ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಬೌಲಿಂಗ್‌ನಲ್ಲಿ ಬೆಸ್ಟ್ ಯಾರು ಗೊತ್ತಾ?!

ಬೆಂಗಳೂರು: ಸಚಿನ್ ತೆಂಡೂಲ್ಕರ್ ಅವರಿಗೆ ಕ್ರಿಕೆಟ್ ದೇವರು ಅನ್ನೋ ಹೆಸರಿದೆ. ಬ್ಯಾಟಿಂಗ್‌ನಲ್ಲಿ ಸಚಿನ್ ಸರಿಸಾಟಿಯಿಲ್ಲದ ಸಾಧನೆ ತೋರಿದ್ದಾರೆ. ವಿಶ್ವದಾಖಲೆಗಳನ್ನು ಉಳಿಸಿದ್ದಾರೆ. ಆದರೆ ಸಚಿನ್ ಬೌಲಿಂಗ್‌ನಲ್ಲೂ ಅದ್ಭುತ ಸಾಧನೆ ಮಾಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 145 ಇನ್ನಿಂಗ್ಸ್‌ಗಳಲ್ಲಿ ಸಚಿನ್ 46 ವಿಕೆಟ್ ಪಡೆದಿದ್ದಾರೆ. ಇನ್ನು 270 ಏಕದಿನ ಇನ್ನಿಂಗ್ಸ್‌ಗಳಲ್ಲಿ 154 ವಿಕೆಟ್‌ಗಳು, 1 ಟಿ20ಐ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ದಾಖಲೆ ಹೊಂದಿದ್ದಾರೆ.
ಫೆಬ್ರವರಿ 5ರಿಂದ ಆರಂಭಗೊಳ್ಳಲಿರುವ ಭಾರತ-ಇಂಗ್ಲೆಂಡ್ ಸರಣಿಗೆ ಸಜ್ಜಾಗುತ್ತಿರುವ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಕೂಡ ಒಂದಿಷ್ಟು ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ವಿಕೆಟ್ ಕೂಡ ಪಡೆದಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರಲ್ಲಿ ಅತ್ಯುತ್ತಮ ಬೌಲಿಂಗ್ ಸಾಧನೆ ಯಾರು ಮಾಡಿದ್ದಾರೆ ಅನ್ನೋದು ಗೊತ್ತಾ? ಆ ಕುತೂಹಲಕಾರಿ ಅಂಕಿ-ಅಂಶಗಳು ಇಲ್ಲಿವೆ.

ವಿರಾಟ್ ಕೊಹ್ಲಿ ಬೌಲಿಂಗ್ ಸಾಧನೆ
ಬ್ಯಾಟಿಂಗ್‌ನಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ರನ್ ಮಷೀನ್ ಕೊಹ್ಲಿ ಸಚಿನ್ ಎಲ್ಲಾ ದಾಖಲೆಗಳನ್ನು ಸರಿಗಟ್ಟುತ್ತಾರೆ ಎಂದು ಹೇಳುವವರೇ ಹೆಚ್ಚು. ಒಂದಿಷ್ಟು ಪಂದ್ಯಗಳಲ್ಲಿ ಬೌಲಿಂಗ್ ಕೂಡ ಮಾಡಿರುವ ಕೊಹ್ಲಿ 11 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 0 ವಿಕೆಟ್, 48 ಏಕದಿನ ಇನ್ನಿಂಗ್ಸ್‌ಗಳಲ್ಲಿ 4 ವಿಕೆಟ್, 84 ಟಿ20ಐ ಇನ್ನಿಂಗ್ಸ್‌ಗಳಲ್ಲಿ 4 ವಿಕೆಟ್, 26 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 4 ವಿಕೆಟ್‌ಗಳನ್ನು ಪಡೆದಿದ್ದಾರೆ.

ಹಿಟ್‌ಮ್ಯಾನ್ ಶರ್ಮಾ ಬೌಲಿಂಗ್
ಏಕದಿನ ಕ್ರಿಕೆಟ್‌ನಲ್ಲಿ ಈಗಲೂ ಅತ್ಯಧಿಕ ವೈಯಕ್ತಿಕ ರನ್ ದಾಖಲೆ ಹೊಂದಿರುವ (264 ರನ್) ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕೂಡ ಬೌಲಿಂಗ್ ಮಾಡಿದ್ದಾರೆ. ವಿಕೆಟ್‌ಗಳನ್ನೂ ಪಡೆದಿದ್ದಾರೆ. ರೋಹಿತ್ 15 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 2 ವಿಕೆಟ್, 38 ಏಕದಿನ ಇನ್ನಿಂಗ್ಸ್‌ಗಳಲ್ಲಿ 8 ವಿಕೆಟ್, 9 ಟಿ20ಐ ಇನ್ನಿಂಗ್ಸ್‌ಗಳಲ್ಲಿ 1 ವಿಕೆಟ್, 30 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 15 ವಿಕೆಟ್ ದಾಖಲೆ ಹೊಂದಿದ್ದಾರೆ.

ಆಸೀಸ್ ವಿರುದ್ಧ ಬೌಲ್ ಮಾಡಿದ್ದ ರೋಹಿತ್
ವಿರಾಟ್ ಕೊಹ್ಲಿ ಬೌಲಿಂಗ್‌ನಲ್ಲಿ 8 ಅಂತಾರಾಷ್ಟ್ರೀಯ ವಿಕೆಟ್+4 ಐಪಿಎಲ್ ವಿಕೆಟ್‌ಗಳನ್ನು ಪಡೆದಿದ್ದರೆ, ರೋಹಿತ್ ಶರ್ಮಾ 11 ಅಂತಾರಾಷ್ಟ್ರೀಯ ವಿಕೆಟ್‌ಗಳು+15 ಐಪಿಎಲ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಲೆಕ್ಕಾಚಾರದಲ್ಲಿ ರೋಹಿತ್ ಅವರು ಬೌಲಿಂಗ್‌ನಲ್ಲಿ ಕೊಂಚ ಎತ್ತರದಲ್ಲಿ ಕಾಣುತ್ತಾರೆ. ಅಂದ್ಹಾಗೆ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲೂ ರೋಹಿತ್ ಬೌಲಿಂಗ್ ಮಾಡಿದ್ದರು ಅನ್ನೋದು ಗೊತ್ತೇ?. 4ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ವೇಗಿ ನವದೀಪ್ ಸೈನಿ 7.5 ಓವರ್ ಎಸೆದು ಗಾಯಗೊಂಡು ಮೈದಾನದಿಂದ ಹೊರ ನಡೆದಾಗ ರೋಹಿತ್ 1 ಎಸೆತ ಎಸೆದು ಓವರ್ ಮುಗಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications