For Quick Alerts
ALLOW NOTIFICATIONS  
For Daily Alerts
 

ನಾಯಕತ್ವ ಇಲ್ಲದೆಯೂ ಕೊಹ್ಲಿ ಮುರಿಯಲಿದ್ದಾರೆ ಹಲವು ದಾಖಲೆ: ವಿರಾಟ್ ಬೆನ್ನಿಗೆ ನಿಂತ ರಿಕಿ ಪಾಂಟಿಂಗ್

Virat Kohli will break more records without captaincy: Ricky Pointing backs Indian Former skipper

ಟೀಮ್ ಇಂಡಿಯಾದ ಟೆಸ್ಟ್ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಕ್ಕಿಳಿದು ಹಲವು ದಿನಗಳೇ ಕಳೆದರೂ ಆ ಬಗ್ಗೆ ಇನ್ನೂ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇದೆ. ಅನೇಕ ದಿಗ್ಗಜ ಕ್ರಿಕೆಟಿಗರು ಅಭಿಮಾನಿಗಳು ಈ ವಿಚಾರವಾಗಿ ನಿತ್ಯವೂ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರೆನಿಸಿದ ರಿಕಿ ಪಾಂಟಿಂಗ್ ಕೂಡ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಕ್ಕಿಳಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಕೊಹ್ಲಿಯ ಈ ನಿರ್ಧಾರ ತನಗೆ ಆಘಾತ ನೀಡಿತು ಎಂದಿದ್ದಾರೆ. ಆದರೆ ತನ್ನ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ನೀಡುವ ಕಾರಣದಿಂದಾಗಿ ವಿರಾಟ್ ಕೊಹ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಪಾಂಟಿಂಗ್ ಅಭಿಪ್ರಾಯಟ್ಟಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್‌ನ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತದ ಕ್ರಿಕೆಟ್ ಮತ್ತು ಎತ್ತರಕ್ಕೇರಿತು, ಅದರಲ್ಲೂ ವಿಶೇಷವಾಗಿ ವಿದೇಶಿ ನೆಲದಲ್ಲಿ ಟೆಸ್ಟ್ ಪಂದ್ಯಗಳನ್ನು ಹಿಂದೆಂದೂ ಗೆಲ್ಲದಷ್ಟು ಪ್ರಮಾಣದಲ್ಲಿ ಗೆಲುವು ಸಾಧಿಸಲು ಆರಂಭಿಸಿತ್ತು ಎಂದಿದ್ದಾರೆ.

"ಹೌದು ವಿರಾಟ್ ಕೊಹ್ಲಿಯ ನಿರ್ಧಾರ ನನಗೆ ಅಚ್ಚರಿಯನ್ನು ಮಾಡಿದ್ದು ನಿಜ. ನನಗೆ ಶಾಕ್ ಆಯಿತು. ಅದಕ್ಕೆ ಕಾರಣ ನಾನು ಕೊಹ್ಲಿಯ ಜೊತೆಗೆ ಐಪಿಎಲ್ 2021ರ ಆವೃತ್ತಿಯ ಮೊದಲಾರ್ಧದ ಸಂದರ್ಭದಲ್ಲಿ ಮಾತನಾಡಿದ್ದೆ. ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ವೈಟ್‌ಬಾಲ್ ಕ್ರಿಕೆಟ್‌ನ ನಾಯಕತ್ವದಿಂದ ಕೆಳಕ್ಕಿಳಿಯುವ ಬಗ್ಗೆ ಮಾತನಾಡಿದ್ದರು. ಆದರೆ ಅವರಿಗೆ ಟೆಸ್ಟ್ ಮಾದರಿಯಲ್ಲಿ ನಾಯಕನಾಗಿ ಮುಂದುವರಿಯುವ ಹಂಬಲವಿತ್ತು. ಆತ ಟೆಸ್ಟ್ ಮಾದರಿಯ ನಾಯಕತ್ವವನ್ನು ಬಹಳ ಆನಂದಿಸುತ್ತಿದ್ದ ಹಾಗೂ ಅದಕ್ಕೆ ಬದ್ಧನಾಗಿದ್ದ. ಆದರೆ ನನಗೆ ಯಾವಾಗ ಈ ವಿಚಾರ ತಿಳಿಯಿತೋ ಆಗ ನಾನು ನಿಜಕ್ಕೂ ಬಹಳ ಶಾಕ್‌ಗೆ ಒಳಗಾಗಿದ್ದೆ" ಎಂದು ರಿಕಿ ಪಾಂಟಿಂಗ್ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಕ್ಕಿಳಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಆದರೆ ನಾಯಕನಾಗಿ ಸಾಕಷ್ಟು ಅನುಭವ ಪಡೆದುಕೊಂಡಿರುವ ಕಾರಣ ವಿರಾಟ್ ಕೊಹ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಬಹಳ ಯೋಚನೆ ಮಾಡಿರುತ್ತಾರೆ ಎಂದು ಪಾಂಟಿಂಗ್ ಹೇಳಿದ್ದಾರೆ. "ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಯಕನಿಗೆ ಹಾಗೂ ಕೋಚ್‌ಗೆ ಕೂಡ ಒಮದು ಅವಧಿಯಿರುತ್ತದೆ. ವಿರಾಟ್ ಕೊಹ್ಲಿ ಈ ಸ್ಥಾನಕ್ಕೇರಿ ಅದಾಗಲೇ 7 ವರ್ಷಗಳಾಗಿದೆ. ಜಗತ್ತಿನಲ್ಲಿ ನಾಯಕತ್ವ ವಹಿಸಲು ಅತ್ಯಂತ ಕಷ್ಟಕರವಾದ ದೇಶವಿದ್ದರೆ ಅದು ಬಹುಶಃ ಭಾರತವೇ ಆಗಿರುತ್ತದೆ. ಯಾಕೆಂದರೆ ಭಾರತದಲ್ಲಿ ಕ್ರಿಕೆಟ್ ಎಂಬುದು ಅಷ್ಟು ಪ್ರಮಾಣದಲ್ಲಿ ಜನಪ್ರಿಯವಾಗಿದೆ. ಪ್ರತಿಯೊಬ್ಬ ಭಾರತೀಯ ಕೂಡ ತಂಡದ ಯಶಸ್ಸನ್ನು ನೋಡಲು ಇಷ್ಟಪಡುತ್ತಾರೆ" ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

"ವಿರಾಟ್ ಕೊಹ್ಲಿಗೆ ಈಗ 33 ವರ್ಷ ವಯಸ್ಸು. ಅವರ ಇನ್ನೂ ಸಾಕಷ್ಟು ವರ್ಷಗಳ ಕಾಲ ಕ್ರಿಕೆಟ್ ಆಡಲಿದ್ದಾರೆ ಎಂಬುದು ಸ್ಪಷ್ಟ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹಲವಾರು ದಾಕಳೆಗಳನ್ನು ಕಂಡಿತಾ ಮುರಿಯಲಿದ್ದಾರೆ. ವಿರಾಟ್ ಕೊಹ್ಲಿಗೆ ಈ ಸಂದರ್ಭದಲ್ಲಿ ನಾಯಕತ್ವದ ಹೆಚ್ಚುವರಿ ಹೊಣೆಗಾರಿಗೆ ಕೂಡ ಇಲ್ಲದಿರುವ ಕಾರಣ ಸ್ವಲ್ಪ ಪ್ರಮಾಣದಲ್ಲಿ ಸುಲಭವಾಗಿಯೇ ಈ ಮೈಲಿಗಲ್ಲುಗಳನ್ನು ಸಾಧಿಸಲಿದ್ದಾರೆ" ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

Story first published: Monday, January 31, 2022, 15:41 [IST]
Other articles published on Jan 31, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+