
ಅಂಪಾಯರ್‌ಗಳ ಮೇಲೆ ಪ್ರಭಾವ
"ನಾಲ್ಕನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ಕೈತೋರಿಸುತ್ತಾ ಮನವಿಯನ್ನು ಮಾಡುತ್ತಿದ್ದರು. ಜೊತೆಗೆ ದಿನದ ಮಧ್ಯದ ಸೆಶನ್‌ನಲ್ಲಿ ಎರಡು ಆಘಾತಕಾರಿ ವಿಮರ್ಶೆಗಳ ಮೊರೆಹೋದರು. ಕಾಮೆಂಟೇಟರ್‌ಗಳು ವಿರಾಟ್ ಕೊಹ್ಲಿ ತಂಡವನ್ನು ಮೇಲೆತ್ತಲು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದರು. ಆದರೆ ನನ್ನ ಪ್ರಕಾರ ಅವರು ಅಂಪಾಯರ್‌ಗಳ ಮೇಲೆ ವಿರಾಟ್ ಕೊಹ್ಲಿ ಪ್ರಭಾವ ಬೀರಲು ಪ್ರಯತ್ನ ಮಾಡಿದ್ದಾರೆ" ಎಂದು ಡೇವಿಡ್ ಲಾಯ್ಡ್ ಆರೋಪಿಸಿದ್ದಾರೆ.

ಕೊಹ್ಲಿಯ ಮೇಲೆ ಒತ್ತಡ
ಇನ್ನು ಇದೇ ಸಂದರ್ಭದಲ್ಲಿ ಲಾಯ್ಡ್ ಟೀಮ್ ಇಂಡಿಯಾ ನಾಯ ವಿರಾಟ್ ಕೊಹ್ಲಿ ಈಗ ಒತ್ತಡವನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ ಬಳಿಕ ಭಾರತದಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಲಾಯ್ಡ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಚಾರ ಗಮನಕ್ಕೆ ಬಾರದಿರಲು ಸಾಧ್ಯವಿಲ್ಲ
"ಈ ವಿಚಾರ ಗಮನಕ್ಕೆ ಬಾರದಿರಲು ಸಾಧ್ಯವಿಲ್ಲ. ಟೀಮ್ ಇಂಡಿಯಾದ ನಾಯಕನಾಗಿ ಅಜಿಂಕ್ಯ ರಹಾನೆ ಅದ್ಭುತವಾಗಿ ಆಸ್ಟ್ರೇಲಿಯಾದಲ್ಲಿ ತಂಡವನ್ನು ಮುನ್ನಡೆಸಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದರ ತಾಪವನ್ನು ಅನುಭವಿಸುತ್ತಿದ್ದಾರೆ" ಎಂದು ಡೇವಿಡ್ ಲಾಯ್ಡ್ ಡೈಲಿ ಮೇಲ್ ಪತ್ರಿಕೆಗೆ ಬರೆದ ಅಂಕಣದಲ್ಲಿ ಬರೆದುಕೊಂಡಿದ್ದಾರೆ.

ಡಿಕ್ಲೇರ್ ವಿವಾದ ವಿಚಾರ
ಇನ್ನು ಇಂಗ್ಲೆಂಡ್ ತಂಡ ತಡವಾಗಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಬಗ್ಗೆಯೂ ಲಾಯ್ಡ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಇಂಗ್ಲೆಂಡ್ ತಂಡಕ್ಕೆ ಸಾಕಷ್ಟು ವೀಕ್ಷಕರು, ಪಂಡಿತರು ಹಾಗೂ ಮಾಧ್ಯಗಳು ನೋಡುತ್ತಿದ್ದಾರೆ ಎಂದು ತಿಳಿದಿದೆ. ಆದರೆ ತಂಡಕ್ಕೆ ಅಗತ್ಯವಿರುವ ನಿರ್ಧಾರವನ್ನು ಅವರು ತೆಗೆದುಕೊಳ್ಳುತ್ತಾರೆ. ತಮ್ಮ ನಿರ್ಧಾರ ತಪ್ಪಾಗಿದ್ದರೆ ಅದರ ಪರಿಣಾಮಗಳನ್ನು ಅವರೇ ಎದುರಿಸುತ್ತಾರೆ. ಅವರ ನಿರ್ಧಾರ ಸರಿಯಾಗಿದೆಯಾ ಎಂಬುದನ್ನು ಸಮಯವೇ ಹೇಳಲಿದೆ. ನಾನಾಗಿದ್ದರೆ ತಂಡದ ಲೀಡ್ 400 ಆಗಿದ್ದಾಗ ಡಿಕ್ಲೇರ್ ಮಾಡಿಕೊಳ್ಳುತ್ತಿದ್ದೆ" ಎಂದಿದ್ದಾರೆ ಡೇವಿಡ್ ಲಾಯ್ಡ್.


Click it and Unblock the Notifications
