For Quick Alerts
ALLOW NOTIFICATIONS  
For Daily Alerts
 

ನಿವೃತ್ತಿ ಸುದ್ದಿ ಎಲ್ಲವೂ ಸುಳ್ಳು ಸುದ್ದಿ: ಸೆಹ್ವಾಗ್

By Mahesh

ಬೆಂಗಳೂರು, ಅ.20: ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್​ಮನ್ ವೀರೇಂದ್ರ ಸೆಹ್ವಾಗ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೋಮವಾರ ರಾತ್ರಿಯಿಂದ ಸೆಹ್ವಾಗ್ ನಿವೃತ್ತಿ ಘೋಷಣೆ ಸುದ್ದಿ ಹಬ್ಬಿತ್ತು. ದುಬೈನಲ್ಲಿದ್ದ ಸೆಹ್ವಾಗ್ ಅವರು ಭಾರತಕ್ಕೆ ಬಂದು ನಿವೃತ್ತಿ ಘೋಷಿಸುತ್ತಾರೆ ಎನ್ನಲಾಗಿದೆ.

ದುಬೈನಲ್ಲಿ ಹಿರಿಯ ನಾಯಕರ 2020 ಲೀಗ್ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದ್ದ ಸೆಹ್ವಾಗ್ ನಿವೃತ್ತಿ ಘೋಷಿಸಿದ್ದಾರೆ ಎಂಬ ಸುದ್ದಿ ಹರಡಿತ್ತು. ನಿವೃತ್ತಿ ಸುದ್ದಿಯನ್ನು ವೀರೇಂದ್ರ ಸೆಹ್ವಾಗ್ ನಿರಾಕರಿಸಿದ್ದಾರೆ. ನಿವೃತ್ತಿ ಹೊಂದಿದ ಆಟಗಾರರು ಮಾತ್ರ ಮಾಸ್ಟರ್ ಕ್ರಿಕೆಟ್ ಲೀಗ್ ನಲ್ಲಿ ಆಡಲು ಸಾಧ್ಯ ಎಂಬ ಸುದ್ದಿ ಇರುವುದರಿಂದ ಸೆಹ್ವಾಗ್ ನಿವೃತ್ತಿ ಸುದ್ದಿಗೆ ಇನ್ನಷ್ಟು ಬಲ ಬಂದಿತ್ತು.

Virender Sehwag dismisses speculation of his imminent retirement


1999ರಲ್ಲಿ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ವೀರೇಂದ್ರ ಸೆಹ್ವಾಗ್ 251 ಏಕದಿನ ಪಂದ್ಯವಾಡಿದ್ದು, 8273 ರನ್ ಗಳಿಸಿದ್ದಾರೆ. 2002ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಸೆಹ್ವಾಗ್ 104 ಟೆಸ್ಟ್ ಪಂದ್ಯಗಳಲ್ಲಿ 8586 ರನ್ ಗಳಿಸಿದ್ದು, 2 ಬಾರಿ 300ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. 19 ಟಿ20 ಪಂದ್ಯವಾಡಿರುವ ಸೆಹ್ವಾಗ್ 394 ರನ್ ಗಳಿಸಿದ್ದಾರೆ. ಜತೆಯಲ್ಲೇ ಟೆಸ್ಟ್​ನಲ್ಲಿ 40 ಮತ್ತು ಏಕದಿನ ಪಂದ್ಯಗಳಲ್ಲಿ 96 ವಿಕೆಟ್ ಪಡೆದಿದ್ದಾರೆ.

ಸೆಹ್ವಾಗ್ 2013ರ ಮಾರ್ಚ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೈದರಾಬಾದ್​ನಲ್ಲಿ ಕೊನೆಯ ಟೆಸ್ಟ್ ಪಂದ್ಯವಾಡಿದ್ದರು. 2013ರ ಜನವರಿಯಲ್ಲಿ ಪಾಕಿಸ್ತಾನದ ವಿರುದ್ಧ ಕೊನೆಯ ಏಕದಿನ ಪಂದ್ಯವಾಡಿದ್ದ ಸೆಹ್ವಾಗ್ 2012ರಲ್ಲಿ ಟಿ20ಯಿಂದ ಹೊರಗುಳಿದಿದ್ದರು. ಈಗ ಮಾಸ್ಟರ್ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+