RCB vs RR IPL 2025: ಆರ್‌ಸಿಬಿ ರಾಯಲ್ಸ್ ವಿರುದ್ಧ ಸುಲಭವಾಗಿ ಪಂದ್ಯ ಗೆಲ್ಲಲು ಕಾರಣವಾದ ಅಂಶ ಯಾವದು?
ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ನಡುವಣ ಪಂದ್ಯ ಜೈಪುರದಲ್ಲಿ ನಡೆಯಿತು. ಈ ಪಂದ್ಯವನ್ನು ಆರ್‌ಸಿಬಿ 9 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಏಕ ಪಕ್ಷೀಯ ಗೆಲುವು ದಾಖಲಿಸಿದೆ. ಆರ್‌ಸಿಬಿ ಸ್ಪರ್ಧಾತ್ಮಕ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಿದೆ. ಈ ಮೂಲಕ ನಾಲ್ಕನೇ ಎದುರಾಳಿಯನ್ನು ತವರಿನಲ್ಲಿ ಬಗ್ಗು ಬಡೆದಿದೆ. ಬೆಂಗಳೂರು ತಂಡ ಈ ಗೆಲುವಿಗೆ ಸಂಘಟಿತ ಆಟ ಎದ್ದು ಕಾಣುತ್ತದೆ. ಪಂದ್ಯಕ್ಕೆ ತಿರುವು ನೀಡಿದ ಅಂಶ ಯಾವುದು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಇದಕ್ಕೆ ಉತ್ತರ ಇಲ್ಲಿದೆ.
ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಕಲೆ ಹಾಕಿತು. ಈ ವೇಳೆ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲವಾಗಿದ್ದು, ತಂಡದ ಬೃಹತ್ ಮೊತ್ತದ ಕನಸಿಗೆ ಪೆಟ್ಟು ಬಿದ್ದಿತು. ಆದರೆ ಯಶಸ್ವಿ ಜೈಸ್ವಾಲ್ ರಾಜಸ್ಥಾನ ಪರ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ಆಧಾರವಾದರು. ಅಲ್ಲದೆ ಅರ್ಧಶತಕ ಬಾರಿಸಿ ಮೊತ್ತವನ್ನು ಹಿಗ್ಗಿಸಿದರು. ರಾಜಸ್ಥಾನ ತಂಡದ ಬ್ಯಾಟಿಂಗ್ ಕೈ ಕೊಟ್ಟಿದ್ದು ಪಂದ್ಯಕ್ಕೆ ತಿರುವ ನೀಡಿದ ಅಂಶ ಅಲ್ಲವೇ ಅಲ್ಲ. ಆದರೆ ಆ ಒಂದು ತಪ್ಪು ನಿಜಕ್ಕೂ ರಾಜಸ್ಥಾನ ತಂಡಕ್ಕೆ ಬಹುವಾಗಿ ಕಾಡಿತು.

ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ ಹಲವು ಚಾನ್ಸ್‌ಗಳನ್ನು ಕೈ ಚೆಲ್ಲಿತು. ಆದರೆ ಆ ಒಂದು ಕ್ಯಾಚ್ ಡ್ರಾಪ್ ರಾಜಸ್ಥಾನಕ್ಕೆ ದುಬಾರಿಯಾಯಿತು. ಹಾಗಿದ್ದರೆ ಸಂದೀಪ್ ಶರ್ಮಾ ಎಸೆತದಲ್ಲಿ 23 ರನ್ ಬಾರಿಸಿದ್ದ ಫಿಲ್ ಸಾಲ್ಟ್ ಇನ್ನೊಂದು ಬಿಗ್ ಹಿಟ್ ಮಾರಿಸಲು ಮುಂದಾದರು. ಈ ವೇಳೆ ಚೆಂಡು ಆಕಾಶದೆತ್ತರಕ್ಕೆ ಸಾಗಿತು. ಆದರೆ ಬೌಂಡರಿ ಲೈನ್ ಮಾತ್ರ ಕ್ರಾಸ್ ಮಾಡಲಿಲ್ಲ. ಅಂಪೈರ್ ಹಿಂದೆ ಲ್ಯಾಂಡ್ ಆಗುವಾಗ ಸಂದೀಪ್ ಶರ್ಮಾ ಕ್ಯಾಚ್ ಹಿಡಿಯುವ ಪ್ರಯತ್ನ ಮಾಡಿದರು. ಆದರೆ ವಿಫಲರಾದರು. ಫಿಲ್ ಸಾಲ್ಟ್ 34 ರನ್ ಬಾರಿಸಿದ್ದಾಗ ಯಶಸ್ವಿ ಜೈಸ್ವಾಲ್ ರನ್ ಔಟ್ ಚಾನ್ಸ್ ಮಿಸ್ ಮಾಡಿದ್ದು ಪಂದ್ಯಕ್ಕೆ ತಿರುವು ಸಿಕ್ಕಿತಾ ಎಂದು ಕೇಳಿದರೆ, ನೂರಕ್ಕೆ ನೂರ ಪ್ರತಿಷತ ಅಲ್ಲ ಆದರೆ ಕೊಂಚ ಸಿಕ್ಕಿತು ಎಂದು ಹೇಳಬಹುದು.
ಪಂದ್ಯದ ಟರ್ನಿಂಗ್ ಪಾಯಿಂಟ್
ಈ ಎಲ್ಲ ಅಂಶಗಳು ಪಂದ್ಯಕ್ಕೆ ತಿರುವು ನೀಡಿದ್ದು ನಿಜ. ಆದರೆ ವಿರಾಟ್ ಕೊಹ್ಲಿ ಅವರ ಆ ಒಂದು ಕ್ಯಾಚ್ ರಾಜಸ್ಥಾನ ತಂಡಕ್ಕೆ ದುಬಾರಿಯಾಯಿತು. ಆಗಿನ್ನು ವಿರಾಟ್ ಸೆಟ್ ಆಗೋಕೆ ಟೈಮ್ ತೆಗೆದುಕೊಳ್ಳುತ್ತಿದ್ದರು. ಸಾಲ್ಟ್ ಗೇರ್ ಚೇಂಜ್ ಮಾಡಿ ಆಗಿತ್ತು. ವಿರಾಟ್ ಸಹ ತಮ್ಮ ಗೇರ್ ಶಿಫ್ಟ್ ಮಾಡಲು ಹೋಗಿ ಜೀವದಾನ ಪಡೆದರು. ಕ್ರಾಸ್ ಸೀಮ್ ಡಿಲಿವರಿಯಲ್ಲಿ ಮಿಡ್ ಆಫ್ ಮೇಲೆ ಸಿಕ್ಸರ್ ಬಾರಿಸಲು ಹೋದರು. ಆದರೆ ಇವರ ಬ್ಯಾಟ್‌ನ ಅಂಚಿಗೆ ಬಡಿದ ಚೆಂಡು ಆಗಸದೆತ್ತರಕೆ ಹೋಯಿತು. ಲಾಂಗ್ ಆನ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ರಿಯಾನ್ ಪರಾಗ್ ಓಡಿ ಬಂದು ಹಿಡಿಯಲು ಮುಂದಾದರು. ಇವರು ಚೆಂಡಿನ ಬಳಿಯ ವರೆಗೆ ಉತ್ತಮವಾಗಿ ಬಂದರು. ಆದರೆ ಕ್ಯಾಚ್ ಹಿಡಿಯುವಾಗ ಜಡ್ಜ್ ಮೆಂಟ್ ಮಿಸ್ ಮಾಡಿಕೊಂಡರು. ಈ ಕ್ಯಾಚ್ ಬಿಟ್ಟಿದ್ದು ರಾಯಲ್ಸ್ ಪೆಟ್ಟು ಬಿದ್ದಿತು. ಆ ಬಳಿಕ ವಿರಾಟ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು.

ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ವಿರಾಟ್ 45 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 62 ರನ್ ಬಾರಿಸಿ ಜಯದಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications