For Quick Alerts
ALLOW NOTIFICATIONS  
For Daily Alerts
 

Virat Kohli: ರಜೆ ಇದ್ದರೂ ಓಡಲೇಬೇಕು! ಫಿಟ್‌ನೆಸ್‌ ವಿಚಾರದಲ್ಲಿ ರಾಜಿಯೇ ಇಲ್ಲ

ವಿರಾಟ್ ಕೊಹ್ಲಿ, ಕ್ರಿಕೆಟ್ ಜಗತ್ತಿನ ಅತ್ಯಂತ ಹೆಚ್ಚು ಫಿಟ್ ಆಗಿರುವ ಆಟಗಾರ. 35ರ ವಯಸ್ಸಿನಲ್ಲೂ 20ರ ಯುವಕರಂತೆ ಓಡಬಲ್ಲರು. ಕೊಹ್ಲಿ ಜೊತೆ ಸಮನಾಗಿ ಓಡಲು ಯುವಕರೇ ಸುಸ್ತಾಗುತ್ತಾರೆ. ಅಂತಹ ಫಿಟ್‌ನೆಸ್ ಹೊಂದಿದ್ದಾರೆ ಶ್ರೇಷ್ಠ ಬ್ಯಾಟರ್.

ವಿರಾಟ್ ಕೊಹ್ಲಿ ಫಿಟ್‌ನೆಸ್ ವಿಚಾರದಲ್ಲಿ ಯಾವತ್ತೂ ರಾಜಿಯಾಗಲ್ಲ, ಎಂತಹದ್ದೇ ಸಂದರ್ಭ ಬಂದರೂ ಊಟ, ನಿದ್ದೆ, ವರ್ಕೌಟ್‌ ಕಡಿಮೆ ಮಾಡಲ್ಲ. ಏಷ್ಯಾಕಪ್‌ಗೆ ಮುನ್ನ ವಿಶ್ರಾಂತಿಯಲ್ಲಿದ್ದರೂ ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುತ್ತಾರೆ. ಮಂಗಳವಾರ ಇಡೀ ದೇಶ 77 ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದ್ದರೆ, ಕೊಹ್ಲಿ ಮಾತ್ರ ದಿನನಿತ್ಯದ ಕಾಯಕ ಮುಂದುವರೆಸಿದ್ದರು.

virat-kohlis-dedication-to-work

ಟ್ರೆಡ್‌ಮಿಲ್‌ನಲ್ಲಿ ಓಡುತ್ತಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ರಜೆ ಇದ್ದರೂ ಓಡಬೇಕು ಎಂದು ಶೀರ್ಷಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಕಠಿಣ ತರಬೇತಿ ವೇಳಾಪಟ್ಟಿಗೆ ಮರಳಿದ್ದಾರೆ, ಆಗಸ್ಟ್ 30 ರಂದು ಪ್ರಾರಂಭವಾಗಲಿರುವ ಏಷ್ಯಾ ಕಪ್‌ಗೆ ತಯಾರಿ ನಡೆಸುತ್ತಿದ್ದಾರೆ.

ಏಷ್ಯಾಕಪ್‌ಗಾಗಿ ಸಿದ್ಧತೆ

ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಮತ್ತು ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಆಡಿದ್ದರು. ಉಳಿದ ಎರಡು ಏಕದಿನ ಪಂದ್ಯಗಳಿಂದ ವಿಶ್ರಾಂತಿ ಪಡೆದ ಅವರು, ಏಕದಿನ ಸರಣಿ ನಂತರ ಭಾರತಕ್ಕೆ ಮರಳಿದ್ದು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಏಷ್ಯಾಕಪ್ ಆರಂಭಕ್ಕೆ ಮೊದಲು ಭಾರತ ತಂಡ ಬೆಂಗಳೂರಿನ ಎನ್‌ಸಿಎನಲ್ಲಿ ಒಟ್ಟುಗೂಡಲಿದ್ದು ಒಂದು ವಾರಗಳ ಕಾಲ ಕ್ಯಾಂಪ್ ಮಾಡಲಿದೆ.

ಈ ವಾರದಲ್ಲೇ ಏಷ್ಯಾಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಿದ್ದು, ಯಾರಿಗೆಲ್ಲಾ ಅವಕಾಶ ಸಿಗುತ್ತೆ ಎನ್ನುವ ಕುತೂಹಲ ಮೂಡಿದೆ. ವಿರಾಟ್ ಕೊಹ್ಲಿ ಬಗ್ಗೆ ಸದ್ಯ ಅಪಾರ ನಿರೀಕ್ಷೆ ಹೊಂದಲಾಗಿದೆ. ಹಲವು ವರ್ಷಗಳ ಕಾಲ ಕಳಪೆ ಫಾರ್ಮ್ ಹೊಂದಿದ್ದ ಅವರು, 2022ರ ಏಷ್ಯಾಕಪ್‌ನಲ್ಲಿ ಶತಕ ಸಿಡಿಸುವ ಮೂಲಕ ವಾಪಸಾತಿ ಮಾಡಿದ್ದರು.

ಅಂದಿನಿಂದ ಏಕದಿನ, ಟೆಸ್ಟ್ ಮಾದರಿಯಲ್ಲಿ ಕೂಡ ಶತಕಗಳನ್ನು ಸಿಡಿಸಿದ್ದು ಉತ್ತಮ ಲಯದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೂಡ ಶತಕ ಬಾರಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಭಾರತ ಗೆಲ್ಲಬೇಕೆಂದರೆ ಕೊಹ್ಲಿ ಪಾತ್ರ ಮುಖ್ಯವಾಗಿರಲಿದೆ. ಕೊಹ್ಲಿ ಬ್ಯಾಟ್‌ನಿಂದ ರನ್‌ ಬಂದರೆ ಭಾರತದ ಗೆಲುವು ಇನ್ನಷ್ಟು ಸುಲಭವಾಗಲಿದೆ.

ಪಾಕಿಸ್ತಾನದ ವಿರುದ್ಧ ಮುಖಾಮುಖಿ

ಆಗಸ್ಟ್ 30ರಂದು ಏಷ್ಯಾಕಪ್ ಪಂದ್ಯಾವಳಿ ಆರಂಭವಾಗಲಿದ್ದು, ಸೆಪ್ಟೆಂಬರ್ 2ರಂದು ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಶ್ರೀಲಂಕಾದ ಕ್ಯಾಂಡಿಯಲ್ಲಿ ಈ ಪಂದ್ಯ ನಡೆಯಲಿದೆ. ಭಾರತವು ಎ ಗುಂಪಿನಲ್ಲಿದೆ, ಇದರಲ್ಲಿ ಪಾಕಿಸ್ತಾನ ಮತ್ತು ನೇಪಾಳ ಕೂಡ ಇದೆ, ಆದರೆ ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಸೇರಿವೆ.

ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದಲ್ಲಿ ಆತಿಥ್ಯ ವಹಿಸಲಿರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಪಂದ್ಯಾವಳಿಯನ್ನು 50 ಓವರ್‌ಗಳ ಮಾದರಿಯಲ್ಲಿ ನಡೆಸಲಾಗುತ್ತಿದೆ. ಏಷ್ಯಾಕಪ್‌ನಲ್ಲಿ ಕೊಹ್ಲಿ ಅಬ್ಬರಿಸಿದರೆ, ಏಕದಿನ ವಿಶ್ವಕಪ್‌ನಲ್ಲಿ ಭಾರತವೇ ಫೇವರಿಟ್ ತಂಡವಾಗಲಿದೆ.

Story first published: Tuesday, August 15, 2023, 20:32 [IST]
Other articles published on Aug 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+