ಮಗನಿಗೆ ಫೆರಾರಿ ಆಫರ್ ನೀಡಿದ ದೆಹಲಿ ನವಾಬ ಸೆಹ್ವಾಗ್
ನವದೆಹಲಿ, ಡಿ.03: ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ತಮ್ಮ ಮಗನಿಗೆ ಫೆರಾರಿ ಕಾರು ಉಡುಗೊರೆ ಆಫರ್ ನೀಡಿದ ಕಥೆಯನ್ನು ಹೇಳಿಕೊಂಡಿದ್ದಾರೆ. 319ರನ್ ಸ್ಕೋರ್ದಾಖಲೆ ಮುರಿದರೆ ದುಬಾರಿ ಕಾರು ನಿಮ್ಮ ಮುಂದೆ ನಿಲ್ಲಿಸುತ್ತೇನೆ ಎಂದು ಸೆಹ್ವಾಗ್ ಅವರು ತಮ್ಮ ಮಕ್ಕಳಿಗೆ ಹೇಳಿದ್ದಾರೆ.
ಆಕ್ಟೋಬರ್ ತಿಂಗಳಿನಲ್ಲಿ ನಿವೃತ್ತಿ ಹೊಂದಿದ ಸೆಹ್ವಾಗ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ ಆತ್ಮೀಯವಾಗಿ ಸನ್ಮಾನಿಸಿತು. ರಣಜಿಯಲ್ಲಿ ದೆಹಲಿ ತೊರೆದು ಹರ್ಯಾಣ ಸೇರಿರುವ ಸೆಹ್ವಾಗ್ ಗೆ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಬಂದಿದ್ದು ತವರಿಗೆ ಮರಳಿದ ಅನುಭವ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಗುರುವಾರ ಆರಂಭಗೊಂಡಿದೆ. ಇದಕ್ಕೂ ಮುನ್ನ ಸೆಹ್ವಾಗ್ ಅವರನ್ನು ಬಿಸಿಸಿಐ ಸನ್ಮಾನಿಸಿದೆ. []
37 ವರ್ಷ ವಯಸ್ಸಿನ ಸೆಹ್ವಗ್ ಅವರ ಸನ್ಮಾನ ಸಮಾರಂಭಕ್ಕೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಸಾಕ್ಷಿಯಾದರು. ಎಬಿ ಡಿ ವಿಲಿಯರ್ಸ್ ಅವರು ಸೆಹ್ವಾಗ್ ಹಾಗೂ ಅವರ ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡರು.
ಸ್ಟಾರ್ ಸ್ಫೋರ್ಟ್ಸ್ ಟಿವಿ ಜೊತೆ ಮಾತನಾಡಿದ ಸೆಹ್ವಾಗ್ ಅವರು 'ಫೆರಾರಿ ಕಥೆ' ಹೇಳಿದರು. ನನ್ನ ಮಕ್ಕಳಾದ ಆರ್ಯವೀರ್ ಹಾಗೂ ವೇದಾಂತ್ ಅವರು ನನ್ನ 319 ರನ್ ದಾಖಲೆಯನ್ನು ಮುರಿದರೆ ಫೆರಾರಿ ಕಾರು ಕೊಡಿಸುವುದಾಗಿ ಆಫರ್ ನೀಡಿದ್ದೇನೆ ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ಆಡುತ್ತಾ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಮಾಡಿದ ದಾಖಲೆ(319ರನ್) ಸೆಹ್ವಾಗ್ ಅವರ ಹೆಸರಿನಲ್ಲಿದೆ. 2008ರಲ್ಲಿ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ದಾಖಲೆ ಬರೆದಿದ್ದರು. ಇದರ ಜೊತೆಗೆ ಭಾರತ ಟಾಪ್ 3 ಶ್ರೇಷ್ಠ ಪ್ರದರ್ಶನಗಳು ಕೂಡಾ ಸೆಹ್ವಾಗ್ ಹೆಸರಿನಲ್ಲಿದೆ. 319, 309 ಹಾಗೂ 293ರನ್. ಜೊತೆಗೆ ತ್ರಿಶತಕ ಬಾರಿಸಿದ ಭಾರತದ ಏಕೈಕ ಆಟಗಾರರಾಗಿದ್ದಾರೆ.
ಐಪಿಎಲ್ 2014ರ ವೇಳೆಯಲ್ಲಿ ಮಗನಿಗೆ ನೀಡಿದ ಭರವಸೆಯಂತೆ ಕಿಂಗ್ಸ್ XI ಪಂಜಾಬ್ ಪರ ಆಡುತ್ತಾ ಶತಕ ಬಾರಿಸಿದ್ದರು.
ನಿಮ್ಮಪ್ಪ ಸ್ಕೋರ್ ಮಾಡುತ್ತಿಲ್ಲವೆಂದು ನನ್ನ ಮಕ್ಕಳ ಗೆಳೆಯರು ಅವರನ್ನು ರೇಗಿಸುತ್ತಿದ್ದರಂತೆ. ಇನ್ನೂ ಸಮಯವಿದೆ, ಪಂದ್ಯಗಳಿವೆ ತಾಳ್ಮೆಯಿಂದ ಕಾಯುತ್ತಿರಿ ನಾನು ಶತಕ ಬಾರಿಸುತ್ತೇನೆ ಎಂದಿದ್ದೆ. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ವಿರುದ್ಧ 28 ಎಸೆತಗಳಲ್ಲಿ 122ರನ್ ಚೆಚ್ಚಿದ್ದು ಮಕ್ಕಳಿಗೆ ಹಾಗೂ ನನಗೆ ಖುಷಿ ಕೊಟ್ಟಿತು ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications