Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಫೈನಲ್‌ನಲ್ಲಿ ಹೇಗಿದೆ ವಿರಾಟ್‌ ಕೊಹ್ಲಿ ಸಾಧನೆ? ಇಲ್ಲಿದೆ ಅಂಕಿ ಅಂಶ

ಇಂಡಿಯನ್ ಪ್ರೀಮಿಯರ್‌ ಲೀಗ್ (ಐಪಿಎಲ್‌) ಮುಕ್ತಾಯಕ್ಕೆ ದಿನಗಣನೆ ಆರಂಭವಾಗಿದೆ. ಶುಕ್ರವಾರ ನ್ಯೂ ಚಂಡೀಗಢದಲ್ಲಿ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಡಲಿವೆ. ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ರಾಜಸ್ಥಾನ್ ಆತ್ಮವಿಶ್ವಾಸದಿಂದ ಅಂಗಳಕ್ಕೆ ಇಳಿಯಲಿದೆ. ಎರಡನೇ ಕ್ವಾಲಿಫೈಯರ್‌ನಲ್ಲಿ ಜಯ ಸಾಧಿಸಿದ ತಂಡ ಮೇ 31 ರಂದು ಅಹಮದಾಬಾದ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿದೆ. ಸಂಘಟಿತ ಆಟದ ಮಂತ್ರವನ್ನು ಜಪಿಸುತ್ತಿರುವ ಆರ್‌ಸಿಬಿ ಎದುರಾಳಿಯ ಸವಾಲುಗಳನ್ನು ಮೆಟ್ಟಿನಿಂತು ಲೀಗ್‌ ಹಂತದಲ್ಲಿ ಅಗ್ರಸ್ಥಾನದೊಂದಿಗೆ ಪ್ಲೇ ಆಫ್‌ ಪ್ರವೇಶಿಸಿತ್ತು. ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ 92 ರನ್‌ಗಳಿಂದ ಗುಜರಾತ್ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶ ಪಡೆದಿದೆ. ಈ ವೇಳೆ ಎಲ್ಲರ ಕಣ್ಣುಗಳು ಆರ್‌ಸಿಬಿ ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ.

Virat Kohli s IPL Final Record

ವಿರಾಟ್‌ ಕೊಹ್ಲಿ ಈ ಆವೃತ್ತಿಯಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೆ ಆರೆಂಜ್ ಕ್ಯಾಪ್‌ ರೇಸ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ವಿರಾಟ್‌ ಈ ಆವೃತ್ತಿಯಲ್ಲಿ ಆಡಿದ 15 ಪಂದ್ಯಗಳಲ್ಲಿ 600 ರನ್‌ ಸಿಡಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 4 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಅಂತಿಮ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಎರಡನೇ ಟ್ರೋಫಿ ತೊಡಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಫೈನಲ್‌ನಲ್ಲಿ ಹೇಗಿದೆ ವಿರಾಟ್ ಅಂಕಿ ಅಂಶ

ಒತ್ತಡವನ್ನು ವಿರಾಟ್‌ ಕೊಹ್ಲಿ ಆನಂದಿಸುತ್ತಾರೆ. ಒತ್ತಡವನ್ನು ಮೆಟ್ಟಿನಿಂತು ರನ್‌ ಬಾರಿಸುವುದು ಎಂದರೆ ವಿರಾಟ್ ಕೊಹ್ಲಿ ಅವರಿಗೆ ನೀರು ಕುಡಿದಷ್ಟು ಸುಲಭದ ಕೆಲಸ. ಇವರು ಬಿಗ್‌ ಮ್ಯಾಚ್‌ಗಳಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಹೆಸರುವಾಸಿಯಾಗಿದ್ದಾರೆ. ಈಗಾಗಲೇ ಇವರು ಐಪಿಎಲ್‌ನ 4 ಫೈನಲ್‌ಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇನ್ನೊಂದು ಫೈನಲ್ ಆಡಲು ಸಿದ್ಧರಾಗುತ್ತಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್‌ ಫೈನಲ್‌ಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು 2008ರಲ್ಲಿ ಮೊದಲ ಐಪಿಎಲ್‌ ಫೈನಲ್‌ ಆಡಿದರು. ಈ ವೇಳೆ ಡೆಕ್ಕನ್ ಡೆಕ್ಕನ್ ಚಾರ್ಜರ್ಸ್ ವಿರುದ್ಧ 7 ರನ್‌ ಸಿಡಿಸಿದ್ದರು. 2011ರಲ್ಲೂ ಆರ್‌ಸಿಬಿ ಫೈನಲ್‌ ಪ್ರವೇಶಿಸಿತ್ತು. ಆಗಲೂ ವಿರಾಟ್‌ 35 ರನ್‌ ಬಾರಿಸಿದ್ದರು. 2016ರಲ್ಲಿ ನಡೆದ ಫೈನಲ್‌ಗೂ ಆರ್‌ಸಿಬಿ ಅರ್ಹತೆ ಪಡೆದಿತ್ತು. ಈ ಪಂದ್ಯದಲ್ಲಿ ಮೊದಲ ಬಾರಿಗೆ ವಿರಾಟ್‌, ಎಸ್‌ಆರ್‌ಎಚ್‌ ವಿರುದ್ಧ ಅರ್ಧಶತಕ ಬಾರಿಸಿದ್ದರು. ಕಳೆದ ಆವೃತ್ತಿಯ ಫೈನಲ್‌ನಲ್ಲೂ ವಿರಾಟ್ 35 ಎಸೆತಗಳಲ್ಲಿ 43 ರನ್‌ ಸಿಡಿಸಿದ್ದಾರೆ. ಈ ಬಾರಿಯ ಫೈನಲ್‌ನಲ್ಲಿ ಇವರು ಹೇಗೆ ಆಡುತ್ತಾರೆ ಎಂಬ ಲೆಕ್ಕಾಚಾರವನ್ನು ಅಭಿಮಾನಿಗಳು ಹಾಕಿಕೊಳ್ಳುತ್ತಿದ್ದಾರೆ.

Story first published: Thursday, May 28, 2026, 13:05 [IST]
Other articles published on May 28, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+