ಧವನ್, ಪೂಜಾರಾ ಇಬ್ಬರನ್ನು ರನ್ ಔಟ್ ಮಾಡಿಸಿದ ಕೊಹ್ಲಿ!
ಬೆಂಗಳೂರು, ಜ.6: ಭಾರತ ಟೆಸ್ಟ್ ತಂಡದ ಹೊಸ ನಾಯಕ ವಿರಾಟ್ ಕೊಹ್ಲಿ ಅಧಿಕಾರ ಕೈಗೆ ಸಿಗುತ್ತಲೇ ಆರಂಭಿಕ ಶಿಖರ್ ಧವನ್ ಮತ್ತು ಚೇತೇಶ್ವರ ಪೂಜಾರ ಅವರನ್ನು ತಂಡದಿಂದ ಹೊರಗುಳಿಯುವಂತೆ ಮಾಡಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
26 ವರ್ಷದ ವಿರಾಟ್ ಕೊಹ್ಲಿ ಸರ್ವಾಧಿಕಾರಿ ಧೋರಣೆ ತಳೆಯುತ್ತಿದ್ದಾರೆಯೇ? ಎಂಬ ಅನುಮಾನಗಳು ಈ ಪ್ರಕರಣದಿಂದ ಮೂಡಿದೆ. ಸರಣಿ ಸೋತಿರುವ ಭಾರತಕ್ಕೆ ನಾಲ್ಕನೇ ಟೆಸ್ಟ್ ಗೆದ್ದರೆ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಬಹುದು ಅಷ್ಟೇ. ಆದರೆ ಇಂಥ ಮಹತ್ವದ ಬದಲಾವಣೆ ಯಾಕೆ ನಡೆಯಿತು ಎಂಬುದಕ್ಕೆ ಅನೇಕ ಕಾರಣಗಳು ದೊರೆಯುತ್ತವೆ.[ಡ್ರೆಸಿಂಗ್ ರೂಂನಲ್ಲಿ ಧವನ್ - ಕೊಹ್ಲಿ ಫೈಟ್..?]

ಡ್ರೆಸ್ಸಿಂಗ್ ರೂಂ ನಲ್ಲಿ ಎಲ್ಲ ಸರಿಯಿಲ್ಲ
ಮಹೇಂದ್ರ ಸಿಂಗ್ ಧೋನಿ ದಿಢೀರ್ ಎಂದು ನಿವೃತ್ತಿ ಘೋಷಿಸಿದಾಗಲೇ ಭಾರತ ತಂಡದ ಡ್ರೆಸ್ಸಿಂಗ್ ರೂಂ ನಲ್ಲಿ ಎಲ್ಲ ಸರಿಯಿಲ್ಲ ಎಂಬುದು ಗೊತ್ತಾಗಿತ್ತು. ಈಗ ಅದಕ್ಕೆ ಮತ್ತಷ್ಟು ಆಧಾರಗಳು ದೊರೆತಿವೆ. ಆದರೆ ಎರಡು ಜನ ಆಟಗಾರರನ್ನು ಏಕಾಏಕಿ ಹೊರಹಾಕಿದ್ದು ಯಾಕೆ? ಎಂಬುದಕ್ಕೆ ಕೊಹ್ಲಿಯೇ ಉತ್ತರ ಹೇಳಬೇಕು.

ಸುಮ್ಮನೆ ಸಿಡುಕಾದ ಕೊಹ್ಲಿ
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ನ ನಾಲ್ಕನೇ ದಿನ ಅಭ್ಯಾಸದ ವೇಳೇ ಗಾಯಗೊಂಡಿದ್ದ ಧವನ್ ಬ್ಯಾಟಿಂಗ್ ಗೆ ತೆರಳಲು ನಿರಾಕರಿಸಿದ್ದರು. ಇತ್ತ ಹೆಚ್ಚು ಅಭ್ಯಾಸ ಮಾಡದ ಕೊಹ್ಲಿ ಬ್ಯಾಟಿಂಗ್ ಗೆ ತೆರಳುವಂತೆ ಸೂಚಿಸಲಾಗಿತ್ತು. ಅಸಮಾಧಾಗೊಂಡೇ ಮೈದಾನಕ್ಕಿಳಿದ ಕೊಹ್ಲಿ ಕೇವಲ 1 ರನ್ ಗಳಿಸಿ ಅತ್ಯಂತ ಕೆಟ್ಟ ರೀತಿಯಲ್ಲಿ ವಿಕೆಟ್ ಒಪ್ಪಿಸಿ ಹಿಂದಿರುಗಿದ್ದರು.

ಗಾಯದಲ್ಲೂ 81 ರನ್
ಅಂತಿಮ ಘಳಿಗೆಯಲ್ಲಿ ಆಟವಾಡಲು ನಿರ್ಧರಿಸಿದ ಧವನ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಭಾರತದ ಪರ ಅತ್ಯಧಿಕ ಅಂದರೆ 81 ರನ್ ಗಳಿಸಿದ್ದರು. ನಂತರ ಫೆವಿಲಿಯನ್ ಗೆ ಹಿಂದಿರುಗಿದ ಧವನ್ ಮೇಲೆ ವಿರಾಟ್ ಸುಮ್ಮನೆ ಹರಿಹಾಯ್ದಿದ್ದರು.

ಬೆಂಚ್ ಕಾಯೋ ಕೆಲಸ
ಈ ಎಲ್ಲ ಘಟನೆಗಳ ಪರಿಣಾಮವೇ ನಾಲ್ಕನೇ ಟೆಸ್ಟ್ ನಿಂದ ಧವನ್ ಸ್ಥಾನ ಕಳೆದುಕೊಳ್ಳುವಂತೆ ಮಾಡಿದೆ. ಧವನ್ ಅಷ್ಟೇನೂ ಕಳಪೆ ಆಟ ಪ್ರದರ್ಶನ ಮಾಡಿರಲಿಲ್ಲ. ಈಗ ಧವನ್ ಜತೆ ಚೇತೇಶ್ವರ ಪೂಜಾರ ಸಹ ಬೆಂಚ್ ಕಾಯುವಂತಾಗಿದೆ.

ಧೋನಿ ಮಾತೆ ಸೂಚಿಸಿತ್ತು
ನಿವೃತ್ತಿ ಘೋಷಿಸಿದ ವೇಳೇ ಮಹೇಂದ್ರ ಸಿಂಗ್ ಧೋನಿ, ಧವನ್-ಕೊಹ್ಲಿ ಕಿತ್ತಾಟವನ್ನು ಒಪ್ಪಿಕೊಂಡಿದ್ದರು. ಕೊಹ್ಲಿಗೆ ಬ್ಯಾಟಿಂಗ್ ಗೆ ತೆರಳಲು ಅತಿ ಕಡಿಮೆ ಸಮಯ ನೀಡಲಾಗಿತ್ತು ಎಂದು ಹೇಳಿದ್ದರು. ತಂಡದ ಒಳಗೆ ಅಸಮಾಧಾನಗಳು ಇವೆ ಎಂಬುದು ಮೇಲ್ನೋಟಕ್ಕೆ ಅಂದು ಗೊತ್ತಾಗಿದ್ದರೂ ಇಂದು ಕೊಹ್ಲಿ ಕ್ರಮದಿಂದ ಬಹಿರಂಗವಾದಂತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications