ಕೌನ್ ಬನೇಗಾ ಕರೋಡ್‌ಪತಿಯಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಪ್ರಶ್ನೆ: ನಿಮಗೆ ತಿಳಿದಿದೆಯಾ ಉತ್ತರ
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಆಟಕ್ಕೆ ಪ್ರಪಂಚದಾದ್ಯಂತ ಅಭಿಮಾನಿಗಳ ಬಳಗವಿದೆ. ಈ ಸ್ಟಾರ್ ಕ್ರಿಕೆಟ್ ಆಟಗಾರ ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರು ತಮ್ಮ ಬ್ಯಾಟಿಂಗ್ ನಿಂದ ಎಷ್ಟು ಹೆಸರುವಾಸಿಯೋ ಅಷ್ಟೇ, ತಮ್ಮ ಫಿಟ್ನೆಸ್ ಮೂಲಕವೂ ಎಲ್ಲರ ಮನ ಕದ್ದಿದ್ದಾರೆ. ವಿರಾಟ್ ಕೊಹ್ಲಿ ಆಟವನ್ನು ಫಾಲೋ ಮಾಡೋ ಅಭಿಮಾನಿಗಳ ಗುಂಪು ದೊಡ್ಡದಿದೆ. ಇವರ ಬಗ್ಗೆ ಈಗಾಗಲೇ ಹಲವು ಕ್ವೀಜ್‌ನಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಈಗ ಕೌನ್ ಬನೇಗಾ ಕರೋಡ್ ಪತಿಯಲ್ಲಿ ವಿರಾಟ್ ಕೊಹ್ಲಿ ಅವರ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ.
ಸೋನಿ ಟಿವಿಯಲ್ಲಿ ಕೌನ್ ಬನೇಗಾ ಕರೋಡ್‌ಪತಿಯ 17 ನೇ ಸೀಸನ್ ಪ್ರಾರಂಭವಾಗಿದೆ. ಈ ಕಾರ್ಯಕ್ರಮವನ್ನು ಮತ್ತೊಮ್ಮೆ ಬಾಲಿವುಡ್ ಬಿಗ್ ಬಿ ಖ್ಯಾತಿಯ ಅಮಿತಾಬ್ ಬಚ್ಚನ್ ನಿರೂಪಿಸುತ್ತಿದ್ದಾರೆ. ಕೆಬಿಸಿ 17ರ ಆವೃತ್ತಿಯಲ್ಲಿ ಅಮಿತಾಬ್ ಬಚ್ಚನ್ ಅವರು ವಿರಾಟ್ ಕೊಹ್ಲಿ ಅವರಿಗೆ ಕೇಳಿದ ಪ್ರಶ್ನೆಯನ್ನು ಕೇಳಿದರು. ಈ ಪ್ರಶ್ನೆ ಸಂಪೂರ್ಣವಾಗುತ್ತಿದ್ದಂತೆ ಹಾಟ್ ಸೀಟ್‌ನಲ್ಲಿ ಕುತಿದ್ದ ಸ್ಪರ್ಧಿ ನಗುತ್ತಾ ತಮಗೆ ಈ ಪ್ರಶ್ನೆಯ ಉತ್ತರ ತಮಗೂ ತಿಳಿದಿರುವುದಾಗಿ ಸನ್ನೆ ಮಾಡಿದರು. ಆಕ್ಷನ್ ನೀಡುತ್ತಿದ್ದಂತೆ ಹಾಟ್ ಸೀಟ್‌ನಲ್ಲಿ ಕುಳಿತಿದ್ದ ಸ್ಪರ್ಧೆ ವಿರಾಟ್ ಕೊಹ್ಲಿ ಹೆಸರನ್ನು ತೆಗೆದುಕೊಂಡರು. ಹಾಗಿದ್ರೆ ಕೆಬಿಸಿ 17ರಲ್ಲಿ ಕೇಳಲಾದ ಪ್ರಶ್ನೆ ಏನು ಎಂಬ ಬಗ್ಗೆ ಡಿಟೇಲ್ಸ್ ಇಲ್ಲಿದೆ.

ಪ್ರಶ್ನೆ: ಐಪಿಎಲ್‌ನಲ್ಲಿ ಯಾವ ಆಟಗಾರ ಒಂದೇ ಫ್ರಾಂಚೈಸಿ ಪರ ಐಪಿಎಲ್‌ನಲ್ಲಿ 9 ಸಾವಿರ ರನ್ ಪೂರ್ಣಗೊಳಿಸಿದ್ದಾರೆ ಎಂಬ ಪ್ರಶ್ನೆಯನ್ನು ಕೇಳಿದ್ರು.
ಇದಕ್ಕೆ ನಾಲ್ಕು ಆಯ್ಕೆಗಳನ್ನು ಸಹ ನೀಡಲಾಗಿತ್ತು. ಹಾಟ್ ಸೀಟ್‌ನಲ್ಲಿ ಕುಳಿತಿದ್ದ ಸ್ಪರ್ಧಿ ವಿರಾಟ್ ಕೊಹ್ಲಿ ಎಂದು ಉತ್ತರ ನೀಡಿದರು. ಉತ್ತರ ಸಂಪೂರ್ಣ ಸರಿಯಾಗಿದೆ ಎಂದು ಬಿಗ್ ಬಿ ತಮ್ಮದೇ ಧಾಟಿಯಲ್ಲಿ ತಿಳಿಸಿದರು. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುವಾಗ 9,000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ.
ಭಾವುಕ ಕ್ಷಣ
ಐಪಿಎಲ್ ಗೆಲ್ಲುವ ಆರ್‌ಸಿಬಿ ತಂಡದ ಕನಸು 17 ವರ್ಷಗಳಿಂದ ನನಸಾಗಿರಲಿಲ್ಲ. ಆದರೆ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ಗೆದ್ದಿತು. ಆಗ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕಣ್ಣಂಚಲ್ಲಿ ನೀರು ತುಂಬಿತ್ತು. ಒಬ್ಬ ಸ್ಟಾರ್ ಕ್ರಿಕೆಟ್ ಆಟಗಾರ ಅಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದು, ಭಾವನಾತ್ಮಕವಾಗಿದ್ದಾನೆ. ಹಲವು ವರ್ಷಗಳಿಂದ ಸಾಧಿಸಲಾಗದನ್ನು ಸಾಧಿಸಿದಾಗ ವಿರಾಟ್ ಆನಂದ ಭಾಷ್ಪ ಎಲ್ಲರ ಕಣ್ಣಂಚಲ್ಲಿ ನೀರು ಬರಿಸುವಂತೆ ಮಾಡಿತು ಎಂದು ಅಮಿತಾಬ್ ಇದೇ ಸಂದರ್ಭದಲ್ಲಿ ತಿಳಿಸಿದರು.
ವಿರಾಟ್ ಕೊಹ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಆರ್‌ಸಿಬಿ ತಂಡದ ಪರವೇ ಬ್ಯಾಟ್ ಮಾಡುತ್ತಿದ್ದಾರೆ. ಈಗಲೂ ಇವರು ಆರ್‌ಸಿಬಿ ತಂಡದ ಸ್ಟಾರ್ ಪ್ಲೇಯರ್. ಅವರು ನಾನು ಕೊನೆಯ ವರೆಗೂ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವುದಾಗಿಯೂ ತಿಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications