Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್‌ನಲ್ಲಿ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕ!

ಭಾರತದ ಲೆಜೆಂಡರಿ ಕ್ರಿಕೆಟಿಗ ವಿರಾಟ್ ಕೊಹ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಗಮನಾರ್ಹ ಮೈಲಿಗಲ್ಲು ಸ್ಥಾಪಿಸಿದರು. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ 50ನೇ ಅಂತಾರಾಷ್ಟ್ರೀಯ ಏಕದಿನ ಶತಕ ಗಳಿಸಿದರು.

ಈ ಮೂಲಕ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಮೀರಿಸಿದರು ಮತ್ತು ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕವನ್ನು ದೇಶಾದ್ಯಂತ ಸಂಭ್ರಮಿಸಲಾಯಿತು.

Virat Kohli s 50th ODI century at Laureus World Sports Awards

ವಿರಾಟ್ ಕೊಹ್ಲಿಯ ವಿಶ್ವದಾಖಲೆಯ 50ನೇ ಏಕದಿನ ಶತಕವು ಒಂದು ದೊಡ್ಡ ಮೈಲಿಗಲ್ಲು ಆಗಿದ್ದು, ಸೋಮವಾರ, ಏಪ್ರಿಲ್ 22ರಂದು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ ಪಲಾಸಿಯೊ ಡಿ ಸಿಬಲ್ಸ್‌ನಲ್ಲಿ ನಡೆದ ಪ್ರತಿಷ್ಠಿತ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್‌ನಲ್ಲಿ ಆ ಕ್ಷಣವೂ ಕಾಣಿಸಿಕೊಂಡಿದೆ.

ಲಾರೆಸ್‌ನ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್‌ನಲ್ಲಿ ವರ್ಷದ ಎಪಿಕ್ ಕ್ಷಣಗಳನ್ನು ಒಳಗೊಂಡ ಕ್ಲಿಪ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ 50ನೇ ಏಕದಿನ ಶತಕವನ್ನು ಸಂಭ್ರಮಿಸಿದ ಕ್ಲಿಪ್ ಅನ್ನು ಪ್ಲೇ ಮಾಡಲಾಯಿತು.

Virat Kohli s 50th ODI century at Laureus World Sports Awards

ಇದಲ್ಲದೆ, 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಲು ಟ್ರಾವಿಸ್ ಹೆಡ್ ತೆಗೆದುಕೊಂಡ ಅದ್ಭುತ ಕ್ಯಾಚ್ ಕ್ಷಣವು ವಿಡಿಯೋದಲ್ಲಿ ಕಾಣಿಸಿಕೊಂಡಿದೆ.

ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಅದ್ಭುತ ಪ್ರದರ್ಶನಗಳ ಹೊರತಾಗಿಯೂ, ಆತಿಥೇಯರು ಫೈನಲ್‌ ಪಂದ್ಯದವರೆಗೂ ಅಜೇಯರಾಗಿ ಉಳಿದಿದ್ದರು. ಅದರೆ, ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ವಿರುದ್ಧ ಹೃದಯವಿದ್ರಾವಕ ಸೋಲು ಅನುಭವಿಸಿತು.

ಫ್ರಾಂಚೈಸಿ ಲೀಗ್‌ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ

ಇನ್ನು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕುರಿತು ಮಾತನಾಡುವುದಾದರೆ, ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗೆ ತಮ್ಮ ಫ್ರಾಂಚೈಸಿ ಲೀಗ್‌ ಕರ್ತವ್ಯಗಳನ್ನು ಪೂರೈಸುತ್ತಿದ್ದಾರೆ.

17ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ತಂಡಕ್ಕೆ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್ 2024ರಲ್ಲಿ ಆಡಿದ 8 ಪಂದ್ಯಗಳಲ್ಲಿ 379 ರನ್ ಗಳಿಸಿ, ಪ್ರಸ್ತುತ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ.

ಆದರೆ, ವಿರಾಟ್ ಕೊಹ್ಲಿಯ ನಿರಂತರ ಪ್ರಯತ್ನ ಮತ್ತು ಹೋರಾಟಗಳ ಹೊರತಾಗಿಯೂ, ಆರ್‌ಸಿಬಿ ತಂಡ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಸೋತಿದ್ದು, ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಐಪಿಎಲ್ 2024ರ ಅಂಕಪಟ್ಟಿಯಲ್ಲಿ 2 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ.

ಈಗಾಗಲೇ ಆರ್‌ಸಿಬಿ ತಂಡ ಐಪಿಎಲ್ 2024ರ ಪಂದ್ಯಾವಳಿಯಿಂದ ಬಹುತೇಕ ಹೊರಹಾಕಲ್ಪಟ್ಟಿದೆ. ಪ್ಲೇಆಫ್ ಹಂತಗಳಿಗೆ ಅರ್ಹತೆ ಪಡೆಯುವ ಯಾವುದೇ ಭರವಸೆ ಉಳಿದಿಲ್ಲ. ಅದು ಸಂಭವಿಸಬೇಕಾದರೆ ಪವಾಡವೇ ನಡೆಯಬೇಕಿದೆ.

Story first published: Tuesday, April 23, 2024, 20:49 [IST]
Other articles published on Apr 23, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+