Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ವಿಶ್ವಕಪ್: ಭಾರತೀಯ ವನಿತೆಯರ ತಂಡಕ್ಕೆ ಶುಭ ಹಾರೈಸಿ ಸಂದೇಶ ನೀಡಿದ ವಿರಾಟ್ ಕೊಹ್ಲಿ

Virat Kohli wishes Team India ahead of Womens World Cup 2022

ಒಂದೆಡೆ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಟೆಸ್ಟ್ ಸರಣಿ ಮಾರ್ಚ್ 4ರಂದು ಮೊಹಾಲಿಯಲ್ಲಿ ನಡೆಯಲಿರುವ ವಿರಾಟ್ ಕೊಹ್ಲಿ ನೂರನೇ ಟೆಸ್ಟ್ ಪಂದ್ಯದ ಮೂಲಕ ಆರಂಭವಾಗುತ್ತಿದ್ದರೆ, ಮತ್ತೊಂದೆಡೆ ಮಹಿಳಾ ವಿಶ್ವಕಪ್ ಟೂರ್ನಿ ಇದೇ ದಿನದಂದು ನ್ಯೂಜಿಲೆಂಡ್‌ನಲ್ಲಿ ಶುರುವಾಗಲಿದೆ. ಹೌದು, ನಾಳೆ (ಮಾರ್ಚ್ 4) ಟೌರಂಗಾದ ಬೇ ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆಯಲಿರುವ ಪಂದ್ಯದ ಮೂಲಕ ಈ ಬಾರಿಯ ಮಹಿಳಾ ವಿಶ್ವಕಪ್ ಟೂರ್ನಿ ಆರಂಭಗೊಳ್ಳುತ್ತಿದ್ದು, ಮಾರ್ಚ್ 5ರಂದು ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ವನಿತೆಯರು ತಮ್ಮ ಬದ್ಧ ವೈರಿಯಾದ ಆಸ್ಟ್ರೇಲಿಯಾ ಮಹಿಳಾ ತಂಡವನ್ನು ಎದುರಿಸಲಿದ್ದಾರೆ ಮತ್ತು ಮಾರ್ಚ್ 6ರಂದು ಭಾರತ ವನಿತೆಯರ ತಂಡ ತನ್ನ ಬದ್ಧ ವೈರಿಯಾದ ಪಾಕಿಸ್ತಾನ ವನಿತೆಯರ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.

ಇನ್ನು ಮಾರ್ಚ್ 6ರಂದು ನಡೆಯಲಿರುವ ಭಾರತ ವನಿತೆಯರ ತಂಡ ಮತ್ತು ಪಾಕಿಸ್ತಾನ ವನಿತೆಯರ ತಂಡಗಳ ನಡುವಿನ ಪಂದ್ಯ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು ಇತ್ತಂಡಗಳ ಆಟಗಾರ್ತಿಯರು ಈಗಾಗಲೇ ಪಂದ್ಯಕ್ಕಾಗಿ ಕಠಿಣ ಅಭ್ಯಾಸಗಳನ್ನು ನಡೆಸುತ್ತಿದ್ದಾರೆ. ಇನ್ನು ಟೂರ್ನಿ ಆರಂಭಕ್ಕೂ ಮುನ್ನ ಭಾರತ ವನಿತೆಯರ ತಂಡ ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಂಡು ನ್ಯೂಜಿಲೆಂಡ್ ವನಿತೆಯರ ತಂಡದ ವಿರುದ್ಧ ನಡೆದ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1 - 4 ಅಂತರದಲ್ಲಿ ಹೀನಾಯ ಸೋಲನ್ನು ಕಂಡಿತ್ತು. ನ್ಯೂಜಿಲೆಂಡ್ ವಿರುದ್ಧದ ಈ ಸರಣಿಯ ಅಂತಿಮ ಪಂದ್ಯದಲ್ಲಿ ಜಯ ಸಾಧಿಸಿದ ಭಾರತೀಯ ವನಿತೆಯರ ತಂಡ ವೈಟ್ ವಾಷ್ ಮುಖಭಂಗದಿಂದ ಪಾರಾಗಿದ್ದು, ಸದ್ಯ ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳಲ್ಲಿ ಜಯ ಸಾಧಿಸಿ ವಿಶ್ವಾಸವನ್ನು ಮೂಡಿಸಿದೆ.

ಹೌದು, ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ವನಿತೆಯರ ತಂಡ ಹಾಗೂ ದಕ್ಷಿಣ ಆಫ್ರಿಕಾ ವನಿತೆಯರ ತಂಡಗಳ ವಿರುದ್ಧ ಗೆಲುವು ಸಾಧಿಸಿದ ಭಾರತೀಯ ವನಿತೆಯರ ತಂಡ ಯಶಸ್ಸಿನ ಹಾದಿಗೆ ಮರಳಿದ್ದು, ಇದೇ ರೀತಿಯ ಪ್ರದರ್ಶನವನ್ನು ಟೂರ್ನಿಯಲ್ಲಿಯೂ ನೀಡಲಿದೆ ಎಂಬ ವಿಶ್ವಾಸವನ್ನು ಹುಟ್ಟುಹಾಕಿದೆ. ಇನ್ನು ಭಾರತೀಯ ವನಿತೆಯರ ಕ್ರಿಕೆಟ್ ತಂಡಕ್ಕೆ ಈ ಹಿಂದಿನಿಂದಲೂ ಸಾಕಷ್ಟು ಬೆಂಬಲವನ್ನು ನೀಡುತ್ತಾ ಬಂದಿರುವ ವಿರಾಟ್ ಕೊಹ್ಲಿ ಇದೀಗ ಆರಂಭವಾಗಲಿರುವ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಸಜ್ಜಾಗಿರುವ ಭಾರತೀಯ ವನಿತೆಯರ ಕ್ರಿಕೆಟ್ ತಂಡಕ್ಕೆ ಶುಭಾಶಯವನ್ನು ಕೋರಿದ್ದಾರೆ.

ಹೌದು, ಮಹಿಳಾ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ನೇರ ಪ್ರಸಾರ ಮಾಡಲಿರುವ ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಭಾರತೀಯ ವನಿತೆಯರ ತಂಡದ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿರುವ ವಿರಾಟ್ ಕೊಹ್ಲಿ ಭಾರತೀಯ ವನಿತೆಯರ ಕ್ರಿಕೆಟ್ ತಂಡವನ್ನು ಬೆಂಬಲಿಸಲು ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ, ಭಾರತ ವನಿತೆಯರ ತಂಡ ಹಾಗೂ ಪಾಕಿಸ್ತಾನ ವನಿತೆಯರ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ಸಜ್ಜಾಗಿ ಮತ್ತು ಟೂರ್ನಿಯುದ್ದಕ್ಕೂ ಭಾರತೀಯ ವನಿತೆಯರ ತಂಡಕ್ಕೆ ನಿಮ್ಮ ಬೆಂಬಲವನ್ನು ಸೂಚಿಸಿ ಎಂದು ಬರೆದುಕೊಳ್ಳುವುದರ ಮೂಲಕ ಸಂದೇಶವನ್ನು ನೀಡಿದ್ದಾರೆ.

ಭಾರತ ಮಹಿಳಾ ತಂಡ: ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್ ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್.

Story first published: Thursday, March 3, 2022, 21:39 [IST]
Other articles published on Mar 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+