For Quick Alerts
ALLOW NOTIFICATIONS  
For Daily Alerts
 

ಭಾರತದಲ್ಲಿ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿಯ ಇನ್‌ಸ್ಟಾಗ್ರಾಮ್ ಪೋಸ್ಟ್

ಭಾರತ ಕ್ರಿಕೆಟ್ ತಂಡ 2024ರ ಐಸಿಸಿ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಗೆಲುವಿನೊಂದಿಗೆ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ. 17 ವರ್ಷಗಳ ನಂತರ ಮತ್ತೊಮ್ಮೆ ಟಿ20 ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಅನುಭವಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿಗೆ ಭವ್ಯ ವಿದಾಯ ಹೇಳಲಾಯಿತು. ಇನ್ನು ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದ್ದು ಮಾತ್ರವಲ್ಲದೆ, ಗೆಲುವು ಸಂಭ್ರಮಿಸುವ ವಿರಾಟ್ ಕೊಹ್ಲಿಯ ಇನ್‌ಸ್ಟಾಗ್ರಾಮ್ ಪೋಸ್ಟ್ ಭಾರತದಲ್ಲೇ ಅತಿ ಹೆಚ್ಚು ಲೈಕ್ ಪಡೆದ ಫೋಟೋವಾಗಿದೆ.

Virat Kohli s Instagram Post Set a Record Most-Liked Pic In India

ಇದಕ್ಕೂ ಮುನ್ನ ಬಾಲಿವುಡ್ ತಾರೆಗಳಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಮದುವೆಯ ಫೋಟೋದೊಂದಿಗೆ ದಾಖಲೆಯ ಲೈಕ್‌ಗಳನ್ನು ಹೊಂದಿದ್ದರು.

ಜೂನ್ 29ರಂದು ಭಾರತ ತಂಡ ಟಿ20 ವಿಶ್ವಕಪ್ ಗೆದ್ದ ನಂತರ, ಟ್ರೋಫಿ ಸ್ವೀಕರಿಸಿದ ಸಂಭ್ರಮಾಚರಣೆಯ ಫೋಟೋವನ್ನು ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಹೃತ್ಪೂರ್ವಕ ಸಂದೇಶದಲ್ಲಿ ಅವರು ಟಿ20 ಸ್ವರೂಪದಿಂದ ನಿವೃತ್ತಿ ಘೋಷಿಸಿದರು.

ಅವರ ಮತ್ತು ಭಾರತ ತಂಡದ ಸದಸ್ಯರು ಟ್ರೋಫಿಯೊಂದಿಗೆ ಆಚರಿಸುತ್ತಿರುವ ಫೋಟೋಗಳನ್ನು ಒಳಗೊಂಡಿರುವ ವಿರಾಟ್ ಕೊಹ್ಲಿ ಪೋಸ್ಟ್ 19 ಮಿಲಿಯನ್‌ಗೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದ್ದು, ಇದು ಭಾರತದ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಇಷ್ಟಪಟ್ಟ ಫೋಟೋವಾಗಿದೆ.

ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿರುವ ಚಿತ್ರ ಮತ್ತು ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮಾಚರಣೆ ನಡೆಸುತ್ತಿರುವ ಚಿತ್ರಗಳನ್ನು ವಿರಾಟ್ ಕೊಹ್ಲಿ ಪೋಸ್ಟ್ ಒಳಗೊಂಡಿತ್ತು.

ಇದರಲ್ಲಿ, "ಇದಕ್ಕಿಂತ ಉತ್ತಮ ದಿನವನ್ನು ಕನಸು ಮಾಡಲು ಸಾಧ್ಯವಿಲ್ಲ. ದೇವರು ದೊಡ್ಡವನು ಮತ್ತು ನಾನು ಕೃತಜ್ಞತೆಯಿಂದ ತಲೆಬಾಗುತ್ತೇನೆ. ನಾವು ಅಂತಿಮವಾಗಿ ಇದನ್ನು ಮಾಡಿದ್ದೇವೆ. ಜೈ ಹಿಂದ್," ಎಂದು ವಿರಾಟ್ ಕೊಹ್ಲಿ ಶೀರ್ಷಿಕೆ ನೀಡಿದ್ದಾರೆ.

ಇದಕ್ಕೂ ಮೊದಲು, ಫೆಬ್ರವರಿ 7, 2023ರಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದ ಕಿಯಾರಾ ಮತ್ತು ಸಿದ್ಧಾರ್ಥ್ ಅವರ ಮದುವೆಯ ಫೋಟೋ ಲಕ್ಷಾಂತರ ಲೈಕ್‌ಗಳೊಂದಿಗೆ ದಾಖಲೆಯನ್ನು ಹೊಂದಿತ್ತು.

ಅವರಿಗಿಂತ ಮೊದಲು, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವಿವಾಹದ ಫೋಟೋ ಭಾರತದಲ್ಲಿ ಹೆಚ್ಚು ಇಷ್ಟಪಟ್ಟ ಪೋಸ್ಟ್ ಅನ್ನು ಹೊಂದಿದ್ದರು. ಅದು 13.19 ಮಿಲಿಯನ್ ಲೈಕ್‌ಗಳನ್ನು ಹೊಂದಿತ್ತು.

ವಿರಾಟ್ ಕೊಹ್ಲಿಯ ಪೋಸ್ಟ್ ಭಾರತದಲ್ಲಿ ಹೆಚ್ಚು ಲೈಕ್ ಪಡೆದುಕೊಂಡ ಚಿತ್ರವಾಗಿದ್ದರೂ, 75.3 ಮಿಲಿಯನ್ ಲೈಕ್‌ಗಳನ್ನು ಹೊಂದಿರುವ ಮತ್ತು ಸಾರ್ವಕಾಲಿಕ ಹೆಚ್ಚು ಇಷ್ಟಪಟ್ಟ ಪೋಸ್ಟ್‌ನ ದಾಖಲೆಯನ್ನು ಹೊಂದಿರುವ 2022ರ ಫಿಫಾ ವಿಶ್ವಕಪ್ ವಿಜಯವನ್ನು ಆಚರಿಸುವ ಲಿಯೋನೆಲ್ ಮೆಸ್ಸಿ ಅವರ ಪೋಸ್ಟ್‌ಗಿಂತ ಇನ್ನೂ ಬಹಳ ಹಿಂದಿದೆ.

11 ವರ್ಷಗಳ ನಂತರ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡ ಭಾರತ ತಂಡ

ಐಸಿಸಿ ಟ್ರೋಫಿಗಾಗಿ 11 ವರ್ಷಗಳ ಕಾಯುವಿಕೆಯನ್ನು ಜೂನ್ 29ರಂದು ಕೊನೆಗೊಳಿಸಿದ ಭಾರತ ತಂಡ, ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ರೋಚಕ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳಿಂದ ಸೋಲಿಸಿತು.

ಪಂದ್ಯಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ ನಿರ್ಣಾಯಕ 76 ರನ್ ಗಳಿಸುವ ಮೂಲಕ ಭಾರತ ತಂಡವು 176 ರನ್ ಕಲೆಹಾಕಲು ಸಹಾಯ ಮಾಡಿದರು. ಆನಂತರ ದಕ್ಷಿಣ ಆಫ್ರಿಕಾ ತಂಡವನ್ನು 169 ರನ್‌ಗಳಿಗೆ ನಿಯಂತ್ರಿಸಿ 2013ರ ನಂತರ ಮೊದಲ ಬಾರಿಗೆ ಐಸಿಸಿ ಟ್ರೋಫಿ ಎತ್ತಿ ಹಿಡಿದರು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತರಾದ ಕೊಹ್ಲಿ, ರೋಹಿತ್, ಜಡೇಜಾ

ಭಾರತದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರು ಕ್ರಿಕೆಟ್‌ನ ಚುಟುಕು ಸ್ವರೂಪಕ್ಕೆ ವಿದಾಯ ಹೇಳಿದರು.

2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿಜಯೋತ್ಸವದ ನೆರಳಿನಲ್ಲೇ ಈ ನಿರ್ಧಾರ ತೆಗೆದುಕೊಂಡರು. ಇದು ಭಾರತೀಯ ಕ್ರಿಕೆಟ್‌ನಲ್ಲಿ ಐತಿಹಾಸಿಕ ಕ್ಷಣವನ್ನು ಗುರುತಿಸುತ್ತದೆ.

Story first published: Monday, July 1, 2024, 17:44 [IST]
Other articles published on Jul 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+