Virat Kohli: ರಣಜಿ ಆಡದಿದ್ರೆ ಟೆಸ್ಟ್ ತಂಡದಲ್ಲಿ ಸ್ಥಾನವಿಲ್ಲ
ಇತ್ತೀಚಿಗೆ ಭಾರತ ತಂಡದ ಸ್ಟಾರ್ ಆಟಗಾರರು ನೀಡುತ್ತಿರುವ ಪ್ರದರ್ಶನದಿಂದ ಬಿಸಿಸಿಐ ಬೇಸರಗೊಂಡಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ರನ್ ಬರ ಅನುಭವಿಸಿದ್ದರು. ಅಲ್ಲದೆ ಆಸ್ಟ್ರೇಲಿಯಾ ಪ್ರವಾಸದಲೂ ವಿಶೇಷ ಸಾಧನೆಯನ್ನು ಏನು ಮಾಡಲಿಲ್ಲ. ಇದರಿಂದ ಬಿಸಿಸಿಐ ಅನುಭವಿ ಆಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದೆ. ನಿಮ್ಮ ಫಾರ್ಮ್ ಕಂಡುಕೊಳ್ಳಿ ಇಲ್ಲದಿದ್ದರೆ ತಂಡದಿಂದ ಕೈ ಬಿಡಲಾಗುವುದು ಎಂಬಂತೆ ಸೂಚನೆ ನೀಡಿದೆ. ಈ ಎಚ್ಚರಿಕೆ ಘಂಟೆ ಬಡಿಯುತ್ತಲೆ ರೋಹಿತ್ ಶರ್ಮಾ ಕಾರ್ಯಪ್ರವೃತ್ತರಾಗಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಸ್ಟಾರ್ ಆಟಗಾರರ ಆಟದ ಬಗ್ಗೆ ಬಿಸಿಸಿಐ ಪ್ರಶ್ನೆಗಳನ್ನು ಎತ್ತಿದೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪರ್ತ್‌ನಲ್ಲಿ ಅಬ್ಬರಿಸಿದ್ದು ಬಿಟ್ಟರೆ, ಆಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್, ಸಿಡ್ನಿ ಟೆಸ್ಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇವರ ಆಟದ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ಈಗ ಬಿಸಿಸಿಐ ಸಹ ಇವರ ಆಟವನ್ನು ಪ್ರಶ್ನಿಸಿದೆ. ಅಲ್ಲದೆ ಎಚ್ಚೆತ್ತುಕೊಳ್ಳುವಂತೆ ಸೂಚಿಸಿದೆ.

ಈಗಾಗಲೇ ಬಿಸಿಸಿಐ ಅಂತಾರಾಷ್ಟ್ರೀಯ ಟೂರ್ನಿಗಳಷ್ಟೇ ದೇಶೀಯ ಟೂರ್ನಿಗಳಿಗೂ ಮಹತ್ವ ನೀಡುವಂತೆ ಅನುಭವಿ ಆಟಗಾರರಿಗೆ ಕಿವಿ ಮಾತು ನೀಡಿದೆ. ಅಲ್ಲದೆ ಫಾರ್ಮ್‌ನಿಂದ ಪರದಾಡುತ್ತಿದ್ದರೆ ರಣಜಿ ಟ್ರೋಫಿಯಲ್ಲಿ ಆಡುವಂತೆ ಸೂಚನೆ ನೀಡಿದೆ. ಈ ಮೂಲಕ ಬಿಸಿಸಿಐ ಅನುಭವಿ ಆಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದೆ. ನಿಮ್ಮ ಫಾರ್ಮ್ ಕಂಡುಕೊಳ್ಳಿ ಇಲ್ಲದಿದ್ದರೆ ತಂಡದಿಂದ ಕೈ ಬಿಡಲಾಗುವುದು ಎಂಬಂತೆ ವಾರ್ನಿಂಗ್ ನೀಡಿದೆ.
12 ವರ್ಷಗಳ ನಂತರ ಭಾರತ ತವರು ನೆಲದಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತು. ಅದೇ ಸಮಯದಲ್ಲಿ, ಸುಮಾರು 10 ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸೋಲು ಕಂಡಿತ್ತು. ಟೀಮ್ ಇಂಡಿಯಾ ಸರಣಿ ಸೋಲುಗಳಿಗೆ ಅನುಭವಿ ಆಟಗಾರರು ಟೀಕೆಗೆ ಗುರಿಯಾಗುತ್ತಲೇ ಇದ್ದರು. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ವೃತ್ತಿ ಜೀವನದ ಬಗ್ಗೆ ಹಲವು ಪ್ರಶ್ನೆಗಳು ಸಹ ಎದ್ದಿವೆ. ಮಾಧ್ಯಮ ವರದಿಗಳ ಪ್ರಕಾರ ಬಿಸಿಸಿಐ ಚೇಸಿಂಗ್ ಸ್ಟಾರ್‌ಗೂ ಖಡಕ್ ಎಚ್ಚರಿಕೆ ನೀಡಿದೆ.
ಫಾರ್ಮ್ ಕಂಡುಕೊಳ್ಳಿ
ವಿರಾಟ್ ಕೊಹ್ಲಿ ರಣಜಿ ಟ್ರೋಫಿಯಲ್ಲಿ ಆಡದಿದ್ದರೆ, ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಬಿಸಿಸಿಐ ವಿರಾಟ್ ಕೊಹ್ಲಿ ರಣಜಿ ಟ್ರೋಫಿಯಲ್ಲಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸುವಂತೆ ತಿಳಿಸಿದೆ. ಅವರು ರಣಜಿ ಪಂದ್ಯವನ್ನು ಆಡದೇ ಇದ್ದಲ್ಲಿ ಇವರನ್ನು ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಕೈಬಿಡಬಹುದು. ರಣಜಿ ಟ್ರೋಫಿಯಲ್ಲಿ ದೆಹಲಿ ತಂಡವು ಮುಂದಿನ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.
ಮುಂಬರು ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಆಟಗಾರರು ಹೇಗೆ ಪ್ರದರ್ಶನ ನೀಡುತ್ತಾರೆ ಎಂದು ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications