2022ರಲ್ಲಿ ಹ್ಯಾರಿಸ್ ರೌಫ್ ವಿರುದ್ಧ ವಿರಾಟ್ ಕೊಹ್ಲಿ ಬಾರಿಸಿದ ಸಿಕ್ಸ್‌ಗೆ 'ಶತಮಾನದ ಶಾಟ್' ರೇಟಿಂಗ್ ನೀಡಿದ ಐಸಿಸಿ!
ಪ್ರಸ್ತುತ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ ಆಡಿದ ಎಂಟು ಪಂದ್ಯಗಳನ್ನು ಗೆಲ್ಲುವ ಮೂಲಕ ಅಜೇಯವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ.
ಇದೇ ವೇಳೆ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಬಲಗೈ ಬ್ಯಾಟರ್ ಇತ್ತೀಚೆಗೆ 49ನೇ ಏಕದಿನ ಶತಕ ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದರು.

ಇದೀಗ ವಿರಾಟ್ ಕೊಹ್ಲಿ ತಮ್ಮ ಹಿರಿಮೆಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡರು. ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ನೇರವಾಗಿ ಬಾರಿಸಿದ ಸಿಕ್ಸರ್ ಶಾಟ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) "ಶಾಟ್ ಆಫ್ ದಿ ಸೆಂಚುರಿ' ಎಂಬ ರೇಟಿಂಗ್ ನೀಡಿ ಗೌರವಿಸಿದೆ.
2022ರ ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಭೀಕರ ಪರಿಸ್ಥಿತಿಯಿಂದ ಭಾರತ ತಂಡವನ್ನು ರಕ್ಷಿಸಿದ ವಿರಾಟ್ ಕೊಹ್ಲಿ ಅಜೇಯ 82 ರನ್ ಗಳಿಸಿ ಪಂದ್ಯಶ್ರೇಷ್ಠ ಹಾಗೂ ಪಂದ್ಯವಿಜೇತ ಅರ್ಧಶತಕ ಪೂರ್ಣಗೊಳಿಸಿದರು.
ವಿಡಿಯೋ ಕೆಲವು ಸಾಂಪ್ರದಾಯಿಕ ಐಸಿಸಿ ಟೂರ್ನಿಗಳನ್ನು ಒಳಗೊಂಡಿದೆ
"ಐಸಿಸಿ ಪಂದ್ಯಾವಳಿಗಳಲ್ಲಿ ವಿರಾಟ್ ಕೊಹ್ಲಿ ಅವರ ಟಾಪ್ 10 ಕ್ಷಣಗಳನ್ನು ಹಿಂತಿರುಗಿ ನೋಡುವುದರೊಂದಿಗೆ ಅವರ ಜನ್ಮದಿನವನ್ನು ಆಚರಿಸಿ," ಎಂದು ಐಸಿಸಿ ಎಕ್ಸ್‌ನಲ್ಲಿ ಬರೆದಿದ್ದು, ಜಾಗತಿಕ ಕ್ರಿಕೆಟ್ ಸಂಸ್ಥೆಯು ವಿರಾಟ್ ಕೊಹ್ಲಿಯ ವಿಶೇಷ ತುಣುಕಿನ ಸಂಯೋಜನೆಯನ್ನು ಹಂಚಿಕೊಂಡಿದೆ.
ಇದು ಐಸಿಸಿ ಟೂರ್ನಿಗಳಲ್ಲಿ ಸಿಕ್ಸರ್‌ಗಳು, ಆಚರಣೆಗಳು ಮತ್ತು ಆ 'ಸ್ಪಿರಿಟ್ ಆಫ್ ಕ್ರಿಕೆಟ್ ಮೊಮೆಂಟ್' ಸೇರಿದಂತೆ ಕೆಲವು ಅಪ್ರತಿಮ ಕ್ಷಣಗಳನ್ನು ಒಳಗೊಂಡಿದೆ.

2022ರ ಟಿ20 ವಿಶ್ವಕಪ್‌ನಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದು, ಇದನ್ನು ಐಸಿಸಿ 'ಶತಮಾನದ ಶಾಟ್' ಎಂದು ಶ್ಲಾಘಿಸಿದೆ.
ಇನ್ನು 2023ರ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ 50ನೇ ಏಕದಿನ ಶತಕದ ಮೇಲೆ ಕಣ್ಣಿಟ್ಟಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಬೆಂಗಳೂರಿನಲ್ಲಿ ಎದುರಿಸಲು ಸಜ್ಜಾಗಿದೆ. ಇದು ವಿಶ್ವಕಪ್‌ನಲ್ಲಿ ಭಾರತದ ಕೊನೆಯ ಗುಂಪು-ಹಂತದ ಪಂದ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications