Virender Sehwag: ವೀರೇಂದ್ರ ಸೆಹ್ವಾಗ್, ಆರತಿ ಎರಡು ದಶಕದ ದಾಂಪತ್ಯದಲ್ಲಿ ಸುಂಟರಗಾಳಿ
ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. 20 ವರ್ಷ ದಾಂಪತ್ಯ ಜೀವನ ನಡೆಸಿದ ವೀರೇಂದ್ರ ಸೆಹ್ವಾಗ್, ಆರತಿ ಅಹ್ಲಾವತ್ ಅವರು ಕಳೆದ ಕೆಲವು ದಿನಗಳಿಂದ ಪ್ರತೇಕವಾಗಿ ಇರುತ್ತಿದ್ದಾರೆ. ಇವರಿಬ್ಬರು 2004ರಲ್ಲಿ ಮದುವೆ ಆಗಿದ್ದರು. ವರದಿಗಳ ಪ್ರಕಾರ ವೀರೂ ಹಾಗೂ ಅವರ ಪತ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಇವರಿಬ್ಬರು ಶೀಘ್ರದಲ್ಲೇ ಬೇರೆಯಾಗಲಿದ್ದಾರೆ.
ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ 2 ದಶಕಗಳ ಸಂಸಾರ ನಡೆಸಿದ ಬಳಿಕ ಸೆಹ್ವಾಗ್ ದಂಪತಿಗಳು ಬೇರೆಯಾಗುತ್ತಿದ್ದಾರೆ. ಕುಟುಂಬದ ಆಪ್ತ ಮೂಲಗಳು ಹೇಳುವಂತೆ ಇವರಿಬ್ಬರೂ ಬಹುದಿನಗಳಿಂದ ಬೇರೆ ಬೇರೆ ಆಗಿ ಇರುತ್ತಿದ್ದಾರೆ. ಇವರಿಬ್ಬರು ವಿಚ್ಛೇಧನಕ್ಕೆ ಮುಂದಾಗುವ ಸಾಧ್ಯತೆ ಇದೆ. ಈ ದಂಪತಿಗೆ ಆರ್ಯವೀರ್ ಹಾಗೂ ವೇದಾಂತ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿನ ಬೆಳವಣಿಗೆಗಳು ಇಬ್ಬರ ನಡುವಿನ ಅಂತರ ಹೆಚ್ಚಿರುವುದನ್ನು ಸೂಚಿಸುತ್ತವೆ ಎಂದು ವರದಿ ಸೂಚಿಸುತ್ತಿವೆ.

ವೀರೇಂದ್ರ ಸೆಹ್ವಾಗ್ ಈ ಮೊದಲು ದೀಪವಾಳಿ ಶುಭಾಶಯ ಕೋರಿದಾಗ ತಮ್ಮ ತಾಯಿ, ಮಕ್ಕಳ ಫೋಟೋ ಹಂಚಿಕೊಂಡಿದ್ದರು. ಅಲ್ಲದೆ ಅವರು ತಮ್ಮ ಪತ್ನಿಯ ಉಲ್ಲೇಖವನ್ನು ಆ ವೇಳೆಯೂ ಮಾಡಿರಲಿಲ್ಲ ಎಂದು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ. ಇದಾದ ಬಳಿಕ ಇವರಿಬ್ಬರೂ ಬೇರೆ ಯಾಗಿರ ಬಹುದು ಎಂಬ ಊಹಾಪೋಹಗಳ ಹರಿದಾಡಲು ಆರಂಭಿಸಿದವು. ಇತ್ತೀಚಿಗೆ ವೀರೂ ದೇವಸ್ಥಾನಕ್ಕೆ ಹೋಗಿದ್ದ ಫೋಟೋವನ್ನು ಶೇರ್ ಮಾಡಿದ್ದರು. ಆದರೆ ಅದರಲ್ಲೂ ಪತ್ನಿಯ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ.
ಭೇಟಿಯಾಗಿದ್ದು ಯಾವಾಗ?
ವೀರೂ ಅವರ ಪತ್ನಿ ಆರತಿ ದೆಹಲಿ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಮಾಡಿದ್ದಾರೆ. ಇವರಿಬ್ಬರ ಲವ್ ಸ್ಟೋರಿ 2000ರಲ್ಲಿ ಆರಂಭವಾಯಿತು. ಅಲ್ಲದೆ 2004ರಲ್ಲಿ ವೀರೂ ಹಾಗೂ ಆರತಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಇದೆಲ್ಲದರ ನಡುವೆಯೂ, ವೀರೇಂದ್ರ ಸೆಹ್ವಾಗ್ ತಮ್ಮ ವೈಯಕ್ತಿಕ ಜೀವನವನ್ನು ಬಹಳ ಖಾಸಗಿಯಾಗಿ ಇಟ್ಟುಕೊಂಡಿದ್ದರು. ಇಂತಹ ಪರಿಸ್ಥಿತಿಯಲ್ಲಿ, ಸೆಹ್ವಾಗ್ ಅಥವಾ ಆರತಿಯಿಂದ ಯಾವುದೇ ಹೇಳಿಕೆ ಬರುವವರೆಗೂ, ವಿಚ್ಛೇದನದ ಈ ವದಂತಿ ಮುಂದುವರಿಯುತ್ತದೆ.
ವೀರೇಂದ್ರ ಸೆಹ್ವಾಗ್ ಭಾರತ 2007ರಲ್ಲಿ ಟಿ20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯ. ಇವರು 2015ರಲ್ಲಿ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದರು. ಆ ಬಳಿಕ ಅವರು ಕ್ರಿಕೆಟ್ ಸಂಬಂಧಿತ ಬೇರೆ ಬೇರೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications