆ ಪಡುತ್ತಿದ್ದೆವು" ಎಂದು ಐತಿಹಾಸಕ ದಿನದ ಬಗ್ಗೆ ಕೊಹ್ಲಿ ತಿಳಿಸಿದ್ದಾರೆ.

Virat Kohli Victory Parade Speech at Wankhede

ಟ್ರೋಫಿ ಗೆಲ್ಲುವುದು ನಮ್ಮ ಗುರಿ

ವಿರಾಟ್ ಕೊಹ್,ಲಿ ರೋಹಿತ್ ಶರ್ಮಾ ಜೊತೆ ತ್ರಿವರ್ಣ ಧ್ವಜವನ್ನು ಸುತ್ತಿ ತೆಗೆಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿತ್ತು. ಈ ಬಗ್ಗೆ ಕೊಹ್ಲಿ ಅವರನ್ನು ಕೇಳಿದಾಗ 'ರೋಹಿತ್ ಮತ್ತು ನಾನು ಬಹಳ ಸಮಯದಿಂದ ಆಡುತ್ತಿದ್ದೇವೆ. ಮೊದಲು ನಾನು ನಾಯಕನಾಗಿದ್ದೆ ಮತ್ತು ಅವರು ಸೀನಿಯರ್ ಆಗಿದ್ದರು.

ಈಗ ಅವರು ಕ್ಯಾಪ್ಟನ್ ಮತ್ತು ನಾನು ಸೀನಿಯರ್. ಆದರೆ ತಂಡಕ್ಕೆ ಟ್ರೋಫಿ ಗೆಲ್ಲುವುದು ನಮ್ಮ ಗುರಿಯಾಗಿತ್ತು. ಮೊದಲ ಬಾರಿಗೆ ರೋಹಿತ್ ಮೈದಾನದಲ್ಲಿ ತುಂಬಾ ಭಾವುಕತೆಯನ್ನು ತೋರಿಸುವುದನ್ನು ನೋಡಿದ್ದೇನೆ. ಆ ಸಮಯದಲ್ಲಿ ನಾವಿಬ್ಬರೂ ಅಳುತ್ತಿದ್ದೆವು ಎಂದು ಕೊಹ್ಲಿ ಹೇಳಿದ್ದಾರೆ.

Story first published: Thursday, July 4, 2024, 23:49 [IST]
Other articles published on Jul 4, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+