ಆರ್‌ಸಿಬಿ ನಾಯಕನಾಗಿ ಮುಂದುವರೆಯಲಿರುವ ವಿರಾಟ್ ಕೊಹ್ಲಿ!
ಜುಲೈ 2 ಮಂಗಳವಾರ, ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಸನು ನಸಾಗಿದೆ. 2024ರ ಟಿ20 ವಿಶ್ವಕಪ್ ಅನ್ನು ಟೀಮ್ ಇಂಡಿಯಾ ಗೆದ್ದಿದೆ. ಸುಮಾರು 17 ವರ್ಷಗಳ ನಂತರ ಎರಡನೇ ಟಿ20 ವಿಶ್ವಕಪ್ ಅನ್ನು ಭಾರತ ಮುಡಿಗೇರಿಸಿಕೊಂಡಿದೆ.
ಈ ಐತಿಹಾಸಿಕ ಗೆಲುವಿನ ಸಂಭ್ರಮಾಚರಣೆಯಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸಂಘಟಿತ ಹೋರಾಟ ನೀಡಿದೆ.

ಇದರ ಪ್ರತಿಫಲ ಟ್ರೋಫಿಯನ್ನು ಭಾರತ ಗೆದ್ದು ಬೀಗಿದೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಹಾಗೂ ಚಾಂಪಿಯನ್ಸ್ ಟ್ರೋಫಿಗಳಲ್ಲಿ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಆಡಲಿದ್ದಾರೆ.
ಟಿ20 ವಿಶ್ವಕಪ್‌ಗೆ ವಿದಾಯ ಹೇಳಿರುವ ವಿರಾಟ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪರ ಕಣಕ್ಕೀಳಿಯಲಿದ್ದಾರೆ. ಈ ಸುದ್ದಿ ವಿರಾಟ್ ಕೊಹ್ಲಿ ಆಭಿಮಾನಿಗಳಿಗೆ ಸಂತಸ ತಂದಿದೆ. ಆದರೆ ಇದಕ್ಕೂ ದೊಡ್ಡ ಸಂಸತದ ವಿಚಾರವೊಂದು ಆಭಿಮಾನಿಗಳಿಗೆ ಸಿಗುವ ನಿರೀಕ್ಷೆಯಿದೆ.
ಆರ್‌ಸಿಬಿ ಫ್ರಾಂಚೈಸಿ, ತನ್ನ ಕಪ್ ಗೆಲ್ಲುವ ಕಸನನ್ನು ನನಸು ಮಾಡಿಕೊಳ್ಳಲು ವಿರಾಟ್ ಕೊಹ್ಲಿ ಅವರ ಮನವೊಲಿಸಿ ನಾಯಕತ್ವವನ್ನು ವಹಿಸಿಕೊಳ್ಳುವಂತೆ ಮನವಿ ಮಾಡಲಿದೆ ಎಂದು ಕ್ರಿಕೆಟ್ ಮೂಲಗಳು ಹೇಳಿವೆ.
ಆರ್‌ಸಿಬಿ ಫ್ಯಾನ್ಸ್‌ಗೆ ಖುಷಿ ಸುದ್ದಿ
ಐಪಿಎಲ್ 2024ರ ಟೂರ್ನಿಯಲ್ಲಿ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿ ಎಲಿಮಿನೇಟರ್‌ಗೆ ಆರ್ಹತೆ ಪಡೆದಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸಿದ ಆರ್‌ಸಿಬಿ ತಂಡವು ರಾಜಸ್ತಾನ ರಾಯಲ್ಸ್ ವಿರುದ್ಧ ಹೀನಾಯವಾಗಿ ಸೋಲು ಕಂಡಿತ್ತು. ಪರಿಣಾಮ ಈ ಬಾರಿ ಕಪ್ ಗೆಲ್ಲುವ ಆಸೆ ಈಡೇರಲಿಲ್ಲ.
ಇದೀಗ ಮುಂಬರುವ 18ನೇ ಆವೃತ್ತಿ ಐಪಿಎಲ್‌ನಲ್ಲಿ ಟೂರ್ನಿಯಲ್ಲಿ ಶತಾಯಗತಾಯ ಕಪ್ ಗೆಲ್ಲಲ್ಲೇ ಬೇಕು ಎಂದು ಆರ್‌ಸಿಬಿ ಪಾಳಯದಲ್ಲಿ ತೆರೆ ಮರೆಯ ತಯಾರಿಗಳು ನಡೆದಿವೆ. ಆರ್‌ಸಿಬಿ ತಂಡದ ಅನುಭವಿ ವಿಕೆಟ್‌ಕೀಪರ್ ಮತ್ತು ಬ್ಯಾಟರ್ ದಿನೇಶ್ ಕಾರ್ತಿಕ್ ಐಪಿಎಲ್‌ಗೆ ಗುಡ್ ಬೈ ಹೇಳಿದ ಬಳಿಕ ಅವರನ್ನೇ ತಂಡಕ್ಕೆ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಆಯ್ಕೆ ಮಾಡಲಾಗಿದೆ.
ಈ ಬೆನ್ನಲ್ಲೆ ವಿರಾಟ್ ಕೊಹ್ಲಿ ಅವರಿಗೆ ನಾಯಕತ್ವ ಮತ್ತೆ ಸಿಗಲಿದೆ ಎಂಬ ಸುದ್ದಿ ಬಂದಿರುವುದು ನಿಜಕ್ಕೂ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಪರ ಆರಂಭಿಕ ಆವೃತ್ತಿಯಿಂದಲ್ಲೂ ಆಡಿಕೊಂಡು ಬಂದಿದ್ದಾರೆ.
ಈ ಮೂಲಕ ಐಪಿಎಲ್‌ನಲ್ಲಿ ಒಂದೇ ತಂಡದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯನ್ನು ಸಹ ಕೊಹ್ಲಿ ಹೊಂದಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಉಪಸ್ಥಿತಿಯಲ್ಲಿ ಆರ್‌ಸಿಬಿ ಒಮ್ಮೆ ಕಪ್ ಗೆಲ್ಲಬೇಕು ಎಂಬುದೇ ಅಭಿಮಾನಿಗಳ ಆಶಯವಾಗಿದೆ.
ಯಶಸ್ವಿ ನಾಯಕ ವಿರಾಟ್ ಕೊಹ್ಲಿ
ನಾಯನಾಗಿ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಯಶ ಕಂಡಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಕಪ್ ಗೆಲ್ಲದೆ ಇದ್ದರೂ ಇವರು ಗೆಲುವಿನ ಲೆಕ್ಕಚಾರದಲ್ಲಿ ಎಂಎಸ್ ಧೋನಿ, ರೋಹಿತ್ ಶರ್ಮಾ ಬಳಿಕದ ಸ್ಥಾನದಲ್ಲಿದ್ದಾರೆ.
ವಿರಾಟ್ 2011ರಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಾ ಬಂದಿದ್ದು, 2023ಕ್ಕೆ ನಾಯಕತ್ವದಿಂದ ಕೆಳಗಿದ್ದರು. ಈ ವರೆಗೆ ವಿರಾಟ್ 143 ಪಂದ್ಯಗಳಲ್ಲಿ 66 ಜಯ 70 ಸೋಲು ಕಂಡಿದ್ದಾರೆ.
ಫಾಪ್ ಬಳಿಕ ಆರ್‌ಸಿಬಿ ಕ್ಯಾಪ್ಟನ್ ಯಾರು?
ಆರ್‌ಸಿಬಿ ತಂಡದ ಜವಾಬ್ದಾರಿಯನ್ನು ಫಾಪ್ ಡುಪ್ಲೆಸಿಸ್ ನಾಯಕನಾಗಿ ಹೊತ್ತು ಮುನ್ನೆಡೆಸುತ್ತಿದ್ದಾರೆ. ಫಾಪ್ ನಾಯಕತ್ವದಲ್ಲೂ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿದೆ. ಸದ್ಯ ಫಾಪ್ ಅವರಿಗೆ 40 ವರ್ಷ ವಾಗಿದ್ದು, ಮುಂದಿನ ನಾಯಕನ ಹುಡುಕಾಟದಲ್ಲಿ ಆರ್‌ಸಿಬಿ ತಂಡ ಇದೆ.
ಇನ್ನೊಂದೆಡೆ ಸಖತ್ ಫಿಟ್ ಆಗಿರುವ 36 ವರ್ಷದ ವಿರಾಟ್, ಇನ್ನು ನಾಲ್ಕು ವರ್ಷ ಐಪಿಎಲ್ ಆಡಬಹುದು. ಹೀಗಾಗಿ ಆರ್‌ಸಿಬಿ ತಂಡ ಕೊಹ್ಲಿ ಅವರಿಗೆ ಮತ್ತೊಮ್ಮೆ ನಾಯಕನ ಪಟ್ಟ ಕಟ್ಟಲು ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೆ ಏರಿ, ಕಪ್ ಗೆಲ್ಲುವ ಬರವನ್ನು ನೀಗಿಸಿಕೊಳ್ಳಲಿ ಎಂಬುದೇ ಅಭಿಮಾನಿಗಳ ಆಶಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications