Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸಿಸ್ ಟಿ20 ವಿಶ್ವಕಪ್‌ ಗೆಲ್ಲಲು ವಿರಾಟ್ ಕೊಹ್ಲಿ ಅಡ್ಡಿ : ಸ್ಟೀವ್ ಸ್ಮಿತ್

Virat Kohli Will Break Many Records: Steve Smith

ಟಿ20 ವಿಶ್ವಕಪ್‌ಗೆ ಇನ್ನುಳಿದಿರುವುದು ಕೇವಲ ಹತ್ತೇ ತಿಂಗಳು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್‌ ಸೆನ್ಸೇಶನ್ ಸ್ಟೀವ್ ಸ್ಮಿತ್ ಈ ಬಾರಿಯ ಟಿ20 ವಿಶ್ವಕಪ್‌ ಆಸ್ಟ್ರೇಲಿಯಾ ಗೆಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ. ಆದರೆ ಇದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಡ್ಡಿಯಾಗಿದ್ದಾರೆ ಎಂಬುದನ್ನು ಇದೇ ಸಂದರ್ಭದಲ್ಲಿ ಸ್ಮಿತ್ ಹೇಳಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ಭಾರತದ ವಿರುದ್ಧ ಏಕದಿನ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡ ಬಳಿಕ ಸ್ಟೀವ್ ಸ್ಮಿತ್ ಈ ಹೇಳಿಕೆಯನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ತಂಡ ಬಲಿಷ್ಟವಾಗಿದ್ದು ಈ ಬಾರಿಯ ಟಿ20 ವಿಶ್ವಕಪ್‌ಅನ್ನು ತನ್ನ ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ

ಆಸ್ಟ್ರೇಲಿಯಾ ಮತ್ತು ಈ ಬಾರಿಯ ವಿಶ್ವಕಪ್‌ ಟ್ರೋಫಿಯ ಮಧ್ಯೆ ಇರೋದು ವಿರಾಟ್ ಕೊಹ್ಲಿ ಮಾತ್ರ ಅಡ್ಡಿಯಾಗಿದ್ದಾರೆ. ವಿರಾಟ್ ಹೊರತುಪಡಿಸಿ ಯಾರಿಂದಲೂ ಆಸ್ಟ್ರೇಲಿಯಾ ವಿಶ್ವಕಪ್‌ ಗೆಲ್ಲುವುದನ್ನು ತಡೆಯಲು ಸಾಧ್ಯವಿಲ್ಲ ಎಂಬ ಮಾತನ್ನು ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಹೇಳಿಕೆ ನೀಡಿದ್ದಾರೆ. ಖಾಸಗಿ ಸುದ್ಧಿ ಸಂಸ್ಥೆಯ ಜೊತೆಗೆ ಇಮೇಲ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಸ್ಮಿತ್ ಸಾಕಷ್ಟು ವಿಚಾರಗಳನ್ನು ಮನಸಾರೆ ಹಂಚಿಕೊಂಡಿದ್ದಾರೆ.

ಕೊಹ್ಲಿಯನ್ನು ಮನಸಾರೆ ಹೊಗಳಿದ ಸ್ಮಿತ್:

ಕೊಹ್ಲಿಯನ್ನು ಮನಸಾರೆ ಹೊಗಳಿದ ಸ್ಮಿತ್:

ಸ್ಟೀವ್ ಸ್ಮಿತ್ ಮಾಧ್ಯಮಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ಸ್ಟೀವ್ ಸ್ಮಿತ್ ಟೀಮ್ ಇಂಡಿಯಾ ನಾಯಕನ ಆಟವನ್ನು ಮನಸಾರೆ ಹೊಗಳಿದ್ದಾರೆ. ಎದುರಾಳಿಗಳ ಪಾಲಿಗೆ ಕೊಹ್ಲಿ ಓರ್ವ ಭಯಾನಕ ಆಟಗಾರ. ಆತ ಎಂತಾ ಆಟಗಾರ ಎಂಬುದನ್ನು ಆತನ ಆಟದ ಅಂಕಿ ಸಂಖ್ಯೆಗಳೇ ಹೇಳುತ್ತದೆ ಎಂದಿದ್ದಾರೆ.

ಇನ್ನಷ್ಟು ದಾಖಲೆಯನ್ನು ಮುರಿಯಲಿದ್ದಾರೆ.

ಇನ್ನಷ್ಟು ದಾಖಲೆಯನ್ನು ಮುರಿಯಲಿದ್ದಾರೆ.

ವಿರಾಟ್ ಕೊಹ್ಲಿ ಈಗಾಗಲೇ ಸಾಕಷ್ಟು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅವರು ಇನ್ನಷ್ಟು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ ಎಂಬ ಮಾತನ್ನು ಸ್ಟೀವ್ ಸ್ಮಿತ್ ವಿರಾಟ್ ಕೊಹ್ಲಿಯ ಬಗ್ಗೆ ಮಾತನಾಡುತ್ತಾ ಹೇಳಿದ್ದಾರೆ.

ಕೊಹ್ಲಿ ನಾಯಕತ್ವದ ಬಗ್ಗೆಯೂ ಸ್ಮಿತ್ ಮೆಚ್ಚುಗೆ:

ಕೊಹ್ಲಿ ನಾಯಕತ್ವದ ಬಗ್ಗೆಯೂ ಸ್ಮಿತ್ ಮೆಚ್ಚುಗೆ:

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಅದ್ಭುತ ರೀತಿಯಲ್ಲಿ ಮುನ್ನಡೆಸುತ್ತಾರೆ. ಟೆಸ್ಟ್‌ನಲ್ಲಿ ಟೀಮ್ ಇಂಡಿಯಾವನ್ನು ಒಂದನೇ ಸ್ಥಾನದಲ್ಲೇ ಮುಂದುವರಿಸಿದ್ದಾರೆ. ತಂಡದ ಆಟಗಾರರಿಗೆ ಸ್ಪೂರ್ತಿಯನ್ನು ತುಂಬುವ ಕೊಹ್ಲಿ ಆರೋಗ್ಯ ಮತ್ತು ಫಿಟ್‌ನೆಸ್ ಬಗ್ಗೆಯೂ ತುಂಬಾ ಗಮನ ನೀಡುತ್ತಾರೆ ಎಂದಿದ್ದಾರೆ.

ಕ್ರಿಕೆಟ್ ಲೋಕದಲ್ಲಿ ಸ್ಮಿತ್, ಕೊಹ್ಲಿ ಮಧ್ಯೆ ಹೋಲಿಕೆ:

ಕ್ರಿಕೆಟ್ ಲೋಕದಲ್ಲಿ ಸ್ಮಿತ್, ಕೊಹ್ಲಿ ಮಧ್ಯೆ ಹೋಲಿಕೆ:

ಕ್ರಿಕೆಟ್‌ ಲೋಕದಲ್ಲಿ ಸದ್ಯ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಮಧ್ಯೆ ಯಾರು ಅತ್ಯುತ್ತಮ ಆಟಗಾರ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಾಲಿ ಮಾಜಿ ಆಟಗಾರರು ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಸ್ಟೀವ್ ಸ್ಮಿತ್ ಟೀಮ್ ಇಂಡಿಯಾ ನಾಯಕನನ್ನು ಮನಸಾರೆ ಹೊಗಳಿದ್ದಾರೆ.

Story first published: Thursday, January 23, 2020, 12:22 [IST]
Other articles published on Jan 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+