Virat Kohli: 339 ದಿನಗಳಲ್ಲಿ 2 ಐಸಿಸಿ ಪ್ರಶಸ್ತಿ, ಒಂದು ಐಪಿಎಲ್ ಕಿರೀಟ
ಐಸಿಸಿ ಪ್ರಶಸ್ತಿಗಳ ಬರ ಟೀಮ್ ಇಂಡಿಯಾಕ್ಕೆ ಬರ ಬಹುವರ್ಷಗಳಿಂದ ಕಾಡುತ್ತಾ ಇತ್ತು. ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿ ಫೈನಲ್‌ಗೆ ಲಗ್ಗೆ ಇಟ್ಟರೂ ಸಹ ಟ್ರೋಫಿಗೆ ಮುತ್ತಿಟ್ಟಿರಲಿಲ್ಲ. ಈಗ ಟೀಮ್ ಇಂಡಿಯಾ ಒಂಧೇ ವರ್ಷದಲ್ಲಿ ಎರಡು ಐಸಿಸಿ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಈ ಸಾಧನೆಯ ಹಿಂದೆ ಟೀಮ್ ಇಂಡಿಯಾ ಹಲವು ಆಟಗಾರರ ಬೆವರ ಹನಿ ಎದ್ದು ಕಾಣುತ್ತಿದೆ. ಈ ಬೆವರ ಹನಿಗಳ ಮಧ್ಯೆ ಎದ್ದು ಕಾಣುವ ಆ ದೊಡ್ಡ ಹನಿ ವಿರಾಟ್ ಕೊಹ್ಲಿ. ಸಾಧಕನ ತಪ್ಪಸ್ಸಿಗೆ ದೇವರು ವರವನ್ನು ನೀಡಿದ್ದಾನೆ. ಅದು ಒಂದಲ್ಲಾ ಎರಡಲ್ಲಾ ಮೂರು ವರಗಳನ್ನು ನೀಡಿದ್ದಾನೆ.
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ, ಚೇಸಿಂಗ್ ಸ್ಟಾರ್ ಆಗಿದ್ದು, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದು ಎಲ್ಲವೂ ಇತಿಹಾಸ. ಈ ದೊಡ್ಡ ಸಾಧನೆಗೆ ಒಂದು ಮೆಟ್ಟಿಲ್ಲು ಆರ್‌ಸಿಬಿ. ದೆಹಲಿಯಲ್ಲಿ ಬೆಳೆದ ಯುವ ಕ್ರಿಕೆಟ್ ಆಟಗಾರರ, ತನ್ನ ಬೇರಗಳನ್ನು ದಕ್ಷಿಣ ಭಾರತದ ಬೆಂಗಳೂರಿನಲ್ಲಿ ಬೇರುರುತ್ತಾನೆ ಎಂದು ಯಾರು ಭಾವಿಸಿರಲಿಲ್ಲ. ಆದರೆ ಈ ಕನಸು ಈಗ ನನಸಾಗಿದೆ. ಒಂದೇ ವರ್ಷದಲ್ಲಿ ವಿರಾಟ್ ಮನೆಗೆ ಮೂರು ಟ್ರೋಫಿಗಳು ಎಂಟ್ರಿ ಪಡೆದಿವೆ.

ವಿರಾಟ್ ಕೊಹ್ಲಿ ಕ್ರಿಕೆಟ್ ಅಂಗಳದಲ್ಲಿ ಸಾಧಿಸುವುದು ಏನು ಬಾಕಿ ಇರಲಿಲ್ಲ. ಆದರೆ ಐಸಿಸಿ ಟ್ರೋಫಿಗಳ ಬರ ಮಾತ್ರ ವಿರಾಟ್ ಅವರನ್ನು ಬಹುವಾಗಿ ಕಾಡಿತ್ತು. ಈಗ ವಿರಾಟ್ ಮನೆಯ ಶೋಕೆಸ್‌ನಲ್ಲಿ ಐಸಿಸಿ ಟ್ರೋಫಿಗಳು ಬಂದು ಸೇರಿವೆ. ಪರಿಣಾಮ ವಿರಾಟ್ 339 ದಿನಗಳ ಅಂತರದಲ್ಲೇ ಮೂರು ವಿಶಿಷ್ಠ ಪ್ರಶಸ್ತಿಗಳನ್ನು ಪಡೆದು ಬೀಗಿದ್ದಾರೆ.
17 ವರ್ಷಗಳ ಬಳಿಕ
ಟೀಮ್ ಇಂಡಿಯಾ ತಂಡ ಹಲವು ಐಸಿಸಿ ಟೂರ್ನಿಯ ಫೈನಲ್ ಪಂದ್ಯವನ್ನು ಆಡಿತ್ತು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಆದರೆ ಕಳೆದ ವರ್ಷ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇ ಏರಿತು. ಇಲ್ಲಿಂದಲೇ ನೋಡಿ ಟೀಮ್ ಇಂಡಿಯಾದ ಯಶಸ್ಸಿನ ರಥ ಯಾತ್ರೆ ಆರಂಭವಾಗಿದ್ದು. ಟೀಮ್ ಇಂಡಿಯಾ 2007ರಲ್ಲಿ ಕೊನೆಯ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಗೆದ್ದಿತ್ತು. ಅಲ್ಲಿಂದ ಈ ವರೆಗೆ ಗೆದ್ದಿರಲಿಲ್ಲ. ಈ ತಂಡದ ಭಾಗವಾಗಿದ್ದ ವಿರಾಟ್ ಕೊಹ್ಲಿ ಫೈನಲ್‌ನಲ್ಲಿ ಸಮಯೋಚಿತ ಆಟವಾಡಿದರು. ಅಲ್ಲದೆ 2011ರ ಬಳಿಕ ಐಸಿಸಿ ಟ್ರೋಫಿ ವಿರಾಟ್ ಎತ್ತಿದರು.

12 ವರ್ಷಗಳ ಬಳಿಕ
ರೋಹಿತ್ ಶರ್ಮಾ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ 2025ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲೂ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. 12 ವರ್ಷಗಳ ಬಳಿಕ ಟೀಮ್ ಇಂಡಿಯಾ ಈ ಸಾಧನೆ ಮಾಡಿತು. ಈ ಟೂರ್ನಿಯಲ್ಲೂ ವಿರಾಟ್ ಕೊಹ್ಲಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
18 ವರ್ಷಗಳ ಬಳಿಕ ಐಪಿಎಲ್
17 ವರ್ಷಗಳಿಂದ ಐಪಿಎಲ್ ಟ್ರೋಫಿ ಎತ್ತುವ ಕನಸು ಕಾಣುತ್ತಿದ್ದ ಆರ್‌ಸಿಬಿ ಈ ಪ್ರಯತ್ನದಲ್ಲಿ ಸತಂತ್ರಾಂಶ ವೈಫಲ್ಯವನ್ನು ಅನುಭವಿಸಿತ್ತು. ಮೂರು ಬಾರಿ ಐಪಿಎಲ್ ಫೈನಲ್‌ಗೆ ಲಗ್ಗೆ ಇಟ್ಟರೂ ಸಹ ಆರ್‌ಸಿಬಿ ಟ್ರೋಫಿಗೆ ಮುತ್ತಿಟಿರಲಿಲ್ಲ. ಆದರೆ ಮಂಗಳವಾರ ಈ ಸಾಧನೆಯನ್ನು ಸಹ ಆರ್‌ಸಿಬಿ ಮಾಡಿ ಬೀಗಿದೆ. 17 ವರ್ಷಗಳ ವನವಾಸ ಕೊನೆಯಾಗಿದೆ. ವಿರಾಟ್ ಕೊಹ್ಲಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟು ಇತಿಹಾಸ ನಿರ್ಮಿಸಿದ್ದಾರೆ. ಸುಮಾರು ಒಂದು ವರ್ಷದ ಅಂತರದಲ್ಲಿ ವಿರಾಟ್ ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಎತ್ತಿ ಬೀಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications