ಇಂಗ್ಲೆಂಡ್ ಸರಣಿಯಲ್ಲಿ ಕೊಹ್ಲಿ ಅತ್ಯಧಿಕ ರನ್ ಗಳಿಸುತ್ತಾರೆ: ಇಂಗ್ಲೆಂಡ್ ಮಾಜಿ ಆಟಗಾರ

ಲಂಡನ್: ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ವಿರಾಟ್ ಕೊಹ್ಲಿ ಮುಂದಾಳತ್ವದ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲಿದೆ. ಅದಾಗಿ ಭಾರತಕ್ಕೆ ಆತಿಥೇಯ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಈ ವರ್ಷ ಭಾರತಕ್ಕೆ ಬಂದಿದ್ದ ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೋತು ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅರ್ಹತೆಯನ್ನು ಕಳೆದುಕೊಂಡಿತ್ತು. ಈ ಸೋಲಿನ ಸೇಡನ್ನು ಮುಂಬರಲಿರುವ ಟೆಸ್ಟ್ ಸರಣಿಯಲ್ಲಿ ತೀರಿಸಲು ಜೋ ರೂಟ್ ಪಡೆ ಎದುರು ನೋಡುತ್ತಿದೆ. ಆಂಗ್ಲರಿಗೆ ತವರಿನಲ್ಲಿ ಸರಣಿ ನಡೆಯುತ್ತಿರುವುದರಿಂದ ಗೆಲುವು ಭಾರತದ ಪಾಲಿಗೆ ಕಠಿಣವೆನಿಸಲಿದೆ.
ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಸರಣಿಯಲ್ಲಿ ಅತೀ ಹೆಚ್ಚು ರನ್ ಗಳಿಸುತ್ತಾರೆ ಎಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಹೇಳಿದ್ದಾರೆ. 2018ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದಾಗ ಕೊಹ್ಲಿ ಮುಂಚೂಣಿ ರನ್ ಸರದಾರನಾಗಿ ಕಾಣಿಸಿಕೊಂಡಿದ್ದರು. ಐದು ಪಂದ್ಯಗಳಲ್ಲಿ 59.30ರ ಸರಾಸರಿಯಂತೆ 593 ರನ್ ಗಳಿಸಿದ್ದರು. ಈ ಬಾರಿಯೂ ಇದೇ ಮುಂದುವರೆಯಲಿದೆ ಎಂದು ಪನೇಸರ್ ಹೇಳಿದ್ದಾರೆ.
'ಈ ಬಾರಿಯೂ ವಿರಾಟ್ ಕೊಹ್ಲಿ ಪಾಲಿಗೆ ಇದು ಒಳ್ಳೆಯ ಟೆಸ್ಟ್ ಸರಣಿ ಆಗಲಿದೆ. ಕೊಹ್ಲಿ ಮುಂಚೂಣಿ ರನ್ ಸರದಾರನಾಗಿ ಕಾಣಿಸಿಕೊಳ್ಳುತ್ತಾರೆ ಎಂದು ನನಗನ್ನಿಸುತ್ತಿದೆ. ಎರಡೂ ತಂಡಗಳ ಕದನ ಕುತೂಹಲ ಮೂಡಿಸಲಿದೆ,' ಎಂದು ಪನೇಸರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications