For Quick Alerts
ALLOW NOTIFICATIONS  
For Daily Alerts
 

Virat Kohli: 'ಅವನು ನನ್ನ ಅಭಿಮಾನಿ, ಏನೂ ಮಾಡಬೇಡಿ'; ಭದ್ರತಾ ಸಿಬ್ಬಂದಿಗೆ ಸೂಚಿಸಿ ಫ್ಯಾನ್ಸ್ ಮನ ಗೆದ್ದ ವಿರಾಟ್ ಕೊಹ್ಲಿ

ಶನಿವಾರ, ಏಪ್ರಿಲ್ 6ರಂದು ಜೈಪುರದಲ್ಲಿ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ 2024 ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸೋಲು ಕಂಡಿತು.

ಆದರೆ, ಅಭಿಮಾನಿಗಳಿಗೆ ಸಂತೋಷದ ವಿಷಯವೆಂದರೆ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶತಕ ಬಾರಿಸಿದರು. ಅಲ್ಲದೆ ಮೈದಾನದಲ್ಲಿ ತಾವು ತೋರಿದ ವ್ಯಕ್ತಿತ್ವದಿಂದಾಗಿ ಅಭಿಮಾನಿಗಳ ಮನಸ್ಸನ್ನೂ ಗೆದ್ದರು.

Virat Kohli won fans Heart by asking the Security Guards to Be Gentle with the Pitch Invader

ಏಕೆಂದರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿ ವಂಚಿಸಿ ಮೈದಾನಕ್ಕೆ ನುಗ್ಗಿ ಸ್ಟಾರ್ ಕ್ರಿಕೆಟಿಗನನ್ನು ತಬ್ಬಿದನು.

ಈ ವೇಳೆ ಭದ್ರತಾ ಸಿಬ್ಬಂದಿ ತಕ್ಷಣವೇ ಮೈದಾನಕ್ಕೆ ಪ್ರವೇಶಿಸಿ ಪಿಚ್ ಆಕ್ರಮಣಕಾರನನ್ನು ಹೊರಗೆ ಕರೆದುಕೊಂಡು ಹೋದರು. ಈ ಅಭಿಮಾನಿ ಜೈಪುರ ಸ್ಟೇಡಿಯಂನ ಬ್ಯಾರಿಕೇಡ್ ದಾಟಿ ಮೈದಾನದತ್ತ ನುಸುಳಿದ್ದನು.

ಆಗ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಅವನು ನನ್ನ ಅಭಿಮಾನಿ, ಏನೂ ಮಾಡಬೇಡಿ ಸೌಮ್ಯವಾಗಿ ನಡೆದುಕೊಳ್ಳುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಈ ಮೂಲಕ ವಿರಾಟ್ ಕೊಹ್ಲಿ ತಮ್ಮ ವ್ಯಕ್ತಿತ್ವದಿಂದ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿದ್ದಾರೆ.

Virat Kohli won fans Heart by asking the Security Guards to Be Gentle with the Pitch Invader

ಪಿಚ್ ಆಕ್ರಮಣಕಾರನು ವಿರಾಟ್ ಕೊಹ್ಲಿ ಅವರ ಹೆಸರು ಮತ್ತು ನಂಬರ್ ಇರುವ ಆರ್‌ಸಿಬಿ ತಂಡದ ಜೆರ್ಸಿಯನ್ನು ಧರಿಸಿದ್ದನು. ತನ್ನ ಅಭಿಮಾನಿಯ ಮೇಲೆ ವಿರಾಟ್ ಕೊಹ್ಲಿಯ ಪ್ರೀತಿ ಕಂಡು ನೆಟ್ಟಿಗರು ಉಘೇ ಕೊಹ್ಲಿ ಎಂದಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಆರ್‌ಸಿಬಿ ಪಂದ್ಯದ ವೇಳೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದರಿಂದ, ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅಭಿಮಾನಿ ಪಿಚ್ ಆಕ್ರಮಣ ಮಾಡಿದ ಮೊದಲ ನಿದರ್ಶನ ಅಲ್ಲ.

ಈ ಹಿಂದೆ ಪಿಚ್ ಆಕ್ರಮಣಕಾರನಿಗೆ ಭದ್ರತಾ ಸಿಬ್ಬಂದಿಗಳು ಕ್ರೂರವಾಗಿ ಥಳಿಸುವ ವಿಡಿಯೋ ತೋರಿಸಿದ್ದರಿಂದ, ಅಭಿಮಾನಿಯನ್ನು ನಡೆಸಿಕೊಂಡಿರುವ ಮತ್ತು ಪಿಚ್ ಆಕ್ರಮಣಕಾರನಿಗೆ ನೀಡುವ ಟ್ರೀಟ್‌ಮೆಂಟ್ ಕಠಿಣವಾಗಿದೆ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮದ ಮೂಲಕ ಹೇಳಿಕೊಂಡಿದ್ದರು.

ಬಹುಶಃ ಘಟನೆ ಮರುಕಳಿಸದಂತೆ ತಡೆಯುವ ಉದ್ದೇಶದಿಂದ ವಿರಾಟ್ ಕೊಹ್ಲಿ ಯುವಕನೊಂದಿಗೆ ಮೃದುವಾಗಿ ವರ್ತಿಸುವಂತೆ ಭದ್ರತಾ ಸಿಬ್ಬಂದಿಗೆ ತಿಳಿಸಿದರು.

ವಿಡಿಯೋದಲ್ಲಿ ವಿರಾಟ್ ಕೊಹ್ಲಿ 'ಆರಾಮ್ ಸೇ' ಅಂದರೆ, ಅವರ ಜೊತೆ 'ಜಾಗರೂಕರಾಗಿ ವರ್ತಿಸಿ' ಎಂದು ಹೇಳುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಆರ್‌ಸಿಬಿ ಸ್ಟಾರ್ ಭದ್ರತಾ ಸಿಬ್ಬಂದಿಗೆ ಮನವಿ ಮಾಡಿದ್ದು ಇದೀಗ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದೆ.

ಈ ವರ್ಷದ ಆರಂಭದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತದ ಎರಡನೇ ಟಿ20 ಪಂದ್ಯದ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಪಿಚ್‌ಗೆ ದಾಳಿ ಮಾಡಿದ ಕಾರಣ, ವಿರಾಟ್ ಕೊಹ್ಲಿ ಇಂತಹ ಘಟನೆಯ ಕೇಂದ್ರಬಿಂದುವಾಗಿರುವುದು ಇದು ಮೂರನೇ ಬಾರಿಗೆಯಾಗಿದೆ. ಭಾರತ ತಂಡಕ್ಕಾಗಿ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ಗೆ ಮರಳಿದ ಪಂದ್ಯ ಇದಾಗಿತ್ತು.

ಐಪಿಎಲ್ 2024ರಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ
2024ರ ಐಪಿಎಲ್‌ನ ಪ್ರಸ್ತುತ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಈ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪರ ಅದ್ಭುತ ಫಾರ್ಮ್‌ನಲ್ಲಿದ್ದಾರೆ.

ಭಾರತೀಯ ಸ್ಟಾರ್ ವಿರಾಟ್ ಕೊಹ್ಲಿ ಈವರೆಗೆ ಆಡಿದ 5 ಪಂದ್ಯಗಳಲ್ಲಿ 105.33ರ ಸರಾಸರಿ ಮತ್ತು 146ರ ಸ್ಟ್ರೈಕ್ ರೇಟ್‌ನಲ್ಲಿ 316 ರನ್ ಗಳಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದರು. ಆದರೆ, ಆರ್‌ಸಿಬಿ ತಂಡ ಆಡಿದ 5 ಪಂದ್ಯಗಳಲ್ಲಿ 4ನೇ ಸೋಲನ್ನು ಅನುಭವಿಸುವುದನ್ನು ತಡೆಯಲು ಸಾಕಾಗಲಿಲ್ಲ.

ಆರ್‌ಸಿಬಿ ಪ್ರಸ್ತುತ 2024ರ ಐಪಿಎಲ್‌ನ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ ಮತ್ತು ಗುರುವಾರ, ಏಪ್ರಿಲ್ 11ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

Story first published: Wednesday, April 10, 2024, 17:41 [IST]
Other articles published on Apr 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+