For Quick Alerts
ALLOW NOTIFICATIONS  
For Daily Alerts
 

2 ಸೊನ್ನೆ ಸೊತ್ತಿದ ಬಳಿಕ ವಿರಾಟ್‌ ಪವರ್‌ ಫುಲ್‌ ಪ್ರದರ್ಶನ: ಕೊಹ್ಲಿ ಅಪ್‌ಡೇಟ್‌ ವರ್ಷನ್‌

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ ಇತ್ತೀಚಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬ್ಯಾಕ್‌ ಟು ಬ್ಯಾಕ್‌ ಸೊನ್ನೆ ಸುತ್ತಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಈ ರೀತಿ ಸತತವಾಗಿ ಎರಡು ಸೊನ್ನೆ ಮೊದಲ ಬಾರಿಗೆ ಸುತ್ತಿದ್ದ ವಿರಾಟ್‌, ಹಲವು ಟೀಕೆಗೆ ಗುರಿಯಾದರು. ಆದರೆ ಇದಾದ ಬಳಿಕ ವಿರಾಟ್‌ ಕೊಹ್ಲಿ ಹಿಂತಿರುಗಿ ನೋಡಲೇ ಇಲ್ಲ. ವಿರಾಟ್ ಮುಟ್ಟಿದೆಲ್ಲವೂ ಚಿನ್ನ ಎಂಬಂತೆ ಆಗಿದೆ. ಆಸ್ಟ್ರೇಲಿಯಾ ಪ್ರವಾಸದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್‌ ಅರ್ಧಶತಕ ಬಾರಿಸಿ ತಂಡದ ಜಯದಲ್ಲಿ ಮಿಂಚಿದರು.

ಸಿಡ್ನಿಯಲ್ಲಿ ಬ್ಯಾಟಿಂಗ್ ವೈಭವ ನೋಡಿದ ಅಭಿಮಾನಿಗಳು ತವರಿನಲ್ಲಿ ವಿರಾಟ್ ಅವರ ಆಟ ನೋಡಲು ಕಾತುರರಾಗಿದ್ದರು. ಇದಕ್ಕೂ ಒಂದು ಅವಕಾಶ ಕೂಡಿ ಬಂದಿತು. ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗಳು ಭಾರತದಲ್ಲೇ ನಡೆಯಲಿದ್ದವು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್‌, ರೋಹಿತ್ ಪ್ರಮುಖ ಆಕರ್ಷಣೆ ಆಗಿದ್ದರು. ರಾಂಚಿ ಹಾಗೂ ರಾಯ್ಪುರದಲ್ಲಿ ನಡೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ವಿರಾಟ್‌, ವಿಶಾಖಪಟ್ಟಣಂನಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಇವರ ಈ ಅಮೋಘ ಪ್ರದರ್ಶನದ ಫಲವಾಗಿ ಇವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತು.

Virat Kohli s Epic Comeback From Back-to-Back Ducks to 2025 ODI Dominance and Domestic Century

ಆಸ್ಟ್ರೇಲಿಯಾ ಸರಣಿಯಲ್ಲಿ ಬ್ಯಾಕ್‌ ಟು ಬ್ಯಾಕ್‌ ಸೊನ್ನೆಗೆ ಔಟ್ ಆಗಿದ್ದ ವಿರಾಟ್‌, ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಬ್ಯಾಕ್‌ ಟು ಬ್ಯಾಕ್ ಶತಕ ಬಾರಿಸಿ ಅಬ್ಬರಿಸಿದರು. ಇದೇ ಅಮೋಘ ಫಾರ್ಮ್‌ನ್ನು ವಿರಾಟ್‌ ದೇಶೀಯ ಟೂರ್ನಿಯಲ್ಲೂ ಮುಂದುವರೆಸಿಕೊಂಡು ಬಂದಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯ ಲೀಗ್‌ ಹಂತದ ಪಂದ್ಯದಲ್ಲಿ ಇವರು ಆಂಧ್ರ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ 131 ರನ್‌ ಸಿಡಿಸಿದರು. ಈಗ ಮತ್ತೊಂದು ಪಂದ್ಯವನ್ನು ಎದುರು ನೋಡುತ್ತಿದ್ದಾರೆ.

ಜನವರಿಯಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್‌ ಪ್ರಮುಖ ಆಕರ್ಷಣೆ. ಇವರು ಸದ್ಯ ಭಾರತದ ಪರ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಐಪಿಎಲ್‌ ಮಧ್ಯದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ, 2024ರ ಟಿ20 ವಿಶ್ವ ಕಪ್‌ ಗೆದ್ದ ಬಳಿಕ ಟಿ20 ಕ್ರಿಕೆಟ್‌ಗೆ ವಿರಾಟ್‌ ಈ ಮೊದಲೇ ವಿದಾಯ ಹೇಳಿದ್ದರು. ಈಗ ಇವರ ಚಿತ್ತ ಏಕದಿನ ಸರಣಿಗಳತ್ತ ಮಾತ್ರ ನೆಟ್ಟಿದೆ.

Virat Kohli s Epic Comeback From Back-to-Back Ducks to 2025 ODI Dominance and Domestic Century

2025ರಲ್ಲಿ ವಿರಾಟ್‌ ಸಾಧನೆ

ವಿರಾಟ್‌ ಕೊಹ್ಲಿ ಪ್ರಸಕ್ತ ವರ್ಷ ಒಟ್ಟು 13 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಇವರು 65ರ ಸರಾಸರಿಯಲ್ಲಿ 651 ರನ್ ಕಲೆ ಹಾಕಿದ್ದು, ಇದರಲ್ಲಿ 3 ಶತಕ ಹಾಗೂ 4 ಅರ್ಧಶತಕಗಳು ಸೇರಿವೆ. ಇವರ ಬ್ಯಾಟ್‌ನಿಂದ ಈ ವರ್ಷ ಒಟ್ಟ 54 ಬೌಂಡರಿ, 13 ಸಿಕ್ಸರ್‌ಗಳ ಹರಿದು ಬಂದಿವೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ್ಲಿ ಇವರು ತಂಡದಲ್ಲಿ ಸ್ಥಾನ ಪಡೆಯುವತ್ತ ಚಿತ್ತ ನೆಟ್ಟಿದ್ದಾರೆ.

Story first published: Friday, December 26, 2025, 11:56 [IST]
Other articles published on Dec 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+