'ಫಿಟ್ನೆಸ್ ಉಳಿಸಿಕೊಂಡರೆ ಕೊಹ್ಲಿ ಶತಕದ ಶತಕ ಖಂಡಿತಾ ಬಾರಿಸುತ್ತಾರೆ'

ನವದೆಹಲಿ, ಜನವರಿ 16: ಇನ್ನುಳಿದ ವೃತ್ತಿ ಜೀವನದಲ್ಲೂ ವಿರಾಟ್ ಕೊಹ್ಲಿ ಇದೇ ಫಿಟ್ನೆಸ್ ಉಳಿಸಿಕೊಂಡರೆ ಮುಂದೊಂದು ದಿನ ಅಂತಾರಾಷ್ಟ್ರೀಯ ಶತಕದ ಶತಕ ಬಾರಿಸುತ್ತಾರೆ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೇಳಿದ್ದಾರೆ.
ಮಂಗಳವಾರ (ಜನವರಿ 15) ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಕೊಹ್ಲಿ 39ನೇ ಏಕದಿನ ಶತಕ (104 ರನ್) ಬಾರಿಸಿದ್ದರು. ಇದು ಕೊಹ್ಲಿ ಅವರಿಂದಾದ 64ನೇ ಅಂತಾರಾಷ್ಟ್ರೀಯ ಶತಕವೂ ಹೌದು. ಕೊಹ್ಲಿಯ ಈ ಅಪ್ರತಿಮ ಸಾಧನೆಯನ್ನು ಗಮನಿಸಿರುವ ಅಜರ್, ಟೀಮ್ ಇಂಡಿಯಾ ಕ್ಯಾಪ್ಟನ್ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

'ಸದ್ಯ ವಿರಾಟ್ ಕೊಹ್ಲಿ ಅವರ ಸ್ಥಿರತೆ ತುಂಬಾ ಚೆನ್ನಾಗಿದೆ. ಇದೇ ಸ್ಥಿರತೆಯನ್ನು ಕೊಹ್ಲಿ ಉಳಿಸಿಕೊಂಡರೆ ಮುಂದೊಮ್ಮೆ ಅವರು 100 ಶತಕಗಳನ್ನು ಖಂಡಿತಾ ಬಾರಿಸುತ್ತಾರೆ' ಎಂದು 'ಆಜ್ ತಕ್' ಚಾನೆಲ್ ಜೊತೆ ಮಾತನಾಡುತ್ತ ಅಜರ್ ಬುಧವಾರ (ಜನವರಿ 16) ಅಭಿಪ್ರಾಯಿಸಿದ್ದಾರೆ.
ಪಂದ್ಯದಲ್ಲಿ ಅರ್ಧ ಶತಕ (55 ರನ್) ಕೊಡುಗೆಯೊಂದಿಗೆ ತಂಡದ ಗೆಲುವಿಗೆ ಕಾರಣರಾದ ಮಾಜಿ ನಾಯಕ ಎಂಎಸ್ ಧೋನಿಯನ್ನೂ ಮೊಹಮ್ಮದ್ ಶ್ಲಾಘಿಸಿದ್ದಾರೆ. ಕೊಹ್ಲಿ ಶತಕ, ಧೋನಿ ಅರ್ಧಶತಕ ಕಾಣಿಕೆಯೊಂದಿಗೆ ಭಾರತ 2ನೇ ಏಕದಿನ ಪಂದ್ಯವನ್ನು 6 ವಿಕೆಟ್ ನಿಂದ ಜಯಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications