Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿಗೆ ಕ್ಯಾಪ್ಟನ್ ಆಗುವ ಕಾಲ ಕೂಡಿ ಬಂದಿಲ್ಲ!

ಅಡಿಲೇಡ್, ಡಿ.2: ವಿರಾಟ್ ಕೊಹ್ಲಿ ಅವರಿಗೆ ಟೀಂ ಇಂಡಿಯಾದ ಟೆಸ್ಟ್ ನಾಯಕನಾಗುವ ಯೋಗ ಇನ್ನೂ ಕೂಡಿ ಬಂದಿಲ್ಲ. ಗಾಯಗೊಂಡು ಮೊದಲ ಟೆಸ್ಟ್ ನಿಂದ ಹೊರಗುಳಿದಿದ್ದ ಎಂಎಸ್ ಧೋನಿ ಅವರು ತಂಡಕ್ಕೆ ಮರಳುವ ಸಾಧ್ಯತೆಯಿದ್ದು, ಡಿ.9ರಂದು ತಂಡವನ್ನು ಮುನ್ನಡೆಸಲಿದ್ದಾರೆ.

ಕೈ ಗಾಯದಿಂದಾಗಿ ಸರಣಿಯ ಮೊದಲ ಟೆಸ್ಟ್ ಪಂದ್ಯದಿಂದ ಧೋನಿ ಹೊರಗುಳಿದಿದ್ದರು. ಹೀಗಾಗಿ ಧೋನಿ ಅವರ ಹೆಸರನ್ನು ಮೊದಲ ಟೆಸ್ಟ್ ತಂಡದ ಪಟ್ಟಿಯಿಂದ ಕೈಬಿಡಲಾಗಿತ್ತು. ಈ ಮುಂಚೆ ಪ್ರಕಟಿಸಿದ್ದ ವೇಳಾಪಟ್ಟಿಯಂತೆ ಅಡಿಲೇಡ್ ನಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ಲಭ್ಯರಾಗುವುದಾಗಿ ಧೋನಿ ಹೇಳಿದ್ದರು.

Virat Kohli will have to wait; MS Dhoni set to lead in 1st Test

ಆಸ್ಟ್ರೇಲಿಯಾದ ಕ್ರಿಕೆಟರ್ ಫಿಲ್ ಹ್ಯೂಸ್​ ಅವರ ಅಕಾಲಿಕ ಸಾವಿನ ಹಿನ್ನಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​​ ಸರಣಿ ವೇಳಾಪಟ್ಟಿ ಬದಲಾಯಿಸಲಾಗಿದೆ. ಮೊದಲ ಟೆಸ್ಟ್ ದಿನಾಂಕ(ಡಿ.4) ಮುಂದೂಡಿ ಡಿ.9 ರಂದು ಮೊದಲ ಟೆಸ್ಟ್ ಆಡಿಸಲಾಗುತ್ತಿದೆ. ಜೊತೆಗೆ ಬ್ರಿಸ್ಬೇನ್ ​​ನಿಂದ ಅಡಿಲೇಡ್ ಗೆ ಮೊದಲ ಟೆಸ್ಟ್ ​​ ಶಿಫ್ಟ್ ಆಗಿದೆ.[ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ]

ಡಿ.4 ರಂದು ಕ್ರಿಕೆಟ್ ಆಸ್ಟ್ರೇಲಿಯಾ XI ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನಾಡಲಿದೆ. ಅದರೆ, ಧೋನಿ ಅವರು ಈ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಮೊದಲ ಟೆಸ್ಟ್(ಡಿ.9) ಆರಂಭಕ್ಕೆ ಮುನ್ನ ತಂಡವನ್ನು ಸೇರಲಿದ್ದಾರೆ ಎಂದು ತಂಡ ವಕ್ತಾರ ಡಾ. ರೆಧಿಲ್ಸ್ ಬಾಬಾ ಹೇಳಿದ್ದಾರೆ. [ಫಿಲ್ ಹ್ಯೂಸ್ ದುರಂತ ಸಾವು ]

ಹ್ಯೂಸ್ ಗೆ ಅಂತಿಮ ನಮನ: ಹ್ಯೂಸ್ ಅವರ ಅಂತಿಮ ಸಂಸ್ಕಾರ ಡಿ.3 ರಂದು ಅವರ ಊರಾದ ಮಾಕ್ಸ್ ವಿಲ್ಲೆಯಲ್ಲಿ ನಡೆಯಲಿದೆ. ಟೀಂ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಮುರಳಿ ವಿಜಯ್ ಕೋಚ್ ಡಂಕನ್ ಫ್ಲೆಚರ್, ಟೀಂ ನಿರ್ದೇಶಕ ರವಿಶಾಸ್ತ್ರಿ, ಮ್ಯಾನೇಜರ್ ಅರ್ಷದ್ ಅಯೂಬ್ ಅವರು ಪಾಲ್ಗೊಳ್ಳಲಿದ್ದಾರೆ. (ಪಿಟಿಐ)

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+