For Quick Alerts
ALLOW NOTIFICATIONS  
For Daily Alerts
 

Virat Kohli: ವಿರಾಟ್‌ ಕೊಹ್ಲಿ ವಿಜಯ್‌ ಹಜಾರೆ ಆಡುತ್ತಾರಾ?

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಆಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ವಿರಾಟ್‌ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಆಡುವ ಇಂಗಿತವನ್ನು ಹೊಂದಿದ್ದಾರೆ. ಹೀಗಾಗಿ ಇವರಿಗೆ ಮ್ಯಾಚ್‌ ಪ್ರ್ಯಾಕ್ಟಿಸ್‌ ತುಂಬ ಇಂಪಾರ್ಟೆಂಟ್‌. ಈ ಉದ್ದೇಶದಿಂದಲೇ ಬಿಸಿಸಿಐ ಅನುಭವಿ ಆಟಗಾರರಿಗೆ ವಿಜಯ್ ಹಜಾರೆ ಟ್ರೋಫಿಯನ್ನು ಆಡಲು ಸೂಚಿಸಿದೆ. ಈಗ ವಿರಾಟ್‌ ಕೊಹ್ಲಿ ದೇಶೀಯ ಟೂರ್ನಿಯಲ್ಲಿ ಆಡುತ್ತಾರಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ವಿರಾಟ್‌ ಕೊಹ್ಲಿ ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ. ಈ ವೇಳೆ ಇವರು ಅಮೋಘ ಫಾರ್ಮ್‌ ಪ್ರದರ್ಶಿಸಿದ್ದಾರೆ. ಆಡಿದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ವಿರಾಟ್‌ ಅಭಿಮಾನಿಗಳನ್ನು ರಂಜಿಸಿದ್ದರು. ಈ ಸರಣಿಯ ಎರಡನೇ ಏಕದಿನ ಪಂದ್ಯ ಬುಧವಾರ ನಡೆಯಲಿದೆ. ಇನ್ನು ವಿರಾಟ್‌ ಕೊಹ್ಲಿ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಆಡುತ್ತಾರಾ ಎಂಬ ಪ್ರಶ್ನೆಗೆ ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಉತ್ತರ ನೀಡಿದ್ದಾರೆ.

Virat Kohli s Availability for Vijay Hazare Trophy 2025-26 DDCA President Responds

ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಡಿಸೆಂಬರ್ 24 ರಿಂದ ಆರಂಭವಾಗಲಿದೆ. ಈ ಟೂರ್ನಿಗೆ ವಿರಾಟ್‌ ಕೊಹ್ಲಿ ಲಭ್ಯರಿರುತ್ತಾರೆ. ಪ್ರಸಕ್ತ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಡಿಸೆಂಬರ್‌ 6 ರಂದು ಕೊನೆಗೊಳ್ಳಲಿದೆ. ಈ ಸರಣಿಯ ಬಳಿಕ ವಿರಾಟ್‌ ಕೊಹ್ಲಿ ಜನವರಿ 11ರ ವರೆಗೆ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಆಡಬಹುದಾಗಿದೆ. ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ, ವಿರಾಟ್‌ ಕೊಹ್ಲಿ ಮುಂದಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಇಡೀ ಪಂದ್ಯವಾಳಿಯಲ್ಲಿ ಆಡದಿರಬಹುದು ಎಂದು ಹೇಳಿದ್ದಾರೆ. ವಿರಾಟ್‌ ಲೀಗ್‌ ಹಂತದಲ್ಲಿ ಎಲ್ಲ ಪಂದ್ಯಗಳನ್ನು ಆಡುತ್ತಾರಾ ಎಂಬುದರ ಕುರಿತು ಇನ್ನೂ ಅಧಿಕೃತ ಮಾಹಿತಿ ಇಲ್ಲ ಎಂದು ತಿಳಿದು ಬಂದಿದೆ. ದೆಹಲಿ ತಂಡ ತನ್ನ ಎಲ್ಲಾ ಲೀಗ್ ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡಲಿದೆ.

ರಾಂಚಿಯಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈ ವೇಳೆ ವಿರಾಟ್ ಏಕದಿನ ಕ್ರಿಕೆಟ್‌ನಲ್ಲಿ 52ನೇ ಶತಕ ಬಾರಿಸಿ ಅಬ್ಬರಿಸಿದ್ದರು. ಇವರು ಏಕದಿನ ಮಾದರಿಯಲ್ಲಿ 306 ಪಂದ್ಯಗಳಲ್ಲಿ 14,390 ರನ್ ಗಳಿಸಿದ್ದಾರೆ. ಬಿಸಿಸಿಐ ತನ್ನ ಎಲ್ಲಾ ಒಪ್ಪಂದದ ಆಟಗಾರರು ದೇಶೀಯ ಕ್ರಿಕೆಟ್ ಆಡುವುದನ್ನು ಕಡ್ಡಾಯಗೊಳಿಸಿದೆ. ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ ಹಾಗೂ ಟಿ20 ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಘೋಷಿಸಿದ್ದು, ಈಗ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.


2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿಯ ವೇಳಾಪಟ್ಟಿ

ಡಿಸೆಂಬರ್ 24- ಆಂಧ್ರ
ಡಿಸೆಂಬರ್ 26- ಗುಜರಾತ್
ಡಿಸೆಂಬರ್ 29- ಸೌರಾಷ್ಟ್ರ
ಡಿಸೆಂಬರ್ 31- ಒಡಿಶಾ
ಜನವರಿ 3- ಸರ್ವೀಸಸ್
ಜನವರಿ 6- ರೈಲ್ವೇಸ್
ಜನವರಿ 8- ಹರಿಯಾಣ

Story first published: Wednesday, December 3, 2025, 8:40 [IST]
Other articles published on Dec 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+