Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗುಜರಾತ್ ವಿರುದ್ಧ ಆಡುವುದು ಕಿಂಗ್‌ ಕೊಹ್ಲಿಗೆ ಬಲು ಪ್ರೀತಿ: ಇಲ್ಲಿದೆ ಕಂಪ್ಲೀಟ್ ರಿಪೋರ್ಟ್ ಕಾರ್ಡ್

ಐಪಿಎಲ್‌ ಪ್ಲೇ ಆಫ್‌ ಹಂತದ ಪಂದ್ಯಗಳು ಮಂಗಳವಾರದಿಂದ ಆರಂಭವಾಗಲಿವೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟಾನ್ಸ್ (ಜಿಟಿ) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ. ವಿರಾಟ್ ಅವರಿಗೆ ಗುಜರಾತ್‌ ತಂಡ ಎಂದ್ರೆ ತುಂಬಾ ಪ್ರೀತಿ. ಇದಕ್ಕೆ ಅಂಕಿಅಂಶಗಳು ಸಾಕ್ಷಿ ಹೇಳುತ್ತಿವೆ.

ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್ ತಂಡ ಅಖಾಡಕ್ಕೆ ಇಳಿಯುವ ಮೊದಲು ಗುಜರಾತ್ ಲಯನ್ಸ್‌ ಎಂಬ ತಂಡ ಎರಡು ವರ್ಷಗಳ ಅವಧಿಗೆ ಕಣಕ್ಕೆ ಇಳಿದಿತ್ತು. ಈ ವೇಳೆ ವಿರಾಟ್‌ ಕೊಹ್ಲಿ ಗುಜರಾತ್ ಲಯನ್ಸ್‌ ವಿರುದ್ಧದ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇವರ ಅಂಕಿ ಅಂಶಗಳು ಲಯನ್ಸ್‌ ವಿರುದ್ಧ ಅಮೋಘವಾಗಿವೆ.

Virat

ಗುಜರಾತ್ ಲಯನ್ಸ್‌ ವಿರುದ್ಧ ವಿರಾಟ್‌ ಆಡಿದ 5 ಪಂದ್ಯಗಳ 5 ಇನಿಂಗ್ಸ್‌ನಲ್ಲಿ 70ರ ಸರಾಸರಿಯಲ್ಲಿ ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಇವರು 154ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಬಾರಿಸಿದ್ದಾರೆ. ಲಯನ್ಸ್‌ ವಿರುದ್ಧ 183 ಎಸೆತಗಳನ್ನು ಎದುರಿಸಿದ ವಿರಾಟ್‌ 283 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಇವರ ಬ್ಯಾಟ್‌ನಿಂದ 1 ಅರ್ಧಶತಕ, 2 ಶತಕಗಳು ಮೂಡಿ ಬಂದಿವೆ. ಲಯನ್ಸ್‌ ವಿರುದ್ಧ ಕೊಹ್ಲಿ 34 ಬೌಂಡರಿ, 11 ಸಿಕ್ಸರ್ ಸಿಡಿಸಿದ್ದಾರೆ.

ಟೈಟಾನ್ಸ್‌ ವಿರುದ್ಧ ಅಬ್ಬರ

ಇನ್ನು ಐಪಿಎಲ್‌ನಲ್ಲಿ 2022ರಲ್ಲಿ ಎರಡು ಹೊಸ ತಂಡಗಳು ಸೇರ್ಪಡೆ ಆದವು. ಈ ವೇಳೆ ಗುಜರಾತ್ ಟೈಟಾನ್ಸ್ ಹೆಸರಿನ ತಂಡ ಸಹ ಎಂಟ್ರಿ ನೀಡಿತು. ಈ ಹೊಸ ತಂಡದ ವಿರುದ್ಧವೂ ವಿರಾಟ್‌ ಕೊಹ್ಲಿ ಅಮೋಘ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ಆಡಿದ 8 ಪಂದ್ಯಗಳ, 8 ಇನಿಂಗ್ಸ್‌ನಲ್ಲಿ ವಿರಾಟ್‌ 76ರ ಸರಾಸರಿಯಲ್ಲಿ 460 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 152 ಆಗಿದೆ. ಇವರು ಟೈಟಾನ್ಸ್ ವಿರುದ್ಧ 1 ಶತಕ ಹಾಗೂ 4 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಅಂಕಿ ಅಂಶಗಳನ್ನು ನೋಡಿದಾಗ ವಿರಾಟ್ ಅವರಿಗೆ ಗುಜರಾತ್‌ ವಿರುದ್ಧ ಆಡುವುದು ಎಂದರೆ ತುಂಬ ಪ್ರೀತಿ ಎಂದು ತಿಳಿಯುತ್ತದೆ.

ಮತ್ತೊಂದು ದಾಖಲೆಯ ಸನಿಹದಲ್ಲಿ ವಿರಾಟ್‌

ವಿರಾಟ್ ಕೊಹ್ಲಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 40 ರನ್‌ ಬಾರಿಸುವಲ್ಲಿ ಯಶಸ್ವಿಯಾದರೆ, ಐಪಿಎಲ್‌ನಲ್ಲಿ ಮತ್ತೊಂದು ತಂಡದ ವಿರುದ್ಧ 500ಕ್ಕೂ ಹೆಚ್ಚು ರನ್‌ ಕಲೆ ಹಾಕಿದ ದಾಖಲೆ ಬರೆಯಲಿದ್ದಾರೆ. ಅಲ್ಲದೆ ಇನ್ನೊಂದು ಬೌಂಡರಿ ಬಾರಿಸಿದರೆ ಟೈಟಾನ್ಸ್ ವಿರುದ್ಧ 50 ಬೌಂಡರಿ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

Story first published: Monday, May 25, 2026, 16:01 [IST]
Other articles published on May 25, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+