For Quick Alerts
ALLOW NOTIFICATIONS  
For Daily Alerts
 

ವಿರಾಟ್‌ ಕೊಹ್ಲಿಯ ಮ್ಯಾಜಿಕಲ್ ಸ್ಟ್ರೈಟ್ ಡ್ರೈವ್‌ಗೆ ಫ್ಯಾನ್ಸ್‌ ಫಿದಾ

ಐಪಿಎಲ್‌ 19ನೇ ಆವೃತ್ತಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿ ಗೆಲುವಿನ ಆರಂಭವನ್ನು ಮಾಡಿತು. ಟ್ರೋಫಿ ಉಳಿಸಿಕೊಳ್ಳುವ ಕನಸಿನೊಂದಿಗೆ ಕಣಕ್ಕೆ ಇಳಿದಿದ್ದ ಆರ್‌ಸಿಬಿ ಸೊಗಸಾದ ಪ್ರದರ್ಶನ ನೀಡಿ ಅಭಿಮಾನಿಗಳನ್ನು ರಂಜಿಸಿತು. ಚಿನ್ನಸ್ವಾಮಿ ಮೈದಾನದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡ ಸಂಘಟಿತ ಆಟದ ಪ್ರದರ್ಶನ ನೀಡಿತು.

ಆರ್‌ಸಿಬಿ ಮೊದಲ ಪಂದ್ಯ ಗೆಲ್ಲುವಲ್ಲಿ ವೇಗದ ಬೌಲರ್‌ ಜೇಕಬ್ ಡಫಿ ತಮ್ಮ ಅಮೂಲ್ಯ ಕೊಡುಗೆ ನೀಡಿದರು. ಪರಿಣಾಮ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಆದರೆ ಬ್ಯಾಟಿಂಗ್‌ನಲ್ಲಿ ದೇವದತ್ ಪಡಿಕ್ಕಲ್‌ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿ ತಂಡದ ಗೆಲವನ್ನು ಸುಲಭವಾಗಿಸಿದರು. ನಾಯಕ ರಜತ್ ಪಾಟಿದಾರ್‌ ಸಹ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು.

Virat Kohli

ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ದೇವದತ್ ಪಡಿಕ್ಕಲ್‌ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಗಮನ ಸೆಳೆದರು. ಅನುಭವಿ ಬ್ಯಾಟರ್‌ ವಿರಾಟ್‌ ಕೊಹ್ಲಿ ಮಾತ್ರ ತಮ್ಮ ಕಲಾತ್ಮಕ ಬ್ಯಾಟಿಂಗ್‌ನಿಂದ ಅಭಿಮಾನಿಗಳನ್ನು ರಂಜಿಸಿದರು. ಶನಿವಾರ ನಡೆದ ಪಂದ್ಯದಲ್ಲಿ ವಿರಾಟ್‌ ಅದೆಷ್ಟೋ ಬಿಗ್ ಹಿಟ್‌ಗಳನ್ನು ಬಾರಿಸಿದ್ದಾರೆ. ಆದರೆ ಆ ಒಂದು ಶಾಟ್ ಮಾತ್ರ ಅಭಿಮಾನಿಗಳಿಗೆ ರಂಜಿಸಿದೆ. ಅಲ್ಲದೆ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಹ್ಯಾರಿಸ್‌ ರೌಫ್‌ ಅವರಿಗೆ ಬಾರಿಸಿದ ಆ ಒಂದು ಸಿಕ್ಸರ್‌ ನೆನಪಿಸುವಂತಹ ಸಿಕ್ಸರ್ ಬಾರಿಸಿ ಮಿಂಚಿದರು.

ಮ್ಯಾಜಿಕಲ್ ಸ್ಟ್ರೈಟ್ ಡ್ರೈವ್‌

ಇನಿಂಗ್ಸ್‌ನ ಏಳನೇ ಓವರ್‌ನ್ನು ಇಶಾನ್ ಮಲಿಂಗ್ ಬೌಲಿಂಗ್ ಮಾಡಿದರು. ಈ ಓವರ್‌ನ ಕೊನೆಯ ಎಸೆತದಲ್ಲಿ ವಿರಾಟ್‌ ಕೊಹ್ಲಿ ಅವರು ಬಾರಿಸಿದ ಆ ಒಂದು ಶಾಟ್‌ ಕಂಡು ಮೈದಾನದಲ್ಲಿ ಕುಳಿತಿದ್ದ ಅಭಿಮಾನಿಗಳು ಎದ್ದು ನಿಂತು ಗೌರವ ನೀಡಿದರು. ಮಲಿಂಗ್‌ ಅವರು ಕೊಂಚ ಮುಂದಗಡೆ ಹಾಕಿದ್ದ ಚೆಂಡನ್ನು ಬೌಲರ್‌ ತಲೆಯ ಮೇಲೆ ಸೊಗಸಾದ ಶಾಟ್‌ ಬಾರಿಸಿದರು. ಈ ಶಾಟ್‌ನ್ನು ನೋಡಿದ ಬಳಿಕ ಒತ್ತಡದಲ್ಲಿ ಕೊಹ್ಲಿಗಿಂತ ಉತ್ತಮ ಬ್ಯಾಟಿಂಗ್ ಮಾಡುವ ಆಟಗಾರ ಮತ್ತೊಬ್ಬ ಇಲ್ಲ ಎಂಬುದನ್ನು ಈ ಶಾಟ್ ಸಾಬೀತು ಪಡಿಸಿತು. ಈ ಮ್ಯಾಜಿಕಲ್ ಸ್ಟ್ರೈಟ್ ಡ್ರೈವ್‌ ಕಂಡು ಅಭಿಮಾನಿಗಳು ಫುಲ್ ಫಿದಾ ಆದರು.

ಏಷ್ಯಾದ ನಂಬರ್ 1 ಬ್ಯಾಟರ್‌

ಈ ಕ್ಲಾಸಿಕ್‌ ಇನಿಂಗ್ಸ್‌ ಮೂಲಕ ವಿರಾಟ್‌ ಟಿ20 ಫಾರ್ಮೆಟ್‌ನಲ್ಲಿ ಏಷ್ಯಾದಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಪಂದ್ಯದಲ್ಲಿ ವಿರಾಟ್ 29 ರನ್‌ಗಳ ಗಡಿ ದಾಟಿದ ತಕ್ಷಣ, ಅವರು ಶೋಯೆಬ್ ಮಲಿಕ್ ಅವರ ಗರಿಷ್ಠ ರನ್‌ಗಳ ದಾಖಲೆಯನ್ನು ಹಿಂದಿಕ್ಕಿದರು. ಶೋಯೆಬ್ ಮಲಿಕ್ ತಮ್ಮ ಟಿ20 ವೃತ್ತಿಜೀವನದಲ್ಲಿ 13,571 ರನ್ ಗಳಿಸಿದ್ದರು. ವಿರಾಟ್ ಈಗ 13,612 ರನ್ ಗಳಿಸಿದ್ದು ದಾಖಲೆ ಬರೆದಿದ್ದಾರೆ.

Story first published: Sunday, March 29, 2026, 15:38 [IST]
Other articles published on Mar 29, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+