ಸಿಡ್ನಿ, 4ನೇ ಟೆಸ್ಟ್: ವಿಶೇಷತೆಯೊಂದಿಗೆ ಅಭಿಮಾನಿಗಳ ಮನಗೆದ್ದ ಕೊಹ್ಲಿ


ಸಿಡ್ನಿ, ಜನವರಿ 5: ಕುಂತರೂ ನಿಂತರೂ ಅಭಿಮಾನಿಗಳ ಗಮನ ಸೆಳೆದು ಸುದ್ದಿಯಾಗುವ ಭಾರತದ ನೆಚ್ಚಿನ ನಾಯಕ ವಿರಾಟ್ ಕೊಹ್ಲಿ. ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯಲ್ಲೂ ಕೊಹ್ಲಿ ಆಕರ್ಷಣೆಯ ಬಿಂದುವಾಗಿದ್ದಾರೆ. ಅಷ್ಟೇ ಅಲ್ಲ, ವಿಶೇಷ ದಿರಿಸಿನೊಂದಿಗೆ ಆಸೀಸ್ ಅಭಿಮಾನಿಗಳ ಹೃದಯವೂ ಗೆದ್ದಿದ್ದಾರೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಆರಂಭವಾದ ಇತ್ತಂಡಗಳ ನಡುವಣ 4ನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಮೊದಲ ಇನ್ನಿಂಗ್ಸ್‌ಗೆ ಇಳಿದಿತ್ತು. ಈ ವೇಳೆ ನಾಲ್ಕನೇ ಕ್ರಮಾಂಕದಲ್ಲಿ ಕೊಹ್ಲಿ ಬ್ಯಾಟಿಂಗ್‌ಗೆ ತೆರಳುವಾಗ ವಿಶೇಷ ದಿರಿಸಿನಲ್ಲಿ ಗಮನ ಸೆಳೆದಿದ್ದರು.
ಬ್ಯಾಟಿಂಗ್‌ಗೆ ತೆರಳುವಾಗ ಕೊಹ್ಲಿ ಬ್ಯಾಟ್ ಮೇಲೆ ಬರೆದಿರುವ ಎಂಆರ್‌ಎಫ್ ಬಣ್ಣ, ಪ್ಯಾಡ್ ಮೇಲಿನ ಬರಹ, ಗ್ಲೌಸ್ ಎಲ್ಲವೂ ಪಿಂಕ್ ಬಣ್ಣಕ್ಕೆ ಬದಲಾಗಿತ್ತು. ಸಾಲದ್ದಕ್ಕೆ ವಿಕೆಟ್, ಚೆಂಡಿನ ಬಣ್ಣವೂ ಪಿಂಕ್ ಬಣ್ಣದಲ್ಲಿದ್ದಿದ್ದರಿಂದ ಕೊಹ್ಲಿ ಅಂದು ಕಣ್ಮನ ಸೆಳೆದಿದ್ದರು.

ಯಾಕೀ ಪಿಂಕ್ ಬಣ್ಣ?
ಕೊಹ್ಲಿ ಪಿಂಕ್ ಬಣ್ಣದ ಗ್ಲೌಸ್, ಪ್ಯಾಡ್ ಇತ್ಯಾದಿ ಧರಿಸಿದ್ದು ಸ್ತನ ಕ್ಯಾನ್ಸರ್ ಕುರಿತು ಜಾಗೃತೆ ಮೂಡಿಸುವ ಸಲುವಾಗಿ. ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ನಿಧಿ ಸಂಗ್ರಹಿಸಲು ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ಲೆನ್ ಮೆಕ್‌ಗ್ರಾತ್ ಅವರಿಗೆ ಕೊಹ್ಲಿ ಆವತ್ತು ಸಹಕಾರ ನೀಡಿದ್ದರು.

ಶನಿವಾರವೂ ಪಿಂಕ್‌ಮಯ
ಶನಿವಾರ (ಜನವರಿ 5) ನಡೆದ ಇತ್ತಂಡಗಳ ನಡುವಣ 4ನೇ ಟೆಸ್ಟ್‌ನ 3ನೇ ದಿನದಾಟದ ವೇಳೆ ಇಡೀ ಸಿಡ್ನಿ ಕ್ರಿಕೆಟ್ ಗ್ರೌಂಡ್ ಪಿಂಕ್ ಬಣ್ಣಕ್ಕೆ ತಿರುಗಿತ್ತು. ಸ್ತನ ಕ್ಯಾನ್ಸರ್ ನಿಯಂತ್ರಣಕ್ಕಾಗಿ ಗ್ಲೆನ್ ಮೆಕ್‌ಗ್ರಾತ್ ನಡೆಸುತ್ತಿರುವ ಜಾನೆ ಮೆಕ್‌ಗ್ರಾತ್ ಫೌಂಡೇಷನ್ ಗಾಗಿ ನಿಧಿ ಸಂಗ್ರಹಿಸುವ ಸಲುವಾಗಿ ಆ ವೇಳೆ ಬದಲಾವಣೆ ಕಾಣಿಸಿತ್ತು. ಈ ಪಂದ್ಯವನ್ನು 'ಪಿಂಕ್ ಡೇ ಟೆಸ್ಟ್' ಎಂದು ಆಚರಿಸಲಾಯಿತು.

ಮೆಕ್‌ಗ್ರಾತ್ ಫೌಂಡೇಷನ್ ಟ್ವೀಟ್
ನಿಧಿ ಸಂಗ್ರಹಕ್ಕಾಗಿ ಸಹಕಾರ ನೀಡಿದ ವಿರಾಟ್ ಕೊಹ್ಲಿ ಮತ್ತು ಬಳಗವನ್ನು ಮೆಕ್‌ಗ್ರಾತ್ ಪೌಂಡೇಷನ್ ಕೊಂಡಾಗಿದೆ. 'ಪಿಂಕ್ ಬ್ಯಾಟ್ ಮತ್ತು ಗ್ಲೌಸ್ ಧರಿಸುವ ಮೂಲಕ ವಿರಾಟ್ ಕೊಹ್ಲಿ ಅವರು ಮೆಕ್‌ಗ್ರಾತ್ ಫೌಂಡೇಷನ್‌ಗೆ ಅಪೂರ್ವ ಬೆಂಬಲ ನೀಡಿದ್ದಾರೆ' ಎಂದು ಮೆಗ್ ಫೌಂಡೇಷನ್ ಧನ್ಯವಾದಗಳನ್ನು ಸೂಚಿಸಿ ಟ್ವೀಟ್ ಮಾಡಿದೆ.

ಪಿಂಕ್‌ಕ್ಯಾಪ್ ಉಡುಗೊರೆ
3ನೇ ದಿನದಾಟದ ವೇಳೆ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ಮಾಜಿ ಆಟಗಾರ ಮೆಕ್‌ಗ್ರಾತ್ ಅವರಿಗೆ ಸಹಿ ಮಾಡಿರುವ ಪಿಂಕ್ ಕ್ಯಾಪ್ ವಿತರಿಸಿದರು. ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ನಿಧಿ ಸಂಗ್ರಹಿಸುತ್ತಿರುವ ಜಾನೆ ಮೆಕ್‌ಗ್ರಾತ್ ಫೌಂಡೇಷನ್‌ಗೆ ಬೆಂಬಲಾರ್ಥವಾಗಿ ಕೊಹ್ಲಿ ಬಳಗ ಪಿಂಕ್ ಕ್ಯಾಪ್ ನೀಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications