Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಾಯಿಯೊಂದಿಗೆ ಸ್ಟೆಪ್ಸ್ ಹಾಕಿದ ವಿರಾಟ್ ಕೊಹ್ಲಿ ವಿಡಿಯೋ ವೈರಲ್

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್‌ ಕೊಹ್ಲಿ, ಅವಕಾಶ ಸಿಕ್ಕಾಗಲೆಲ್ಲಾ ತಮ್ಮಲ್ಲಿರುವ ಡ್ಯಾನ್ಸ್‌ ಪ್ರತೀಭೆಯನ್ನು ಅನಾವರಣ ಮಾಡುತ್ತಲೇ ಇರುತ್ತಾರೆ. ಮೈದಾನದಲ್ಲೂ ಹಲವು ಬಾರಿ ಸ್ಟೆಪ್ಸ್ ಹಾಕಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೊಹ್ಲಿ ತನ್ನ ತಾಯಿಯೊಂದಿಗೆ ಸಖತ್ ಸ್ಟೆಪ್ಸ್‌ ಹಾಕಿದ್ದಾರೆ.

ಈ ವಿಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕೊಹ್ಲಿ ತನ್ನ ತಾಯಿ ಸರೋಜ್ ಕೊಹ್ಲಿ ಜೊತೆ ಡ್ಯಾನ್ಸ್ ಮಾಡುತ್ತಿರುವುದು ಕಂಡು ಬಂದಿದೆ. ಕೊಹ್ಲಿ ತನ್ನ ತಾಯಿಯೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

Virat Kohli s Dance with His Mother Goes Viral Fans Delighted by Heartwarming Moment

ಡ್ಯಾನ್ಸ್‌ ಸಖತ್‌ ವೈರಲ್

ಈ ವಿಡಿಯೋ ವಿರಾಟ್ ಕೊಹ್ಲಿ ಮದುವೆ ಸಮಯದ್ದು ಎಂದು ಹೇಳಲಾಗಿದೆ. ಇಟಲಿಯಲ್ಲಿ ನಡೆದ ವಿವಾಹದ ಬಳಿಕ ಆಗಿನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಆರತಕ್ಷತೆ ದೆಹಲಿಯಲ್ಲಿ ನಡೆಯಿತು. ಈ ವೇಳೆ ಟೀಮ್ ಇಂಡಿಯಾ ನಾಯಕ ಹಳೆಯ ಹಾಡಿಗೆ ಸ್ಟೆಪ್ಸ್ ಹಾಕುತ್ತಿರುವುದನ್ನು ಕಾಡಬಹುದು.

ಪಂಜಾಬಿ ಹಾಡಿಗೆ ಟೀಮ್ ಇಂಡಿಯಾದ ಸೂಪರ್ ಸ್ಟಾರ್‌ ಸ್ಟೆಪ್ಸ್‌ ಹಾಕಿದ್ದನ್ನು ಕಾಣಬಹುದಾಗಿದೆ. ಈ ವೇಳೆ ವಿರಾಟ್‌ ಬ್ಲ್ಯಾಕ್ ಕುಡ್ತಾದಲ್ಲಿ ಕಂಡು ಬಂದಿದ್ದಾರೆ. ವಿರಾಟ್ ಕೊಹ್ಲಿ ಅವರು ಡ್ಯಾನ್ಸ್‌ ಮಾಡುವಾಗ ತಮ್ಮ ತಾಯಿ ಸರೋಜಾ ಕೊಹ್ಲಿಯ ಹತ್ತಿರ ಬಂದು, ತನ್ನ ತಾಯಿಯನ್ನು ಕರೆದುಕೊಂಡು ಸ್ಟೆಪ್ಸ್‌ ಹಾಕಲು ಪ್ರೇರಿಪಿಸಿದರು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆಯಾಗಿ ಸುಮಾರು 7 ವರ್ಷಗಳು ಕಳೆದಿವೆ. ಸದ್ಯ ಈ ದಂಪತಿಗಳಿಗೆ ಇಬ್ಬರು ಮಕ್ಕಳ ಇದ್ದಾರೆ. ಮಗಳ ಹೆಸರು 'ವಾಮಿಕಾ' ಮತ್ತು ಮಗನ ಹೆಸರು 'ಅಕೇ' ಎಂದಾಗಿದೆ.

ದಾಖಲೆಯ ಒಡೆಯ

ವಿರಾಟ್‌ ಕೊಹ್ಲಿ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದರು. ಬಹು ದಿನಗಳ ಬಳಿಕ ಟೀಮ್ ಇಂಡಿಯಾದ ಪರ ಟೆಸ್ಟ್‌ ಪಂದ್ಯವನ್ನು ಆಡಿದ ಕೊಹ್ಲಿ ತಂಡಕ್ಕೆ ಆದಾರವಾದರು. ಇನ್ನು ಅಕ್ಟೋಬರ್ 16ರಿಂದ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್‌ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಂಗ್ಲಾ ವಿರುದ್ಧದ ಟೆಸ್ಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ವಿರಾಟ್‌, ತಮ್ಮ ದಾಖಲೆಯ ಅಭಿಯಾನವನ್ನು ಮುಂದುವರೆಸುವ ಸಾಧ್ಯತೆ ಇದೆ.

ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27 ಸಾವಿರ ರನ್‌ ಪೂರೈಸಿದ ದಾಖಲೆ ಬರೆದಿದ್ದರು. ಅಲ್ಲದೆ ಈ ಸಾಧನೆಯನ್ನು ಕಡಿಮೆ ಇನಿಂಗ್ಸ್‌ಗಳಲ್ಲಿ ಮಾಡಿದ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದರು. ಅಲ್ಲದೆ ಈ ಸರಣಿಯ ಎರಡನೇ ಟೆಸ್ಟ್‌ನಲ್ಲಿ ವಿರಾಟ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000 ಬೌಂಡರಿ ಬಾರಿಸಿದ ಹಿರಿಮೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

Story first published: Monday, October 7, 2024, 17:22 [IST]
Other articles published on Oct 7, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+